
ಒಮ್ಮೆ ವಾರ್ಷಿಕ ಅವಲೋಕನಕ್ಕಾಗಿ ಒಂದು ದೊಡ್ಡ ಆಲದ ಮರದ ಕೆಳಗೆ ಪಕ್ಷಿಗಳ ಸಭೆ ನಿಗದಿಯಾಗಿತ್ತು. ಬಹುತೇಕ ಪಕ್ಷಿಗಳು ನಿಗದಿತ ಸಮಯಕ್ಕೆ ತುಂಬಾ ಮುಂಚೆ ಬಂದು ಹಾಜರಾಗಿದ್ದ ಕಾರಣ ಅನೇಕ ಪಕ್ಷಿಗಳು ತಮ್ಮ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ್ದವು. ಕೋಗಿಲೆಯು ತನ್ನ ಮಧುರ ಕಂಠದಿಂದ ಎಲ್ಲರನ್ನೂ ರಂಜಿಸಿತು. ನವಿಲು ಅದ್ಭುತವಾಗಿ ನೃತ್ಯ ಮಾಡಿತು. ಟರ್ನ್ ಪಕ್ಷಿಯಂತೂ ಎಲ್ಲೂ ಕೂಡ ಕೂಡದೆ ತನ್ನ ಹಾರುವಿಕೆ ಸಾಮರ್ಥ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿತು. […]