
ಊರಿನ ಎಲ್ಲ ಬಿಸಿಬಿಸಿ ವರ್ತಮಾನ, ಬೆಳ್ಳಂಬೆಳಗ್ಗೆ ಉಪ್ಪಿಟ್ಟಿಗೆ ಹಾಕುವ ಉಳ್ಳಾಗಡ್ಡಿ ಒಗ್ಗರಣೆಯೊಂದಿಗೆ ಈರವ್ವಕ್ಕಳ ಬಾಣಲೆಗೆ ಬಂದು ಬೀಳುತ್ತಿದ್ದವು. ಉದ್ರಿ–ಬಾಕಿ ಉಳಿಸಿಕೊಂಡ ಕೆಲ ಬಾಯಿ ಚಪಲಿಗರು ಈಕೆಗೆ ನಿಷ್ಠೆಯ ಹನುಮನಂತಾದರು. “ರೊಕ್ಕ ಎಲ್ಲಿ ಹೊಕ್ಕೈತಿ! ನಾಳೆ ನಾಡಿದ್ದು ಕೊಡು ಸಾಕು” ಎನ್ನುತ್ತಿದ್ದ ಈರವ್ವಕ್ಕಗ ‘ಏನು ಬೇಕು’ ಎಂಬುದು ಅವರಿಗೆ ಗೊತ್ತಾಗಿತ್ತು; ಊರಿನ ಮಾಜಿ ಅಧ್ಯಕ್ಷ ನೀಲಕಂಠಪ್ಪನ ಉಸಾಬರಿ ಈರಮ್ಮಗ ಬೇಕು. ಹೊಸಹೊಸ ಸುದ್ದಿ ಕೊಟ್ರ ಒಂದು ಒಗ್ಗರಣೆ ಫ್ರೀ. ಅಂಥ ಒಂದು ಸಿಹಿಪಾಕದಂತಹ ಸುದ್ದಿ: ‘ನೀಲಕಂಠಗ ಸಕ್ರಿರೋಗ ಹತ್ತಿ, […]