
ಈಚೆಗೆ ಬಂಗ್ಲಾದೇಶದ ಪ್ರಧಾನಿಯಾಗಿ ಐದನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಶೇಕ್ ಹಸೀನಾ ಅವರಿಗೆ ೫೨ ವರ್ಷಗಳ ಹಿಂದೆ ಜನವರಿ ೧೨, ೧೯೭೨ರಂದು ಅವರ ತಂದೆ ಹಾಗೂ ಬಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜೀಬುರ್ ರೆಹಮಾನ್ ಅವರು ಹೊಸದಾಗಿ ರಚನೆಯಾದ ಸ್ವತಂತ್ರ ದೇಶದ ಮೊದಲ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ನೆನಪಾಗಿರಲೇಬೇಕು. ತನ್ನ ದೇಶಬಾಂಧವರು ‘ಬಂಗಬಂಧು’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಮುಜೀಬ್ ಅವರು ಬಂಗಾಳಿ ಮಾತನಾಡುತ್ತಿದ್ದ ತನ್ನ ಜನರನ್ನು ಪಶ್ಚಿಮ ಪಾಕಿಸ್ತಾನೀಯರ ಆಳ್ವಿಕೆಯ ಸಂಕೋಲೆಯಿಂದ ಬಿಡುಗಡೆ ಮಾಡಿದ್ದಷ್ಟೇ ಅಲ್ಲ; ಹೊಸದಾಗಿ […]