ಹಲವು ಜನ್ಮಗಳ ನಂತರ ಬರುವ ಮಾನವಜನ್ಮ ಅತಿ ಅಮೂಲ್ಯ ಎನ್ನುತ್ತಾರೆ ತತ್ತ್ವಜ್ಞಾನಿಗಳು. ಅಂತಹ ಅಮೂಲ್ಯವಾದ ಮಾನವಜನ್ಮವನ್ನು ಅತ್ಯಂತ ಸಮರ್ಪಕವಾಗಿ ದೇಶಕ್ಕೆ ಸಮರ್ಪಿಸಿದ ವಿರಳ ವ್ಯಕ್ತಿಗಳಲ್ಲಿಯೆ ವಿಶಿಷ್ಟರಾದವರು ದಿ. ಮೈ.ಚ. ಜಯದೇವ ಅವರು. ನನಗೆ ಮೈಸೂರಿನ ಚನ್ನಬಸಪ್ಪ ಜಯದೇವ ಅವರ ಪರಿಚಯವಾದದ್ದು ಈಗ್ಗೆ ಮೂವತ್ತು ವರುಷಗಳ ಹಿಂದೆ, ಅವರು ತಮ್ಮ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಲು ನನ್ನ ಹತ್ತಿರ ಬಂದಾಗ. ಅಂದಿನಿಂದ ಇಂದಿನವರೆಗೂ ಅವರಿಗೆ ನಾನು ವೈದ್ಯಳಾಗಿರುವುದಕ್ಕಿಂತ ಅವರ ಅನುಯಾಯಿ ಆಗಿದ್ದದ್ದೇ ಹೆಚ್ಚು. ಪಿತೃಸಮಾನರಾದ ಅವರಿಂದ ನಾನು ಕಲಿತದ್ದು […]




