ಉತ್ಥಾನ ಮಾರ್ಚ್ 2017
Month : April-2017 Episode : Author :
Month : April-2017 Episode : Author :
Month : April-2017 Episode : Author :
ವ್ಯಾವಹಾರಿಕ ಜಗತ್ತಿನಲ್ಲಿ ದಂಡನೆಯ ಭೀತಿ ಮಾತ್ರ ಸಮಾಜಸ್ವಾಸ್ಥ್ಯಕ್ಕೆ ಪೋಷಕವಾಗಬಲ್ಲದು ಎಂಬುದು ಕಡೆಗಣಿಸಲಾಗದ ತಥ್ಯ. ತಮಿಳುನಾಡಿನ ಈಚಿನ ವಿದ್ಯಮಾನವನ್ನು ಒಂದು ಬಣದ ವಿಜಯವೆನ್ನುವುದಕ್ಕಿಂತ ಪ್ರಜಾಪ್ರಭುತ್ವಪದ್ಧತಿಯ ಪರಾಭವವೆಂದು ವರ್ಣಿಸುವುದೇ ಸೂಕ್ತವಾದೀತೆನಿಸುತ್ತದೆ. ಭ್ರಷ್ಟಾಚಾರಕ್ಕಾಗಿ ಕಾರಾಗೃಹ ಸೇರಿರುವ ಶಶಿಕಲಾ ತಮ್ಮ ಅನುಯಾಯಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮತದಾನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ದುರ್ವರ್ತನಸರಣಿಯು ಅಧಿಕಾರಾಕಾಂಕ್ಷೆ ಎಷ್ಟು ನೀಚ ಸ್ಥಿತಿಗೆ ತಲಪಬಹುದೆಂಬುದನ್ನು ಪುರಾವೆಗೊಳಿಸಿದೆ. ಸಭಾಧ್ಯಕ್ಷರ ಮೇಲೆಯೇ ದಾಳಿ ನಡೆಸಲೂ ಸದಸ್ಯರು ಹಿಂದೆಗೆಯಲಿಲ್ಲ. ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ದೃಢೀಕರಿಸಿದ್ದರೂ ಜನಾಭಿಪ್ರಾಯವನ್ನಾಗಲಿ ಔಚಿತ್ಯವನ್ನಾಗಲಿ ಲೆಕ್ಕಿಸದೆ ಶಶಿಕಲಾ ಬಣ ಎ.ಐ.ಎ.ಡಿ.ಎಂ.ಕೆ. ಪಕ್ಷವನ್ನು […]
Month : April-2017 Episode : Author : ಎಸ್.ಆರ್. ರಾಮಸ್ವಾಮಿ
ಒಂದು ಸಂದರ್ಭ ನೆನಪಾಗುತ್ತಿದೆ, ಬಹುಶಃ ಜಯದೇವ ಅವರ ೬೦ನೇ ವರುಷದ ಜನ್ಮದಿನ ಅಭಿನಂದನ ಕಾರ್ಯಕ್ರಮ ಸಣ್ಣದಾಗಿ ಏರ್ಪಾಡಾಗಿತ್ತು. ಆ ಕಾರ್ಯಕ್ರಮದಲ್ಲಿ ನ. ಕೃಷ್ಣಪ್ಪನವರು ಅಭಿನಂದನ ಭಾಷಣ ಮಾಡಿದರು. ಅವರು ತಮ್ಮ ಮಾತನ್ನು ಆರಂಭಿಸಿದ್ದು ಹೀಗೆ: “ನಮ್ಮ, ಅಂದರೆ ಸಂಘದ ವಲಯದಲ್ಲಿ ಯಾವುದಾದರೂ ತುಂಬಾ ಜಟಿಲವಾದ ಕ್ಲಿಷ್ಟತೆಗಳು ತುಂಬಿದ ಸಮಸ್ಯೆ ಎದುರಾದಾಗ ಅದನ್ನು ಪರಿಹಾರಕ್ಕಾಗಿ ಜಯದೇವ ಅವರಿಗೆ ವಹಿಸೋಣ, ಅವರು ನಿರ್ವಹಿಸಬಲ್ಲರು – ಹೀಗೆ ಒಂದು ಪದ್ಧತಿ ಬೆಳೆದುಬಂದಿದೆ.” ನ. ಕೃಷ್ಣಪ್ಪನವರ ಆ ಮಾತುಎಷ್ಟು ಯಥಾರ್ಥ ಎಂದು ಇಲ್ಲಿರುವವರ […]
Month : April-2017 Episode : Author :
Month : April-2017 Episode : Author : ವಿಜಯಲಕ್ಷ್ಮೀ ಬಾಳೆಕುಂದ್ರಿ
ಹಲವು ಜನ್ಮಗಳ ನಂತರ ಬರುವ ಮಾನವಜನ್ಮ ಅತಿ ಅಮೂಲ್ಯ ಎನ್ನುತ್ತಾರೆ ತತ್ತ್ವಜ್ಞಾನಿಗಳು. ಅಂತಹ ಅಮೂಲ್ಯವಾದ ಮಾನವಜನ್ಮವನ್ನು ಅತ್ಯಂತ ಸಮರ್ಪಕವಾಗಿ ದೇಶಕ್ಕೆ ಸಮರ್ಪಿಸಿದ ವಿರಳ ವ್ಯಕ್ತಿಗಳಲ್ಲಿಯೆ ವಿಶಿಷ್ಟರಾದವರು ದಿ. ಮೈ.ಚ. ಜಯದೇವ ಅವರು. ನನಗೆ ಮೈಸೂರಿನ ಚನ್ನಬಸಪ್ಪ ಜಯದೇವ ಅವರ ಪರಿಚಯವಾದದ್ದು ಈಗ್ಗೆ ಮೂವತ್ತು ವರುಷಗಳ ಹಿಂದೆ, ಅವರು ತಮ್ಮ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಲು ನನ್ನ ಹತ್ತಿರ ಬಂದಾಗ. ಅಂದಿನಿಂದ ಇಂದಿನವರೆಗೂ ಅವರಿಗೆ ನಾನು ವೈದ್ಯಳಾಗಿರುವುದಕ್ಕಿಂತ ಅವರ ಅನುಯಾಯಿ ಆಗಿದ್ದದ್ದೇ ಹೆಚ್ಚು. ಪಿತೃಸಮಾನರಾದ ಅವರಿಂದ ನಾನು ಕಲಿತದ್ದು […]
Month : April-2017 Episode : Author : ದತ್ತಾತ್ರೇಯ ಹೊಸಬಾಳೆ
2017ರ ಫೆಬ್ರುವರಿ 20ನೇ ದಿನಾಂಕದಂದು ನಾನು ಉತ್ತರಪ್ರದೇಶದ ಮೀರತ್ನಲ್ಲಿ ಇದ್ದಾಗ ನನಗೆ ಸುದ್ದಿ ಸಿಕ್ಕಿತು. ಹೆಚ್ಚುಕಡಮೆ ಅನೇಕ ದಿನಗಳಿಂದ ಮನಸ್ಸು ಯಾವ ವಿಷಯಕ್ಕೆ ಗಟ್ಟಿಯಾಗಿತ್ತೋ ಅದೇ ಸಂಗತಿಯನ್ನು ಮೊಬೈಲ್ನಲ್ಲಿ ಬಂದ ಆ ಸಂದೇಶ ತಂದಿತ್ತು: ‘Jayadev is no more.’ ನಾನು ತಕ್ಷಣ ದೆಹಲಿಗೆ ಬಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದೆಯೇ ಎಂದು ನೋಡಿದೆ. ನನ್ನಂತೆ ಅನೇಕರು ಇಲ್ಲಿ ಇರುವವರೂ ಕೂಡಾ ಜಯದೇವ ಅವರ ಅಂತಿಮದರ್ಶನಕ್ಕಾಗಿ ’ಕೇಶವಕೃಪಾ’ಕ್ಕೆ ಬಂದು ಸೇರಿದೆವು. ತದನಂತರ ಪಾರ್ಥಿವಶರೀರವನ್ನು `ಕೇಶವಕೃಪಾ’ದಿಂದ ಮೈಸೂರಿಗೆ ಅಲ್ಲಿನ […]
Month : April-2017 Episode : Author : ಎಚ್ ಮಂಜುನಾಥ ಭಟ್
ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚದಲ್ಲಿ ರುದ್ರಪಟ್ಣಂ ಸಹೋದರರೆಂದು (ರುದ್ರಪಟ್ಣಂ ಬ್ರದರ್ಸ್) ಪ್ರಸಿದ್ಧರಾದ ಆರ್.ಎನ್. ತ್ಯಾಗರಾಜನ್ ಮತ್ತು ಡಾ. ಆರ್.ಎನ್. ತಾರಾನಾಥನ್ ಅವರಿಗೆ ಈ ಕೆಲವು ತಿಂಗಳುಗಳ ಅಂತರದಲ್ಲಿ ದೇಶದ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದವು. ಅವುಗಳೆಂದರೆ ’ಕೇಂದ್ರ ಸಂಗೀತ ನಾಟಕ ಅಕಾಡೆಮಿ’ಯ ಪುರಸ್ಕಾರ ಮತ್ತು ’ಮದ್ರಾಸ್ ಮ್ಯೂಸಿಕ್ ಅಕಾಡೆಮಿ’ಯ ’ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರವನ್ನು ಕಳೆದ ಅಕ್ಟೋಬರ್ನಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರದಾನ ಮಾಡಿದರು. ಕರ್ನಾಟಕ […]
Month : April-2017 Episode : Author : ಡಾ. ಜಯಂತಿ ಮನೋಹರ್
ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರವಾದರೂ, ತಾನು ನೆಚ್ಚಿದ ಆದರ್ಶಗಳತ್ತ ಅವಳು ಇಟ್ಟ ದೃಢ ಹೆಜ್ಜೆಗಳೂ ವಿಶೇಷವಾದ ಆತ್ಮಸ್ಥೈರ್ಯವೂ ಗಮನಸೆಳೆಯುತ್ತವೆ. ಈ ದೃಷ್ಟಿಯಲ್ಲಿ ವಾಲ್ಮೀಕಿಗಳ ’ಸೀತಾಚರಿತ್ರೆ’ಯ ಒಳನೋಟವನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಇಡೀ ರಾಮಾಯಣದ ಒಳಹರಿವಿನಲ್ಲಿ ಕಾಣುವ […]
Month : April-2017 Episode : Author : ಎಂ.ಎಸ್. ನರಸಿಂಹಮೂರ್ತಿ
“ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ.” ಹೋಗಿ ಬಂದವರಿಲ್ಲ, ವರದಿ ತಂದವರಿಲ್ಲ. ಆದರೆ ಮದುವೆಯ ಸಂದರ್ಭದಲ್ಲಿ ಹಾಗೂ ಅನಂತರದ ದಿನಗಳಲ್ಲಿ ಕಾಣಿಸಿಕೊಳ್ಳುವ ಕುಸ್ತಿಪಂದ್ಯಗಳು ಭೂಮಿಯ ಮೇಲೆ ಮಾತ್ರ ನಡೆಯುತ್ತವೆ. ನಾನು ಮತ್ತು ನನ್ನ ಗೆಳೆಯ ವಿಶ್ವ ಒಂದು ಅದ್ಧೂರಿ ಮದುವೆ ಸಮಾರಂಭಕ್ಕೆ ಕಳೆದವ? ಹೋಗಿದ್ದೆವು. ಬಾಗಿಲ ಚಂದದ ಹುಡುಗಿಯರು ಸ್ವಾಗತ ಕೋರಿದರು. ಅವರು ಯಾರೆಂಬುದು ನಮಗೆ ಗೊತ್ತಿರಲಿಲ್ಲ. ಅತ್ಯಂತ ಪರಿಚಯ ಇರುವಂತೆ ಅವರು ನಕ್ಕಾಗ, ವಿಶ್ವ: ’ನೀನು ಲೇಖಕ ಅಲ್ವಾ? ಅದಕ್ಕೋಸ್ಕರ ನಿನ್ನ ನೋಡಿ ನಕ್ಕಿದ್ದಾರೆ’ ಎಂದು ನನಗೆ ರೈಲು […]
Month : April-2017 Episode : Author : ರೋಹಿತ್ ಚಕ್ರತೀರ್ಥ
ನಗು ಒಳ್ಳೆಯದು. ಕೊಂಕು, ಅಸಹ್ಯ, ಅಶ್ಲೀಲ ಹಾಸ್ಯಕ್ಕಿಂತ ಅತ್ಯಂತ ಪರಿಶುದ್ಧವಾದ ಹಾಸ್ಯ ಒಳ್ಳೆಯದು. ದ್ವಂದ್ವಾರ್ಥವನ್ನೇ ಹಾಸ್ಯ ಎಂದು ಸಂಭ್ರಮಿಸುತ್ತಿರುವ, ಅಥವಾ ಭ್ರಮಿಸುತ್ತಿರುವ ನಮಗೆ ಹಾಸ್ಯದ ನಿಜವಾದ ರುಚಿ ಮತ್ತು ಸತ್ತ್ವವನ್ನು ಪರಿಚಯಿಸುವುದು ಮುಲ್ಲಾ ನಾಸಿರುದ್ದೀನನ ಕತೆಗಳು, ಝೆನ್ ಕತೆಗಳು, ಜಗತ್ತಿನ ಜನ ಸಾವಿರಾರು ವರ್ಷಗಳಿಂದ ಕಟ್ಟುತ್ತ ಬಂದಿರುವ ಜನಪದ ಕತೆಗಳು. ಇವು ನಮ್ಮನ್ನು ನಗಿಸುವ ಜತೆಗೆ ಒಂದಷ್ಟು ಜ್ಞಾನವನ್ನೂ ಹನಿಹನಿಯಾಗಿ ಒಸರುತ್ತವೆ. ಕತೆ ಎನ್ನುವುದು ಮನುಷ್ಯನ ವ್ಯಕ್ತಿತ್ವ ಕಟ್ಟುವ ಇಟ್ಟಿಗೆ ಇದ್ದ ಹಾಗೆ. ಕಟ್ಟುವುದೇ ಅವುಗಳ ಕೆಲಸ; […]