“ಆದರೆ ವಿಶ್ವ ನಾನು ಮದುವೆಯಾದಾಗ ಈರೀತಿ ಪರಿಸ್ಥಿತಿ ಇರಲಿಲ್ಲ” ಎಂದೆ.
ಆ ಕಾಲದಲ್ಲಿ ಮೂರುದಿನಗಳ ಮದುವೆ ಮಾಮೂಲು. ಇನ್ನೂ ಕೆಲವು ಮದುವೆಗಳು ಐದುದಿನಗಳ ಕಾಲ ನಡಿಯುತ್ತಿದ್ದವು. ಮದುವೆ ನಿಶ್ಚಯವಾದರೆ ಸಾಕು. ಅನೇಕ ಹತ್ತಿರದ ಬಂಧುಗಳು, ಮಿತ್ರರು ಬಂದು ಆ ಮನೆಯಲ್ಲಿ ಒಂದು ತಿಂಗಳಕಾಲ ಠಿಕಾಣಿ ಹೂಡುತ್ತಿದ್ದರು. ಭತ್ತವನ್ನು ಅಕ್ಕಿ ಮಾಡುವುದು, ಚಕ್ಲಿ ಉಂಡೆ ಮಾಡುವುದರಿಂದ ಹಿಡಿದು, ಅರಿಶಿನದ ಕೊಂಬನ್ನು ಕುಟ್ಟಿ ಪುಡಿಮಾಡುವವರೆಗೆ ಮದುವೆಗೆ ಬೇಕಾದ ಸಮಸ್ತವನ್ನೂ ಮನೆಯ ಎ ಸೇರಿ ಸಿದ್ಧಪಡಿಸುತ್ತಿದ್ದರು.
`ಕೂಡುಕುಟುಂಬಗಳಲ್ಲಿ ಈ ಮದುವೆ ಎಂಬುದು ಒಂದು ಜಾತ್ರೆಯ ಮಾದರಿ ಸಂತಸ ತರುತ್ತಿತ್ತು. ಅಂತಹ ಆನಂದಕ್ಕೆ ಇವತ್ತು ಏನಾಗಿದೆ? ಆ ಸಡಗರ ಎಲ್ಲಿಗೆ ಹೋಗಿದೆ?’ ಎಂದು ಯೋಚನೆ ಮಾಡಿದೆ.
“ಈಗ ಪ್ರತಿಯೊಬ್ಬರೂ ಬ್ಯುಸಿಯಾಗಿರ್ತಾರಪ್ಪ, ಯಾರನ್ನು ಕರೆದರೂ ಬರೋದಿಲ್ಲ” ಎಂದ ವಿಶ್ವ.
“ಹಾಗೇನೂ ಇಲ್ಲ. ನೀವು ಕರೀತಿಲ್ಲ, ಆದ್ದರಿಂದ ಅವರು ಬರ್ತಾ ಇಲ್ಲ ಅ?. ಪ್ರತಿಯೊಂದೂ ಔಟ್ಸೋರ್ಸ್ ಮಾಡಿದರೆ ಗತಿಯೇನು?”
“ನಾಳೆ ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡೋದೂ ಕೂಡ ಔಟ್ಸೋರ್ಸ್ ಮಾಡ್ತೀರೋ ಏನೋ?” ಎಂದೆ.
“ಹೌದು ಅದೂ ಕೂಡ ಆಗಿದೆ” ಎಂದು ವಿಶ್ವ ಹೇಳಿದಾಗ ನನಗೆ ತಬ್ಬಿಬ್ಬು.
“ನಿಜವಾಗಲೂ” ಎಂದೆ.
“ನನ್ನ ಗೆಳೆಯನೊಬ್ಬನ ಅಪ್ಪ ಆಸ್ಪತ್ರೇಲಿ ಇದ್ದ. ಬೇಗ ಗುಣಮುಖವಾಗಿರಿ ಎಂದು ಒಂದು ಬೊಕೆಯನ್ನು ಕಳಿಸಲು ಔಟ್ಸೋರ್ಸ್ನವರಿಗೆ ಹೇಳಿದ್ದ. ಫೋನ್ ಮಾಡಿದಾಗ ಅಂಗಡಿಯವನು ಬೊಕೆಯನ್ನು ತೆಗೆದುಕೊಂಡು ಹೋಗಿ ಅವನು ಹೇಳಿದಂತೆ ಎಂಟನೇ ಬೆಡ್ನ ವ್ಯಕ್ತಿಗೆ ಅದನ್ನು ಕೊಟ್ಟು ಕೈಕುಲುಕಿ ಬಂದ. ಆದರೆ ಅ?ರಲ್ಲಿ ಒಂದು ಯಡವಟ್ಟು ಆಗಿತ್ತು.”
“ಅಂದರೆ…”
“ಆ ವ್ಯಕ್ತಿ ಆ ಆಸ್ಪತ್ರೆಗೆ ಹೋಗುವ ವೇಳೆಗೆ ಎಂಟನೆ ಬೆಡ್ಡಿನಲ್ಲಿ ಇದ್ದ ಇವನ ತಂದೆ ಡಿಸ್ಜಾರ್ಜ್ ಆಗಿ ಮನೆಗೆ ಹೋಗಿದ್ದ. ಅದೇ ಬೆಡ್ಡಿಗೆ ಬೇರೆ ಒಬ್ಬ ಬಂದಿದ್ದ. ಆ ಹೂಗುಚ್ಚವನ್ನು ಅವನು ಸ್ವೀಕರಿಸಿದ. ಬಿಲ್ ಅಂತು ನನ್ನ ಗೆಳೆಯನಿಗೇ ಬಂತು.”
ಕೂಡುಕುಟುಂಬ
ಕೂಡುಕುಟುಂಬಗಳು ಮಾಯ ಆಗಲು ಶುರುವಾದ ಮೇಲೆ ಈ ಔಟ್ಸೋರ್ಸ್ಗೆ ಡಿಮ್ಯಾಂಡ್ ಬಂದಿದೆ. ಇವೆಂಟ್ ಮ್ಯಾನೇಜರ್ಸ್ಗೆ ಹೇರಳವಾಗಿ ಕೆಲಸ ಸಿಗುತ್ತಿದೆ. ಮದುವೆ ಆಗಲಿರುವ ಹುಡುಗ ಹುಡುಗಿಯ ಹೆಸರು ಹೇಳಿ ಹಣ ಕೊಟ್ಟರೆ ಸಾಕು; ಛತ್ರ ಬುಕ್ ಮಾಡಿ, ಅವರಿಗೆ ಬೇಕಾದ ಅಡುಗೆಯನ್ನು ಬಡಿಸಿ, ಅವರನ್ನು ಒಂದು ಒಳ್ಳೆಯ ಕಾರಿನಲ್ಲಿ ಕೂರಿಸಿ, ಅವರು ಹೇಳಿದ ಜಾಗಕ್ಕೆ ಹನಿಮೂನಿಗೆ ಕಳಿಸೋವರೆಗೂ ಫುಲ್ಪ್ಯಾಕೇಜ್ ಇರುತ್ತದೆ.
ನಮಸ್ಕಾರ ಮಾಡಲು ಬಾಡಿಗೆಜನ ಸಿಗುವಾಗ ಹೃದಯಗಳಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹಣ ಒಂದಿದ್ದರೆ ಹೃದಯ ಬೇಕಾಗುವುದಿಲ್ಲ.
ಮದುವೆ, ಮುಂಜಿ, ಉಪನಯನ ಮುಂತಾದ ಸಂದರ್ಭಗಳಲ್ಲಿ ಬಂಧುಗಳು ಒಗ್ಗಟ್ಟಾಗುತ್ತಿದ್ದರು. ಕಷ್ಟಸುಖಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಪರಸ್ಪರ ಸಹಾಯ ದೊರೆಯುತ್ತಿತ್ತು. ಈ ದಿನಗಳಲ್ಲಿ ಅವೆಲ್ಲ ಇಲ್ಲವೇ ಇಲ್ಲ. ಸಿನಿಮಾಥಿಯೇಟರ್ಗೆ ಹೋಗಿ ಬಂದಂತೆ ಹತ್ತಿರದ ಮದುವೆ ಮನೆಗಳಿಗೆ ಹೋಗಿ ಬರುತ್ತೇವೆ. ಇದು ಹೀಗೇ ಮುಂದುವರಿದರೆ ನಮ್ಮ ಸಂಪ್ರದಾಯ ಹಳ್ಳಹಿಡಿಯುತ್ತದೆ ಅಷ್ಟೇ. ಭಾರತೀಯ ಕುಟುಂಬ ಕಲ್ಪನೆ ನಿಂತಿರುವುದೇ ಪರಸ್ಪರ ಪ್ರೀತಿ, ನಂಬಿಕೆ ಸೌಹಾರ್ದತೆ ಎಂಬ ಬುನಾದಿಯ ಮೇಲೆ. ಪ್ರೀತಿ ಸಂಪ್ರದಾಯಗಳನ್ನು ಔಟ್ಸೋರ್ಸ್ ಮಾಡಲು ಹೊರಟವರಿಗೆ ಏನೆಂದು ಹೇಳೋಣ?
ಕೇವಲ ₹ 1000 /- (5 ವರ್ಷಕ್ಕೆ) & 1 ವರ್ಷಕ್ಕೆ – ₹ 220 /-
ಬ್ಯಾಂಕ್ ಖಾತೆ ಮೂಲಕಚಂದಾದಾರರಾಗಿ
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: [email protected]