ವ್ಯಾವಹಾರಿಕ ಜಗತ್ತಿನಲ್ಲಿ ದಂಡನೆಯ ಭೀತಿ ಮಾತ್ರ ಸಮಾಜಸ್ವಾಸ್ಥ್ಯಕ್ಕೆ ಪೋಷಕವಾಗಬಲ್ಲದು ಎಂಬುದು ಕಡೆಗಣಿಸಲಾಗದ ತಥ್ಯ. ತಮಿಳುನಾಡಿನ ಈಚಿನ ವಿದ್ಯಮಾನವನ್ನು ಒಂದು ಬಣದ ವಿಜಯವೆನ್ನುವುದಕ್ಕಿಂತ ಪ್ರಜಾಪ್ರಭುತ್ವಪದ್ಧತಿಯ ಪರಾಭವವೆಂದು ವರ್ಣಿಸುವುದೇ ಸೂಕ್ತವಾದೀತೆನಿಸುತ್ತದೆ. ಭ್ರಷ್ಟಾಚಾರಕ್ಕಾಗಿ ಕಾರಾಗೃಹ ಸೇರಿರುವ ಶಶಿಕಲಾ ತಮ್ಮ ಅನುಯಾಯಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮತದಾನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ದುರ್ವರ್ತನಸರಣಿಯು ಅಧಿಕಾರಾಕಾಂಕ್ಷೆ ಎಷ್ಟು ನೀಚ ಸ್ಥಿತಿಗೆ ತಲಪಬಹುದೆಂಬುದನ್ನು ಪುರಾವೆಗೊಳಿಸಿದೆ. ಸಭಾಧ್ಯಕ್ಷರ ಮೇಲೆಯೇ ದಾಳಿ ನಡೆಸಲೂ ಸದಸ್ಯರು ಹಿಂದೆಗೆಯಲಿಲ್ಲ. ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ದೃಢೀಕರಿಸಿದ್ದರೂ ಜನಾಭಿಪ್ರಾಯವನ್ನಾಗಲಿ ಔಚಿತ್ಯವನ್ನಾಗಲಿ ಲೆಕ್ಕಿಸದೆ ಶಶಿಕಲಾ ಬಣ ಎ.ಐ.ಎ.ಡಿ.ಎಂ.ಕೆ. ಪಕ್ಷವನ್ನು […]
ಯಾರ ಗೆಲವು, ಯಾರ ಸೋಲು?
Month : April-2017 Episode : Author :