ಮುಂಜಾನೆ ಮಡಿಯುಟ್ಟು ಜಿನಸ್ಮರಣೆ ಮಾಡಿ ಚಿಕ್ಕಬೆಟ್ಟದ ಬಂಡೆಯೊಂದರ ಮೇಲೆ ನಿಂತು ಪಕ್ಕದ ದೊಡ್ಡ ಬೆಟ್ಟದ ಕೋಡುಗಲ್ಲಿಗೆ ಬಂಗಾರದ ಬಾಣವನ್ನು ಬಿಡಬೇಕೆಂದು ಕನಸಿನ ಸೂಚನೆ. ಚಾಮುಂಡರಾಯ ಹಾಗೆಯೇ ಮಾಡಿದ. ಬಾಣ ಆ ಬಂಡೆಗೆ ತಾಕಿದೊಡನೆ ಬಾಹುಬಲಿಯ ಶ್ರೀಮುಖ ತೋರಿಕೊಂಡಿತು. ಆಮೇಲೆ ಅವರೆಲ್ಲ ಆ ದೊಡ್ಡಬೆಟ್ಟವನ್ನೇರಿ ಶಿಲ್ಪಿಗಳಿಂದ ಇಡೀ ಮೈಮಾಟವನ್ನು ಬಿಡಿಸಿದರು. ವಿಂಧ್ಯಗಿರಿಯ ಮೇಲೆ ಗೊಮ್ಮಟೇಶ್ವರನ ’ಸುಮನೋಹರ ಭಯಂಕರ’ ಮೂರ್ತಿ ಮೈದಳೆದುದು ಹೀಗೆ. ಗೊಮ್ಮಟೇಶ್ವರನ ಅದ್ಭುತ ಶಿಲ್ಪದ ಹಿನ್ನೆಲೆಯಲ್ಲಿ ಎರಡು ಕಥೆಗಳಿವೆ – ಒಂದು ಆ ಶಿಲ್ಪಕ್ಕೆ ವಸ್ತುವಾದ ಬಾಹುಬಲಿಯದು, […]
ಗೊಮ್ಮಟನ ‘ಅತಿತುಂಗಾಕೃತಿ’
Month : February-2018 Episode : Author : ವಿದ್ಯಾಲಂಕಾರ ಪ್ರೊ|| ಎಸ್.ಕೆ. ರಾಮಚಂದ್ರರಾವ್