
ಸಂಗೀತದ ಆರಂಭ ಎಲ್ಲಿಂದ ಎನ್ನುವ ಪ್ರಶ್ನೆಯನ್ನು ನಾವು ನಮ್ಮ ಮುಂದೆ ಇರಿಸಿಕೊಂಡರೆ: ನಮ್ಮ ಪುರಾಣಗಳ ಪ್ರಕಾರ ಶ್ರೀಕೃಷ್ಣ ದ್ವಾಪರಯುಗದಲ್ಲಿದ್ದ ಎಂಬುದೊಂದು ಕಲ್ಪನೆ. ಸುಮಾರು 5,050 ವರ್ಷಗಳ ಹಿಂದೆ ಕೃಷ್ಣ ಜನಿಸಿದ ಎಂದು ಹೇಳುತ್ತಾರೆ. ಹೀಗೆ 5,000 ವರ್ಷಗಳ ಹಿಂದೆ ಇದ್ದ ಕೃಷ್ಣ ಕೊಳಲು ಊದುತ್ತಿದ್ದ. ಕೊಳಲು ಊದುತ್ತಿದ್ದ ಎಂದರೆ ಹೇಗೆ? ಸುಮ್ಮನೆ ಊದುತ್ತಿದ್ದನಾ ಅಥವಾ ರಾಗಸಹಿತವಾಗಿ ಊದುತ್ತಿದ್ದನಾ? ಕೊಳಲಿನ ನಾದ, ಅಂದರೆ ಸಂಗೀತದ ರಾಗದೊಂದಿಗೆ ಊದುತ್ತಿದ್ದ ಅಂದುಕೊಳ್ಳಬಹುದು. ಅಂದರೆ ಆ ಕಾಲದಿಂದ ಸಂಗೀತ, ನಾಟ್ಯ, ನೃತ್ಯ, ಗಂಧರ್ವರು, […]