
‘ಉತ್ಥಾನ’ ಕಥಾಸ್ಪರ್ಧೆ –೨೦೨೧ ಪ್ರಥಮ ಬಹುಮಾನ ಪಡೆದ ಕಥೆ ಲಾಕ್ಡೌನ್ ಎಂಬ ಬೋನಿನಿಂದ ಹೊರಬಿಟ್ಟ ಚಿರತೆಯಂತೆ ಅರೆದಪ್ಪಿ ಓಡುತ್ತಿದ್ದ ಮಗನನ್ನು ಮಾದೇವಿಯು ಮಾತಿನಿಂದಲೆ ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದಳು. ಎಷ್ಟು ಕೂಗಿದರೂ ತನ್ನ ಮಾತನ್ನೇ ಕೇಳದೆ ಕೈಗೆ ಸಿಗದೆ ಓಡುತ್ತಿದ್ದ ಮಗನನ್ನ ಹಿಡಿಯುವ ಪ್ರಯತ್ನವನ್ನು ಕೊನೆಗೂ ಕೈಚೆಲ್ಲಿದಳು. ಒಂದೇ ಸಮನೇ ಗಂಟಲು ಹರಿಯುವಂತೆ ಕಿರುಚಿಕೊಂಡರೂ ಅದಾವುದನ್ನೂ ಲೆಕ್ಕಿಸದೇ ದೊರೆ ಎಂಬ ಅವಳ ಪುಟ್ಟ ಮಗ ಯಾರ ಕೈಗೂ ಸಿಗದೇ ನಿರ್ಜನವಾಗಿದ್ದ ಥಾರು ರಸ್ತೆಯ ಮೇಲೆ ಓಡುತ್ತಲೇ ಇದ್ದ… […]