ಸಂವಿಧಾನವೆಂದರೆ ವಕೀಲನ ದಸ್ತಾವೇಜಿನ ಬರಿಯ ಹಾಳೆಗಳಲ್ಲ, ಅದು ಚಲಿಸುತ್ತಿರುವ ಜೀವಂತ ವಾಹನ. ಅದರ ಚೈತನ್ಯ ಆ ಕಾಲಘಟ್ಟದ ಚೈತನ್ಯವೂ ಆಗಿರುತ್ತದೆ’’ ಎನ್ನುವ ಡಾ. ಬಿ.ಆರ್. ಅಂಬೇಡ್ಕರ್ರ ಮಾತುಗಳು ಎಷ್ಟು ಅರ್ಥಪೂರ್ಣ ಎಂದರೆ ಪ್ರಸ್ತುತ ಭಾರತ ಆ ಮಾತುಗಳ ಸಾಕ್ಷಾತ್ಕಾರ ಎಂಬಂತೆ ಕಂಗೊಳಿಸುತ್ತಿದೆ. ಹೆಚ್ಚೇನು ದೂರದ ಉದಾಹರಣೆ ಬೇಕಿಲ್ಲ. ಪಕ್ಕದ ಪಾಕಿಸ್ತಾನದಲ್ಲಿ ಈ ಕಂತಿನಲ್ಲಿ ರಾಷ್ಟ್ರಾಧ್ಯಕ್ಷ ಆಗಿದ್ದಾತ ಉಳಿದ ಸಮಯ ಜೈಲಿನಲ್ಲಿ ಕೊಳೆತು ಕಾಲ ಕಳೆಯುತ್ತಾನೆ. ಅಧಿಕಾರವೊಂದು ಕೈತಪ್ಪಿದರೆ ನಸುಕೇರುವ ಮುಂಚೆಯೇ ಊರು ಬಿಡುತ್ತಾನೆ ಅಥವಾ ಜೈಲಿನಲ್ಲಿ ಕೈದಿಯಾಗಿರುತ್ತಾನೆ. […]
ಸಂವಿಧಾನವೆಂಬ ಸಾಹಿತ್ಯ: ಜನಸಾಮಾನ್ಯರ ಅಧಿಕಾರ
Month : February-2024 Episode : Author : ಶಿವಪ್ರಸಾದ್ ಸುರ್ಯ