
ಇದು ಐವತ್ತು ವರ್ಷಗಳ ಹಿಂದಿನ ಮಾತು. ಭೌಗೋಳಿಕ ದೃಷ್ಟಿಯಿಂದ ಅತ್ಯಂತ ದೊಡ್ಡ ದೇಶವಾಗಿದ್ದ ಸೋವಿಯತ್ ಒಕ್ಕೂಟ ಮತ್ತು ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯಿದ್ದ ಚೀನಾ ಸೇರಿದಂತೆ, ಪ್ರಪಂಚದ ಮೂರನೇ ಒಂದಕ್ಕಿಂತಲೂ ಹೆಚ್ಚಿನ ಭೂಭಾಗದ ಮೇಲೆ ಕೆಂಪುಧ್ವಜ ಹಾರಾಡುತ್ತಿತ್ತು. ಇಡೀ ಸಾಂಸ್ಕೃತಿಕವಲಯ ಕೆಂಪುನೀರಿನಲ್ಲಿ ಅದ್ದಿಹೋಗಿತ್ತು. ಆದಿಶಂಕರರ ಜನ್ಮಭೂಮಿ ಕೇರಳದಲ್ಲಿ ಮತಪೆಟ್ಟಿಗೆಯ ಮೂಲಕ ಕಮ್ಯೂನಿಸ್ಟರು ಅಧಿಕಾರ ಸಾಧಿಸಿದ್ದರು. ನಮ್ಮ ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷ ಮುಖ್ಯ ವಿರೋಧಪಕ್ಷವಾಗಿತ್ತು ಎಂಬುದಕ್ಕಿಂತ ಹೆಚ್ಚಾಗಿ ಆಡಳಿತಾರೂಢ ಕಾಂಗ್ರೆಸಿನ ದೇಹದಲ್ಲಿ ಆತ್ಮದಂತೆ ಸೇರಿಹೋಗಿತ್ತು. ರೈತ, ಕಾರ್ಮಿಕ, ವಿದ್ಯಾರ್ಥಿ […]