
“ಬೇಕುಗಳು” ನಮ್ಮ ಮನಃಶಾಂತಿಯನ್ನು ಭಂಗಮಾಡುವ ಸಾಮರ್ಥ್ಯ ಹೊಂದಿವೆ. ಇಂತಹ ಬೇಕುಗಳು ಫಲಿಸದಿದ್ದರೂ ನಾವು ನಮ್ಮ ಮನಸ್ಸಿನ ಸ್ತಿಮಿತ ಕಳೆದುಕೊಳ್ಳಬಾರದು. ನಾವು ಯಾವುದೇ “ಬೇಕುಗಳು” ಗುಲಾಮನಾಗದೇ ಅವುಗಳನ್ನು ನಮ್ಮ ಗುಲಾಮನಾಗಿ ಮಾಡಿಕೊಳ್ಳುವ ಮನಃಸ್ಥಿತಿ ತಲಪಲು ಪ್ರಯತ್ನಿಸಬೇಕು. “ಬೇಕುಗಳು” ಬೇಕು; ಆದರೆ ಅವು ನಮ್ಮ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬಾರದು. ಹೌದೋ ಅಲ್ಲವೋ? ನೀವು ಪ್ರತಿದಿನ ಮುಂಜಾನೆ ವಾಕಿಂಗ್ ಹೋಗುವದು ನೀವು ಆರೋಗ್ಯದಿಂದ ಇರಲು. ಅಲ್ಲದೇ ನಿಮ್ಮ ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದು, ಹರಟೆ ಹೊಡೆದು ಸಾಧ್ಯವಾದರೆ […]