ಭಾರತದ ಇತಿಹಾಸದಲ್ಲಿ ಮೊದಲಬಾರಿ ಒಗ್ಗಟ್ಟಾಗಿ ಹಿಂದೂಸಮಾಜವು – ಎಲ್ಲ ಪ್ರದೇಶಗಳಿಂದ, ಸಮಾಜದ ಎಲ್ಲ ಸ್ತರಗಳಿಂದ – ಸನಾತನಧರ್ಮದ ರಕ್ಷಣೆ-ಪುನರುತ್ಥಾನಕ್ಕಾಗಿ ಕೈಜೋಡಿಸಿದ ಪ್ರಸಂಗ ರಾಮಜನ್ಮಭೂಮಿ ಆಂದೋಲನ. ಈ ಪ್ರಮಾಣದ ಒಂದು ಚಳವಳಿ ಹಿಂದೆ ಎಂದೂ ಆಗಿರಲಿಲ್ಲ. ಪ್ರತಿಯೊಂದು ಚಿಕ್ಕ ಊರಿನಿಂದಲೂ ಇಟ್ಟಿಗೆಯನ್ನು ಕ್ರಮವಾಗಿ ಪೂಜಿಸಿ ಶಿಲಾನ್ಯಾಸಕ್ಕಾಗಿ ಕಳಿಸಿಕೊಡಲಾಯಿತು. ಇನ್ನೂ ನೇರವಾಗಿ ಅಯೋಧ್ಯೆಗೆ ಹೋಗಿ ಕೈಜೋಡಿಸಬೇಕು ಎಂದು ಲಕ್ಷಗಟ್ಟಲೆ ಕರಸೇವಕರು (ಹಿಂದಿ ಭಾಷೆಯಲ್ಲಿ ಇದನ್ನ ‘ಕಾರ್ ಸೇವಕ್’ ಎಂದು ಹೇಳುವುದು ವಾಡಿಕೆಯಾಗಿದೆ) ಮುಂದಾದರು. ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂಬ ಸಾಮಾಜಿಕ […]
ರಾಮಜನ್ಮಭೂಮಿ ಆಂದೋಲನದ ಸಾಮಾಜಿಕ ಮಹತ್ತ್ವ
Month : January-2024 Episode : Author : ಹರಿ ರವಿಕುಮಾರ್