ಭಾರತದ ಇತಿಹಾಸದಲ್ಲಿ ಮೊದಲಬಾರಿ ಒಗ್ಗಟ್ಟಾಗಿ ಹಿಂದೂಸಮಾಜವು – ಎಲ್ಲ ಪ್ರದೇಶಗಳಿಂದ, ಸಮಾಜದ ಎಲ್ಲ ಸ್ತರಗಳಿಂದ – ಸನಾತನಧರ್ಮದ ರಕ್ಷಣೆ-ಪುನರುತ್ಥಾನಕ್ಕಾಗಿ ಕೈಜೋಡಿಸಿದ ಪ್ರಸಂಗ ರಾಮಜನ್ಮಭೂಮಿ ಆಂದೋಲನ. ಈ ಪ್ರಮಾಣದ ಒಂದು ಚಳವಳಿ ಹಿಂದೆ ಎಂದೂ ಆಗಿರಲಿಲ್ಲ. ಪ್ರತಿಯೊಂದು ಚಿಕ್ಕ ಊರಿನಿಂದಲೂ ಇಟ್ಟಿಗೆಯನ್ನು ಕ್ರಮವಾಗಿ ಪೂಜಿಸಿ ಶಿಲಾನ್ಯಾಸಕ್ಕಾಗಿ ಕಳಿಸಿಕೊಡಲಾಯಿತು. ಇನ್ನೂ ನೇರವಾಗಿ ಅಯೋಧ್ಯೆಗೆ ಹೋಗಿ ಕೈಜೋಡಿಸಬೇಕು ಎಂದು ಲಕ್ಷಗಟ್ಟಲೆ ಕರಸೇವಕರು (ಹಿಂದಿ ಭಾಷೆಯಲ್ಲಿ ಇದನ್ನ ‘ಕಾರ್ ಸೇವಕ್’ ಎಂದು ಹೇಳುವುದು ವಾಡಿಕೆಯಾಗಿದೆ) ಮುಂದಾದರು. ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂಬ ಸಾಮಾಜಿಕ ಕಳಕಳಿ. ಸಾಮಾಜಿಕ ಜಾಲತಾಣ (ಸೋಶಿಯಲ್ ಮೀಡಿಯಾ) ಇಲ್ಲದಿದ್ದ ಕಾಲದಲ್ಲಿ ನಡೆದ ನಿಜವಾದ ಸಂಘಟನೆ. ಏಳೆಂಟು ಶತಮಾನಗಳಿಂದ ಶೋಷಣೆಗೊಳಗಾದ ಹಿಂದೂಸಮಾಜವು ಎದ್ದು ಘೋಷಣೆ ಮಾಡಿದ ಪ್ರಕ್ರಿಯೆ.
ಸಹಸ್ರಾಬ್ದಗಳು ಕಳೆದಿವೆ. ಜಗತ್ತಿನ ಎಷ್ಟೋ ಪುರಾತನ ನಾಗರಿಕತೆಗಳು ಐತಿಹ್ಯಗಳಲ್ಲಿ, ವಸ್ತುಸಂಗ್ರಹಾಲಯಗಳಲ್ಲಿ ಮಾತ್ರ ಉಳಿದುಕೊಂಡಿವೆ. ಸನಾತನ ಭಾರತೀಯ ಸಂಸ್ಕೃತಿಯ ಕಥೆಯೇ ಬೇರೆ. ಅದು ಕ್ಷೀಣವಾಗದೆ ಬ್ರಾಹ್ಮ-ಕ್ಷಾತ್ರದ ಯುಗಳ ಬಲದಿಂದ ವೃದ್ಧಿಯಾಗುತ್ತಲೇ ಬರುತ್ತಿದೆ. ಎರಡು ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಭಾರತದ ಮೇಲೆ ಪರಕೀಯ ದಾಳಿಗಳು ನಡೆದಿವೆ. ಹೆಜ್ಜೆ-ಹೆಜ್ಜೆಗೂ ಅದನ್ನು ಎದುರಿಸಿದ ಶ್ರೇಯಸ್ಸು ಹಿಂದೂ ಜನಾಂಗದ್ದು. ಎಷ್ಟೇ ಘೋರವಾದ ಪರಿಸ್ಥಿತಿ ಇದ್ದರೂ ಕೆಲವರಾದರೂ ವಿರೋಧ ಮಾಡುತ್ತಲೇ ಬಂದಿದ್ದಾರೆ.
ಆದರೂ ಐದು ಶತಮಾನಗಳ ಕಾಲ ಭಾರತದ ವಿಶಾಲ ಭೂಭಾಗಗಳು ಇಸ್ಲಾಮಿನ ಬರ್ಬರ ಪ್ರಭುತ್ವದ ವಶಕ್ಕೆ ಸಿಕ್ಕಿಕೊಂಡಿದ್ದವು. ತದನಂತರ ಬೃಹದ್ ಭಾರತದ ಮೇಲೆ ಎರಡು ಶತಮಾನಗಳ ಅವಧಿ ಬ್ರಿಟಿಷರು ಆಳ್ವಿಕೆ-ದಬ್ಬಾಳಿಕೆ ನಡೆಸಿದರು. ಸ್ವಾತಂತ್ರ್ಯದ ನಂತರ ‘ಅಲ್ಪಸಂಖ್ಯಾತ ಬಾಂಧವ’ವೆನಿಸಿದ ಕಾಂಗ್ರೆಸ್ ಪಕ್ಷವು ಸರ್ಕಾರ ನಡೆಸಿತು. ಈ ಕಾಲಘಟ್ಟದಲ್ಲಿ ಹಿಂದೂಧರ್ಮಕ್ಕೆ ಇನ್ನಷ್ಟು ಪೆಟ್ಟು ಬೀಳಲು ಆರಂಭವಾಯಿತು. ೧೯೬೦ರ ದಶಕದಲ್ಲಿ ಹಿಂದೂಸಮಾಜವು ಹಿಂದಿಗಿಂತ ಹೆಚ್ಚು ನಿರ್ಣಯಾತ್ಮಕವಾಗಿ ಸಂಘಟಿತವಾಗತೊಡಗಿತು. ೧೯೮೦ರ ದಶಕದಲ್ಲಿ ಅಶೋಕ್ ಸಿಂಘಲ್ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಅಯೋಧ್ಯೆ ರಾಮಜನ್ಮಭೂಮಿ ಆಂದೋಲನವು ಹೆಚ್ಚು ಶಕ್ತವಾಗಿ ರೂಪಗೊಂಡಿತು.
ರಾಮಜನ್ಮಭೂಮಿ ಆಂದೋಲನ
ಈಚಿನ ಇತಿಹಾಸದಲ್ಲಿ ಮೊದಲಬಾರಿ ಒಗ್ಗಟ್ಟಾಗಿ ಹಿಂದೂಸಮಾಜವು – ಎಲ್ಲ ಪ್ರದೇಶಗಳಿಂದ, ಸಮಾಜದ ಎಲ್ಲ ಸ್ತರಗಳಿಂದ – ಸನಾತನಧರ್ಮದ ರಕ್ಷಣೆ-ಪುನರುತ್ಥಾನಕ್ಕಾಗಿ ಕೈಜೋಡಿಸಿದ ಪ್ರಸಂಗ ರಾಮಜನ್ಮಭೂಮಿ ಆಂದೋಲನ. ಈ ಪ್ರಮಾಣದ ಒಂದು ಚಳವಳಿ ಪ್ರಾಯಶಃ ಹಿಂದೆ ಎಂದೂ ಆಗಿರಲಿಲ್ಲ. ಪ್ರತಿಯೊಂದು ಚಿಕ್ಕ ಊರಿನಿಂದಲೂ ಇಟ್ಟಿಗೆಯನ್ನು ಕ್ರಮವಾಗಿ ಪೂಜಿಸಿ ಶಿಲಾನ್ಯಾಸಕ್ಕಾಗಿ ಕಳಿಸಿಕೊಡಲಾಯಿತು. ಇನ್ನೂ ನೇರವಾಗಿ ಅಯೋಧ್ಯೆಗೆ ಹೋಗಿ ಕೈಜೋಡಿಸಬೇಕು ಎಂದು ಲಕ್ಷಗಟ್ಟಲೆ ಕರಸೇವಕರು (ಹಿಂದಿ ಭಾಷೆಯಲ್ಲಿ ಇದನ್ನ ‘ಕಾರ್ ಸೇವಕ್’ ಎಂದು ಹೇಳುವುದು ವಾಡಿಕೆಯಾಗಿದೆ) ಸಿದ್ಧಗೊಂಡರು. ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂಬ ಸಾಮಾಜಿಕ ಕಳಕಳಿ. ಸಾಮಾಜಿಕ ಜಾಲತಾಣ (ಸೋಶಿಯಲ್ ಮೀಡಿಯಾ) ಇಲ್ಲದಿದ್ದ ಕಾಲದಲ್ಲಿ ನಡೆದ ಅಪೂರ್ವ ಸಂಘಟನೆ. ಏಳೆಂಟು ಶತಮಾನಗಳಿಂದ ಶೋಷಣೆಗೊಳಗಾಗಿದ್ದ ಹಿಂದೂಸಮಾಜವು ಎದ್ದು ತನ್ನ ಅಸ್ಮಿತೆಯನ್ನು ಅಸಂದಿಗ್ಧವಾಗಿ ಘೋಷಣೆ ಮಾಡಿದ ಪ್ರಕ್ರಿಯೆ ಇದಾಯಿತು.
ಅಕ್ರಮ ಕಟ್ಟಡದ ನಿರ್ಣಾಮ
೧೬ನೆಯ ಶತಮಾನದಲ್ಲಿ ರಾಮಜನ್ಮಸ್ಥಾನ ದೇವಾಲಯವನ್ನು ಕೆಡವಿ ಕಟ್ಟಿದ್ದ ಅಕ್ರಮ ಕಟ್ಟಡ (‘ಬಾಬರಿ ಮಸ್ಜಿದ್’ ಎಂದು ಕುಖ್ಯಾತವಾದದ್ದು) ಹಿಂದೂ ಜನರಿಗೆ ಇಸ್ಲಾಮಿನ ಬರ್ಬರ ದಬ್ಬಾಳಿಕೆಯ ದಿನನಿತ್ಯದ ನೆನಪೋಲೆಯಾಗಿ ಉಳಿದುಕೊಂಡಿತ್ತು. ಆ ದಬ್ಬಾಳಿಕೆಯ ಸಂಕೇತವನ್ನು ೬ನೇ ಡಿಸೆಂಬರ್ ೧೯೯೨ರಂದು ನಿರ್ಣಾಮ ಮಾಡಲಾಯಿತು. ಆ ಅಮೃತಘಳಿಗೆಯನ್ನು ಒಂದು ಸಂಧಿಕಾಲವೆಂದೇ ಕರೆಯಬಹುದು.
೧೯೯೦ರಲ್ಲಿ (ಎರಡು ಬಾರಿ, ಅಕ್ಟೋಬರ್ ೩೦ ಮತ್ತು ನವೆಂಬರ್ ೨) ಮುಲಾಯಂಸಿಂಗ್ ಯಾದವ್ ಸರ್ಕಾರವು ಹಲವಾರು ಅಮಾಯಕ ಕರಸೇವಕರನ್ನು ಗುಂಡು ಹಾರಿಸಿ ಸಾಯಿಸಿತು. ಆದರೂ ಎರಡೇ ವರ್ಷಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಅಯೋಧ್ಯೆ ಸೇರಿದರು. ಹೆಚ್ಚಿನ ಕರಸೇವಕರು ಬರಿಗೈಯಲ್ಲಿ ತಲಪಿದ್ದರು; ಇಂಥವರು ಯಾವ ಯಂತ್ರ, ಯಾವ ಬುಲ್ಡೋಜರನ್ನು ತೆಗೆದುಕೊಂಡು ಬಂದಾರು? ಸಿಕ್ಕಿದ ದೊಣ್ಣೆ-ಕಲ್ಲುಗಳಿಂದಲೇ ಗುಮ್ಮಟಗಳನ್ನು ಉರುಳಿಸಿದರು. ಭುಜಬಲಪರಾಕ್ರಮ ಮತ್ತು ಅಂತಃಸತ್ತ್ವಗಳನ್ನು ಬಿಟ್ಟರೆ ಮೂರನೆಯ ಆಯುಧವಿರಲಿಲ್ಲ. ಆ ಅಕ್ರಮ ಕಟ್ಟಡ ನೆಲಸಮವಾಗುತ್ತಿದ್ದಾಗಲೆ ಹಲವರು ಅದರಲ್ಲಿಯೇ ಬಿದ್ದು ಪ್ರಾಣ ಕಳೆದುಕೊಂಡರು.
ಆಂದೋಲನದ ರಾಜಕೀಯ ಪರಿಣಾಮಗಳು
ವಿಶ್ವ ಹಿಂದೂ ಪರಿಷತ್ತು ಮುಂದೆ ನಿಂತು ನಡೆಸಿದ ಅಯೋಧ್ಯೆ ರಾಮಜನ್ಮಭೂಮಿ ಆಂದೋಲನವು ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯವಾಗಿ ಲಾಭಗಳನ್ನು ನೀಡಿತು. ೧೯೮೪ರಲ್ಲಿ ಲೊಕಸಭೆಯಲ್ಲಿ ೨ ಸೀಟು ಗಳಿಸಿದ್ದ ಭಾ.ಜ.ಪ.ವು ೧೯೮೯ರಲ್ಲಿ ೮೯ ಸೀಟು, ೧೯೯೧ರಲ್ಲಿ ೧೨೧ ಮತ್ತು ೧೯೯೬ರಲ್ಲಿ ೧೮೨ ಸೀಟುಗಳನ್ನು ಗಳಿಸಿತು – ೧೨ ವರ್ಷಗಳಲ್ಲಿ ತೊಂಬತ್ತುಪಟ್ಟು ಬೆಳವಣಿಗೆ! ಈ ಪರಿವರ್ತನಪರ್ವದ ರಾಜಕೀಯೇತರ ಪರಿಣಾಮ ಸರಣಿಯೂ ಗಣನಾರ್ಹ.
ಕರಸೇವಕರ ಮೇಲೆ ಗುಂಡು ಹಾರಿಸಿದ ಮುಲಾಯಂಸಿಂಗ್ ೧೯೯೧ರ ಚುನಾವಣೆಯಲ್ಲಿ ಸೋತರು; ಭಾ.ಜ.ಪ.ವು ಮೊದಲನೆಯ ಬಾರಿ ಉತ್ತರಪ್ರದೇಶದಲ್ಲಿ ಕಲ್ಯಾಣ್ಸಿಂಗ್ ನೇತೃತ್ವದಲ್ಲಿ ಸರ್ಕಾರ ರಚಿಸಿತು.
ಬಾಬರೀ ಅಕ್ರಮ ಕಟ್ಟಡವು ಬಿದ್ದ ಕೂಡಲೇ ಮುಂಬೈಯಲ್ಲಿ ವ್ಯಾಪಕವಾಗಿ ಮತೀಯ ಗಲಭೆಗಳು ನಡೆದವು. ಹಿಂದೂಗಳ ಪರವಾಗಿ ನಿಂತವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮತ್ತು ಶಿವಸೇನೆಯ ‘ಸೈನಿಕರು’. ಇದರ ನೇರ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ೧೯೯೫ರಲ್ಲಿ ಮೊದಲಬಾರಿ ರಾಜ್ಯಸರ್ಕಾರವು ಶಿವಸೇನೆಯ ಕೈಗೆ ಬಂದಿತು. ೧೯೪೭ರಿಂದ ಕಾಂಗ್ರೆಸ್ (ಅಥವಾ ಅದರ ಬೇರೊಂದು ವಿಕೃತ ರೂಪ) ಸರಕಾರಗಳೇ ಮಹಾರಾಷ್ಟ್ರವನ್ನು ನಡೆಸುತ್ತಿದ್ದವ್ತು.
೧೯೯೮ರಲ್ಲಿ ಕೇಂದ್ರಸರ್ಕಾರ ಭಾ.ಜ.ಪ.ದ ವಶಕ್ಕೆ ಬಂದಾಗ, ವಾಜಪೇಯಿಯವರ ನೇತೃತ್ವದಲ್ಲಿ ಪೋಕ್ರಾನ್ ಪರಮಾಣು ಪರೀಕ್ಷೆ ನಡೆದವು. ಭಾರತದ ಕ್ಷಾತ್ರ ತೇಜಸ್ಸಿಗೆ ಬೆಂಬಲ ನೀಡಿದ ವಾತಾವರಣವನ್ನು ತಯಾರು ಮಾಡಿದ್ದ ಘಟನೆ ೬ನೇ ಡಿಸೆಂಬರ್ ೧೯೯೨ರದು ಎಂದರೆ ಅತಿಶಯೋಕ್ತಿಯಾಗದು.
ಯಾವಾಗ ಭಾ.ಜ.ಪ.ವು ರಾಮಮಂದಿರ ವಿಷಯವನ್ನು ಕೈಬಿಟ್ಟಿತೋ, ಆಗ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ವಾಜಪೇಯಿ-ಸಿಂಘಲ್ರ ನಡುವೆ ಹೊಂದಾಣಿಕೆಯ ಕೊರತೆಯಾಯಿತೆಂದೂ ಒಂದು ವಿಶ್ಲೇಷಣೆಯಿದೆ. ಮನಸ್ತಾಪದಿಂದ ಅನಿರೀಕ್ಷಿತ ಅನಾಹುತವಾಯಿತು. ೧೯೯೮-೨೦೦೪ರ ಕಾಲಘಟ್ಟದಲ್ಲಿ ಅಭಿವೃದ್ಧಿಕಾರ್ಯ ಮಾಡಿ ಒಳ್ಳೆಯ ಆಳ್ವಿಕೆ ನಡೆಸಿದರೂ ಸಹ ಚುನಾವಣೆಯಲ್ಲಿ ಪರಾಭವಗೊಳ್ಳಬೇಕಾಯಿತು.
ಇನ್ನು ೨೦೦೪-೨೦೧೪ರ ಕಾಂಗ್ರೆಸ್ಸಿನ ಶಾಸನದ ಕಾಲದಲ್ಲಿ ರಾಮನ ಅಸ್ತಿತ್ವಕ್ಕೆ ಕೈಹಾಕಿ ರಾಮಸೇತುವನ್ನು ನಿರಾಕರಿಸಿ ಆಗಬಾರದ್ದೆಲ್ಲ ಆಯಿತು. ಅನಾದಿಕಾಲದಿಂದ ಶ್ರೀರಾಮನು ಎಲ್ಲ ಆದರ್ಶಗಳ, ಸದ್ಗುಣಗಳ ಮೂರ್ತರೂಪವಾಗಿ ಹಿಂದೂಗಳ ಹೃದಯದಲ್ಲಿ ನೆಲಸಿದ್ದಾನೆ; ಅವನನ್ನೇ ಹೀಯಾಳಿಸಿದ ಜನರಿಂದ ಇನ್ನೇನು ಅಪೇಕ್ಷಿಸಬಹುದು? ಭ್ರಷ್ಟಾಚಾರ, ಭಯೋತ್ಪಾದನೆಯ ಪ್ರಸಂಗಗಳು, ಸೀಮಾ ಭದ್ರತೆಯ ಶೈಥಿಲ್ಯ – ಇವೆಲ್ಲ ನಡೆದವು.
೨೦೧೪ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿಯೂ ಸಹ ರಾಮಜನ್ಮಭೂಮಿ ಆಂದೋಲನದ ಕೊಡುಗೆ ಇದೆ. ೨೦೦೨ನಲ್ಲಿ ಗೋಧ್ರಾ ಗಲಭೆ ಶುರುವಾಗಿದ್ದೇ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರ ಹತ್ಯೆಯಿಂದ. ಮಾಧ್ಯಮದವರು ಗೋಧ್ರಾ ಗಲಭೆಗೆ ಕೊಟ್ಟ ಅನಾವಶ್ಯಕ ದುಷ್ಪ್ರಚಾರವು ನರೇಂದ್ರ ಮೋದಿಯವರನ್ನು ಮನೆಮಾತಾಗಿ ಮಾಡಿತು! ಮೋದಿಯವರು ಪ್ರಧಾನಿಯಾದ ಮೇಲಂತೂ ಭಾರತವು ತ್ರಿವಿಕ್ರಮನಂತೆ ಬೆಳೆಯುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ.
ಆರ್ಥಿಕ ಪರಿಣಾಮಗಳು
೧೯೯೩ರ ಮುಂಬೈ ಕೋಮುಗಲಭೆಗಳ ವೇಳೆ ಮಾರ್ಚ್ ೧೨ರಂದು ಸರಣಿ ಬಾಂಬ್ ಸ್ಫೋಟಗಳಾದವು. ಒಂದೇ ದಿನದಲ್ಲಿ ನೂರಾರು ಜನ ಸಾವಿಗೆ ತುತ್ತಾದರು. ಭಾರತದ ಆರ್ಥಿಕ ರಾಜಧಾನಿಯಾದ ಮುಂಬೈ ಮಹಾನಗರ ನಡುಗಿಹೋಯಿತು. ಈ ಭಯಾನಕ ಪ್ರಸಂಗಗಳನ್ನು ಕಂಡು ಹೆದರಿದ ಹಲವಾರು ಉದ್ಯಮಿಗಳು, ಹೂಡಿಕೆದಾರರು ಬೆಂಗಳೂರು, ಹೈದರಾಬಾದ್ ಇತ್ಯಾದಿ ಊರುಗಳಲ್ಲಿ ಹಣನ್ನು ಹೂಡಲು ಪ್ರಾರಂಭಿಸಿದರು. ಇದರಿಂದ ಸಾಫ್ಟ್ವೇರ್ ಕ್ಷೇತ್ರಕ್ಕೆ ದೊಡ್ಡ ಬೆಂಬಲ ಸಿಕ್ಕಿತು. ೧೯೮೦ರ ದಶಕದಲ್ಲೇ ಶುರುವಾಗಿದ್ದ ಸಾಫ್ಟ್ವೇರ್ ಸರ್ವೀಸಸ್ ಕಂಪೆನಿಗಳು ಚಿಕ್ಕ ರೀತಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರೂ ಸಹ ದೊಡ್ಡ ಪ್ರಮಾಣದ ಹೂಡಿಕೆಯ ಕೊರತೆ ಇತ್ತು. ೧೯೯೩ರ ಮುಂಬೈ ಬಾಂಬ್ ಸ್ಫೋಟಗಳ ನಂತರ ಅದು ಬದಲಾಯಿತು. ಈ ಪರಿವರ್ತನೆಗಳ ಜತೆಯಲ್ಲಿಯೇ ಭಾರತದ ರಫ್ತಿನ ಪ್ರಮಾಣ (ಎಕ್ಸ್ಫೋರ್ಟ್ಸ್) ಏರುತ್ತಹೋಯಿತು.
ರಾಮಜನ್ಮಭೂಮಿ ಆಂದೋಲನದ ಇನ್ನೊಂದು ಆರ್ಥಿಕ ಮಹತ್ತ್ವವು ದೇವಾಲಯ-ತೀರ್ಥಕ್ಷೇತ್ರ ಪ್ರವಾಸೋದ್ಯಮದಲ್ಲಿ ಕಂಡಿತು. ಮುಖ್ಯವಾಗಿ ಯುವಕರಲ್ಲಿ ಪ್ರಾಚೀನ ದೇವಸ್ಥಾನ ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುವ ಅಭಿರುಚಿ ಹೆಚ್ಚಿತು. ಒಂದು ಕಾಲದಲ್ಲಿ ತಿರುಪತಿ, ತಂಜಾವೂರು, ಗುರುವಾಯೂರು, ಉಡುಪಿ, ಉಜ್ಜಯಿನಿ, ವಾರಾಣಸಿ, ವೈಷ್ಣೋದೇವಿ ಎಂಬ ಕೆಲವೊಂದು ದೇವಾಲಯಗಳನ್ನು ಬಿಟ್ಟರೆ ಬೇರೆ ಎಷ್ಟೋ ಕ್ಷೇತ್ರಗಳಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಕಳೆದ ಮೂವತ್ತು ವರ್ಷಗಳಲ್ಲಿ ತೀರ್ಥಯಾತ್ರಿಗಳ ಸಂಖ್ಯೆ ಲಕ್ಷೋಪಲಕ್ಷವಾಗಿ ಬೆಳೆದಿದೆ. ಹಿಂದೂಧರ್ಮದಲ್ಲಿ ಅಭಿಮಾನ ಹೆಚ್ಚಾಗಿದೆ ಎಂಬುದಕ್ಕೆ ಬೇರೆ ಆಧಾರ ಬೇಕೇ?
ಆಂದೋಲನದ ಸಾಂಸ್ಕöÈತಿಕ ಪರಿಣಾಮಗಳು
೧೯ನೇ ಶತಮಾನದಿಂದಲೇ ಪಾಶ್ಚಾತ್ಯ ಶಿಕ್ಷಣದ ಫಲವಾಗಿ ಭಾರತೀಯರಲ್ಲಿ ತಮ್ಮ ಸಂಸ್ಕೃತಿ-ಧರ್ಮ-ಭಾಷೆ-ವೇಷಭೂಷಣಗಳ ಬಗ್ಗೆ ಹೀನಭಾವನೆ ಮೂಡಿತ್ತು. ಕ್ರೈಸ್ತ ಮತಪ್ರಚಾರಕರ ನಿರಂತರ ಪ್ರಯತ್ನಗಳಿಂದ ಹಿಂದೂಗಳಲ್ಲಿ ತಮ್ಮ ದೇವ-ದೇವಾಲಯಗಳ ಬಗ್ಗೆ, ಸಾಂಪ್ರದಾಯಿಕ ಕರ್ಮಗಳ ಬಗ್ಗೆ ಹೀನಭಾವನೆ ಹುಟ್ಟಿತ್ತು. ಬಾಬರೀ ಅಕ್ರಮ ಕಟ್ಟಡ ನೆಲಸಮವಾದಾಗ ಆ ಹೀನಭಾವನೆಗೆ ಬಲವಾದ ಪೆಟ್ಟು ಬಿದ್ದಿತು. ಸನಾತನಧರ್ಮದಲ್ಲಿ ಅಭಿಮಾನ ಹೆಚ್ಚಲು ಅನುವಾಯಿತು.
ಈ ಹೊಸದಾಗಿ ವರ್ಧಿಸಿದ ಹೆಮ್ಮೆಯು ಹಲವಾರು ಕ್ಷೇತ್ರಗಳಲ್ಲಿ ಪ್ರಭಾವ ಬೀರಿತು. ಸಂಸ್ಕೃತ ಮತ್ತು ಪ್ರಾಚೀನ ಶಾಸ್ತ್ರಗಳಲ್ಲಿ ನೂತನ ಅಭಿರುಚಿಯು ಬೆಳೆಯತೊಡಗಿತು. ದೇಶದೆಲ್ಲೆಡೆಯೂ ಗುರುಕುಲ ಪದ್ಧತಿಯಲ್ಲಿ ನಡೆಸುವ ಪಾಠಶಾಲೆಗಳು ಶುರುವಾದವು. ಯೋಗಕ್ಕಂತೂ ಅಂತಾರಾಷ್ಟ್ರೀಯ ಮನ್ನಣೆಯೇ ಸಿಕ್ಕಿತು. ಆಯುರ್ವೇದ, ದೇವಾಲಯ-ತತ್ತ್ವ, ಶಿಲ್ಪಕಲೆ, ಸಂಸ್ಕೃತಕಾವ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಯುತ್ತಲೇ ಇದೆ. ಕೆಲವೊಮ್ಮೆ ಅಂಧಶ್ರದ್ಧೆ ಹಾಗೂ ಅವೈಜ್ಞಾನಿಕ ದುರ್ಲಕ್ಷಣಗಳೂ ಕಂಡುಬರುತ್ತವೆ. ಏನೇ ಆದರೂ ದೇಶಭಕ್ತಿಯಿಂದ ಕೂಡಿದ ಮೂರ್ಖತನ ದೇಶದ್ರೋಹವುಳ್ಳ ಪಾಂಡಿತ್ಯಕ್ಕಿಂತ ಲೇಸು ತಾನೆ!
ಆಂದೋಲನದ ಸಾಮಾಜಿಕ ಪರಿಣಾಮ
ರಾಮಜನ್ಮಭೂಮಿ ಆಂದೋಲನದ ಪ್ರಮುಖ ಪರಿಣಾಮವಾಗಿರುವುದು ಸಾಮಾಜಿಕ ಸ್ತರದಲ್ಲಿ. ಸನಾತನಧರ್ಮ ಮತ್ತು ಪ್ರವಾದಿಮತಗಳ ನಡುವೆ ಇರುವ ತೀವ್ರವಾದ ವ್ಯತ್ಯಾಸಗಳು ಎದ್ದು ತೋರಿಕೊಂಡವು. ಮೀರ್ ಬಾಕೀ ಕಟ್ಟಿಸಿದ ಅಕ್ರಮ ಗುಮ್ಮಟಗಳ ವಿರುದ್ಧ ಹಿಂದೂ ಜನರು ಸಾಮ-ದಾನಾದಿಗಳನ್ನು ಬಳಸಿ ಶಾಂತಿಪೂರ್ವಕ ಪರಿಹಾರವಾಗಲಿ ಎಂದು ದಶಕಗಳುದ್ದಕ್ಕೂ ಪ್ರಯತ್ನಪಟ್ಟಿದ್ದರು. ಬೇರೆ ಯಾವ ದಾರಿಯೂ ತೋರದೆ ಕೊನೆಗೆ ದಂಡೋಪಾಯಕ್ಕೆ ಮುಂದಾದರು. ಗುಮ್ಮಟಗಳನ್ನು ಬೀಳಿಸಿದರು. ಮಾರನೆಯ ದಿನವೇ ಪಾಕಿಸ್ತಾನದಲ್ಲಿ ಮೂವತ್ತು ಹಿಂದೂ ದೇವಾಲಯಗಳನ್ನು ಬುಲ್ಡೋಜರ್ ಬಿಟ್ಟು, ಬೆಂಕಿ ಹಚ್ಚಿ ವಿನಾಶ ಮಾಡಲಾಯಿತು. ನೂರಾರು ಪಾಕಿಸ್ತಾನಿ ಹಿಂದೂಗಳನ್ನು ಹೊರಗೆ ಓಡಿಸಿದರು, ಸಾಯಿಸಿದರು.
ನೆಹರು ಹಾಗೂ ಅವರ ಅನುಚರರು ಕೊಂಡಾಡುತ್ತಿದ್ದ ‘ಗಂಗಾ-ಜಮುನಾ ತೆಹ್ಜೀಬ್’ (‘ಹಿಂದೂ ಮತ್ತು ಮುಸಲ್ಮಾನ ಸಮುದಾಯಗಳು ಗಂಗೆ ಮತ್ತು ಯಮುನೆ ನದಿಗಳಂತೆ ಅನ್ಯೋನ್ಯವಾಗಿಯೇ ಇದ್ದವು’ ಎಂಬ ಮಹಾಮಿಥ್ಯೆ) ಎಷ್ಟು ಟೊಳ್ಳು ಎಂದು ಕ್ಷಣಮಾತ್ರದಲ್ಲಿ ಭಾರತದ ಜನತೆಗೆ ಅರಿವಾಯಿತು. ಭಾರತೀಯ ‘ಸೆಕ್ಯೂಲರಿಜಂ’ ಎಷ್ಟು ಕೃತಕ ಎಂಬುದು ನಿಚ್ಚಳವಾಗಿ ಮನದಟ್ಟಾಯಿತು.
ಬಾಬರೀ ಅಕ್ರಮ ಕಟ್ಟಡ ಬೀಳದೆ ಇದ್ದಿದ್ದರೆ ಅದರ ಕೆಳಗಿರುವ ರಾಮಜನ್ಮಸ್ಥಾನ ದೇವಾಲಯವು ಪ್ರಕಾಶಕ್ಕೇ ಬರುತ್ತಿರಲಿಲ್ಲ. ಉತ್ಖನನದ ಸಾಧ್ಯತೆಯೂ ಇರುತ್ತಿರಲಿಲ್ಲ.
ನೆಹರು ಸಾಕಿದ ಮಾರ್ಕ್ಸ್ವಾದಿ ‘ಇತಿಹಾಸಕಾರರು’ ಕಾಂಗ್ರೆಸ್ ಆಡಳಿತದಲ್ಲಿ ರಾಜಾರೋಷವಾಗಿ ತಮಗೆ ಬೇಕಾದಂತೆ ಕಾಲ್ಪನಿಕ ಪ್ರಸಂಗಗಳನ್ನು ಪಠ್ಯಗಳಲ್ಲಿ ತುಂಬುತ್ತಲೇ ಬಂದಿದ್ದರು. ಅಯೋಧ್ಯೆಯ ಮೊಕದ್ದಮೆ ನಡೆದಾಗ, ಅವರ ವಾದಗಳೆಲ್ಲ ಪೂರ್ಣ ನಿರಾಧಾರಿತವಾದವು ಎಂದು ನ್ಯಾಯಾಲಯದಲ್ಲಿಯೆ ಸಾಬೀತಾಯಿತು. ಇಷ್ಟು ವರ್ಷ ಅವರು ಕಟ್ಟಿದ್ದುದು ಬರೀ ಕಥನ (ನರೇಟಿವ್), ಪುರಾವೆ-ಆಧಾರಿತ ಇತಿಹಾಸವಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಯಿತು. ಮಾರ್ಕ್ಸ್ವಾದಿ ‘ಇತಿಹಾಸಕಾರರು’ ಬರೆದದ್ದೆಲ್ಲ ಸುಳ್ಳು ಎಂದು ಜನಸಾಮಾನ್ಯರಿಗೂ ಗೊತ್ತಾಯಿತು. ಇದರ ಫಲಿತಾಂಶವಾಗಿ ಜನರು ನಿಜವಾದ ಭಾರತೀಯ ಇತಿಹಾಸಕಾರರನ್ನು ಹುಡುಕಲು ಪ್ರಾರಂಭಿಸಿದರು. ಇತಿಹಾಸವನ್ನು ಚೆನ್ನಾಗಿ ಅಧ್ಯಯನ ಮಾಡಿ ಅದರ ಸಾರವನ್ನು ಸರಿಯಾಗಿ ಅರಿತರೆ ಎಷ್ಟೋ ಸಮಸ್ಯೆಗಳು ತನ್ನಿಂದತಾನೇ ಬಗೆಹರಿಯುತ್ತವೆ.
ಫಲಶ್ರುತಿ
ಈಗಿನ ಸ್ಟಾರ್ಟ್ಅಪ್ ಪರಿಭಾಷೆಯಲ್ಲಿ ಮೂರು ಆಯಾಮಗಳು ಮುಖ್ಯವಾದವು – ೧. ಸ್ಪೀಡ್ (ವೇಗ), ೨. ಸ್ಕೇಲ್ಅಪ್ (ಬೆಳೆಯುವ ಪ್ರಮಾಣ ಮತ್ತು ಅದರ ಮಟ್ಟ) ಹಾಗೂ ೩. ಸೋಶಿಯಲ್ ಇಂಪ್ಯಾಕ್ಟ್ (ಸಮಾಜದ ಮೇಲೆ ಪ್ರಭಾವ). ಈ ದೃಷ್ಟಿಯಿಂದ ನೋಡಿದಾಗ ಅಯೋಧ್ಯೆ ರಾಮಜನ್ಮಭೂಮಿಯ ಆಂದೋಲನ ಮೇಲಣ ಮೂರೂ ಅಂಶಗಳಲ್ಲಿ ಪರಾಕಾಷ್ಠಸ್ಥಿತಿಯತ್ತ ತಲಪಿದೆ ಎಂದು ಹೇಳಬಹುದು. ಒಂದೇ ದಿನದಲ್ಲಿ ಜನರ ಬರಿಗೈಗಳಿಂದಲೇ ಆ ಅಕ್ರಮ ಕಟ್ಟಡ ನೆಲಸಮವಾಯಿತು. ಗುಮ್ಮಟಗಳು ಬಿದ್ದ ಮೂವತ್ತೇ ದಿನಗಳಲ್ಲಿ ಭವ್ಯವಾದ ರಾಮಮಂದಿರ ಕಟ್ಟಲು ಬೇಕಾದ ಧನಾರ್ಜನೆಯೂ ಆಗತೊಡಗಿತು – ಇದೂ ಜನರಿಂದಲೇ. ಇದನ್ನು ಮುಕ್ಕಾಲುಪಾಲು ನೆರವೇರಿಸಿದ್ದು ಹಿಂದೂ-ವಿರೋಧಿ ಸರಕಾರವಿದ್ದಾಗ!
೨೦೧೯ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಕೊನೆಗೂ ಹಿಂದೂಗಳಿಗೆ ನ್ಯಾಯ ಸಿಕ್ಕಿದೆ. ಆದರೆ ಈಗಿನದು ತೃಪ್ತಿ ಪಡೆದು ಅಲಕ್ಷ್ಯದಿಂದ ಇರುವ ಕಾಲವಲ್ಲ. ಹಿಂದೂ ಸಮಾಜದ ಎದುರಿಗೆ ಅನೇಕ ಸವಾಲುಗಳೂ ತೊಡಕುಗಳೂ ಇವೆ. ಕೆಲವು ಬಾಹ್ಯ ಕ್ಷೋಭೆಗಳು, ಹಲವು ಅಂತರ್ ವ್ಯಾಧಿಗಳು. ಇವೆಲ್ಲಕ್ಕೆ ಪರಿಹಾರ ಹುಡುಕುವ ನಿರಂತರ ಪ್ರಯತ್ನ ನಡೆಯಬೇಕಾಗಿದೆ. ಕಾವಲುಗಾರ ಕ್ಷಣಮಾತ್ರಕ್ಕೆ ಎಚ್ಚರ ತಪ್ಪಿದರೂ ಇಡೀ ಕೋಟೆಯನ್ನೆ ಕೈಬಿಡಬೇಕಾದೀತು.
೬ನೇ ಡಿಸೆಂಬರ್ ೧೯೯೨ರಂದು ಮೂರು ಕಪ್ಪು ಗುಮ್ಮಟಗಳು ಬಿದ್ದವು, ನಿಜ – ಒಂದು, ಟೊಳ್ಳು ಸೆಕ್ಯೂಲರಿಜಂ ಎಂಬ ಕಪ್ಪು ಗುಮ್ಮಟ; ಎರಡು, ಮಾನಸಿಕ ಗುಲಾಮಗಿರಿ ಎನ್ನುವ ಗುಮ್ಮಟ; ಮೂರು, ಕ್ಷಾತ್ರವಿಹೀನ ಹಿಂದುತ್ವ ಎಂಬುದು. ಈಗ ಹೊಸದಾಗಿ ಕಟ್ಟುತ್ತಿರುವ ರಾಮಮಂದಿರವು ಹಿಂದೂಧರ್ಮದ ಪುನರುತ್ಥಾನದ ಸಂಕೇತವಾಗಲಿ, ಇತಿಹಾಸವನ್ನು ರಚಿಸಲಿ!
* * *
[ಲೇಖನವನ್ನು ಬರೆಸಿದ ‘ನಾಡೋಜ’ ಡಾ|| ಎಸ್. ಆರ್. ರಾಮಸ್ವಾಮಿಯವರಿಗೆ ಕೃತಜ್ಞತೆಗಳು. ಲೇಖನದ ಬರವಣಿಗೆಯಲ್ಲಿ ಸಹಾಯ ಮಾಡಿದ ನನ್ನ ತಂದೆ-ತಾಯಿ (ಡಾ|| ಎಂ. ವಿ. ರವಿಕುಮಾರ್ ಮತ್ತು ಪ್ರೊ|| ಹೇಮಾ ರವಿಕುಮಾರ್) ಹಾಗೂ ಆಪ್ತಮಿತ್ರರಾದ ವಿಕ್ರಮ್ ಫಡಕೆ, ವಿಘ್ನೇಶ್ವರ ಭಟ್ಟ ಮತ್ತು ‘ಅಷ್ಟಾವಧಾನಿ’ ಗಣೇಶ ಭಟ್ಟ ಕೊಪ್ಪಲತೋಟ – ಇವರೆಲ್ಲರಿಗೂ ಅನಂತಾನಂತ ಧನ್ಯವಾದಗಳು.]
ಕಾರಸೇವೆಯಿಂದ ತಾತ್ಕಾಲಿಕ ಮಂದಿರ ನಿರ್ಮಾಣ
೧೯೮೦ರ ದಶಕದಲ್ಲಿ ರಾಮಜನ್ಮಭೂಮಿಯ ವಿಮೋಚನೆಗಾಗಿ ಆಗ್ರಹ ಇನ್ನಷ್ಟು ಪ್ರಬಲವಾಯಿತು. ವಿಶ್ವ ಹಿಂದೂ ಪರಿಷತ್ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ಅನೇಕ ಸಮ್ಮೇಳನಗಳು, ಸಭೆ-ಧರ್ಮಸಂಸತ್ತುಗಳು, ರಥಯಾತ್ರೆಗಳು ನಡೆದವು. ತಾಲಾ ಖೋಲೋ ಚಳುವಳಿಯಿಂದಾಗಿ ೧೯೮೬ರ ಫೆಬ್ರುವರಿ ೧ರಂದು ರಾಮಲಲಾನ ದರ್ಶನಕ್ಕೆ ಅವಕಾಶ ದೊರೆಯಿತು. ಇದನ್ನು ಸಹಿಸದ ಕೆಲವು ಮುಸ್ಲಿಂ ನೇತಾರರು ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ಹುಟ್ಟುಹಾಕಿ ಪ್ರತಿಭಟನೆಯನ್ನು ಆರಂಭಿಸಿದರು. ಬಾಬ್ರಿ ಮಸೀದಿ ಎನ್ನುವ ನಾಮಕರಣವೂ ಆಯಿತು.
ರಾಮಜನ್ಮಭೂಮಿಯ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಶ್ರೀರಾಮ ಜ್ಯೋತಿ ಯಾತ್ರೆ, ಶಿಲಾಪೂಜನ, ಶಿಲಾನ್ಯಾಸಗಳು ನಡೆದವು. ೧೯೯೦ರಲ್ಲಿ ಕಾರಸೇವೆಗಾಗಿ ಲಕ್ಷೋಪಲಕ್ಷ ಜನ ಅಯೋಧ್ಯೆಗೆ ಹೊರಟರು. ಮುಲಾಯಂಸಿಂಗ್ ನೇತೃತ್ವದ ಅಂದಿನ ಉತ್ತರಪ್ರದೇಶ ಸರ್ಕಾರ ಕಾರಸೇವಕರನ್ನು ಬಂಧಿಸಿ ಚಳುವಳಿಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನ ಮಾಡಿತು. ಅಂದು ಬಂಧಿತರಾದವರು (ಸರ್ಕಾರದ ಅಂಕಿ-ಅಂಶದಂತೆ) ೧.೮ ಲಕ್ಷ ಮಂದಿ. ಆದರೂ ಕಾರಸೇವೆ ನಡೆಯಿತು. ಉತ್ಸಾಹೀ ಕಾರಸೇವಕರು ಗುಂಬಜದ ಮೇಲೆ ಭಗವಾಧ್ವಜವನ್ನು ಹಾರಿಸಿಯೇಬಿಟ್ಟರು.
ಅನಂತರ ಅಧಿಕಾರಕ್ಕೆ ಬಂದ ಭಾಜಪದ ಕಲ್ಯಾಣಸಿಂಗ್ ಸರ್ಕಾರ ವಿವಾದಿತ ೨.೭೭ ಎಕರೆ ಸಮೀಪ ೬೭ ಎಕರೆ ಪ್ರದೇಶವನ್ನು ರಾಮಕಥಾ ಪಾರ್ಕ್ ನಿರ್ಮಾಣಕ್ಕೆ ರಾಮ ಜನ್ಮಭೂಮಿ ನ್ಯಾಸಕ್ಕೆ ನೀಡಿದರು. ೧೯೯೨ರಲ್ಲಿ ನಡೆದ ಎರಡನೇ ಸುತ್ತಿನ ಕಾರಸೇವೆಗೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ರಾಮಭಕ್ತರು ಅಯೋಧ್ಯೆಯತ್ತ ಧಾವಿಸಿದರು. ಹಿಂದೂಸಮಾಜದ ಕ್ಷಾತ್ರಶಕ್ತಿ ಸಿಡಿದೆದ್ದದ್ದರ ಪರಿಣಾಮವಾಗಿ ೧೯೯೨ ಡಿಸೆಂಬರ್ ೬ರಂದು ದೇಶದ ಸ್ವಾಭಿಮಾನದ ಮೇಲೆ ಕಳಂಕದಂತಿದ್ದ ಕಟ್ಟಡ ನೆಲಸಮವಾಯಿತು. ಶ್ರೀರಾಮನಿಗೆ ಒಂದು ತಾತ್ಕಾಲಿಕ ದೇಗುಲ ನಿರ್ಮಾಣವಾಗಿ ಪೂಜೆ ಆರಂಭವಾಯಿತು.