೨೦೦೧ ಸೆಪ್ಟೆಂಬರ್ ೧೧ರ ಮತ್ತು ಅನಂತರದ ಘಟನಾವಳಿಗಳಿಂದಲೂ ಅಮೆರಿಕದ ಸ್ವಾರ್ಥೈಕಕೇಂದ್ರಿತ ತರ್ಕಹೀನ ವಿದೇಶಾಂಗ ನೀತಿ ಬದಲಾಗುವ ಸೂಚನೆ ಕಾಣುತ್ತಿಲ್ಲ. ಉಗ್ರವಾದ ನಿಯಂತ್ರಣಾಭಿಯಾನದ ನೇತೃತ್ವವನ್ನು ಇನ್ನೂ ವ್ಯಾಪಕವೂ ದೃಢಚಿಂತನೆಗೆ ಬದ್ಧವಾದುದೂ ಆದ ಬಹುರಾಷ್ಟ್ರ ಒಕ್ಕೂಟ ವಹಿಸಿಕೊಳ್ಳಬೇಕಾಗಿದೆ. ಈಗ್ಗೆ ಇಪ್ಪತ್ತು ವರ್ಷ ಹಿಂದೆ (೧೧-೯-೨೦೦೧) ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರಿಂದ ದಾಳಿ ನಡೆದಾಗ ಅಮೆರಿಕ ಜಗತ್ತಿನಿಂದ ಉಗ್ರವಾದವನ್ನು ಸಮೂಲ ಉಚ್ಚಾಟಿಸುವೆನೆಂದು ಘೋಷಣೆ ಮಾಡಿದುದನ್ನು ಜಗತ್ತು ಸ್ವಾಗತಿಸಿತ್ತು. ಅದು ಘೋಷಣೆಯಾಗಷ್ಟೆ ಉಳಿಯಿತೆಂಬುದಕ್ಕೆ ಇತ್ತೀಚಿನ ಸಾಕ್ಷ್ಯವೆಂದರೆ ಆಫಘಾನಿಸ್ತಾನದಿಂದ ಅಮೆರಿಕ ತರಾತುರಿಯಲ್ಲಿ […]
ಹಾವು ಸಾಯಬಾರದು, ಕೋಲೂ ಮುರಿಯಬಾರದು
Month : November-2021 Episode : Author : ಎಸ್.ಆರ್. ರಾಮಸ್ವಾಮಿ