ಮಂತ್ರಾಲಯ ತಲಪಿದಾಗ ಚುಮು ಚುಮು ಬೆಳಕು ಹರಿದಿತ್ತು. ಚಳಿ ಮೈಯ ಕೊರೆದಿತ್ತು. ರಾಜಹಂಸದ ಸುಖಾಸನದಲ್ಲೂ ನಿದ್ದೆ ಬಂದಿರಲಿಲ್ಲ. ಕಣ್ಣು ಮುಚ್ಚಿದರೂ ಮಗನದೆ ಚಿಂತೆ. ಲಿಖಿತಪರೀಕ್ಷೆಯಲ್ಲಿ ಪಾಸಾಗಿದ್ದಾನೆ; ಮೌಖಿಕದಲ್ಲೂ ಚೆನ್ನಾಗಿ ಮಾಡಿದ್ದೇನೆ ಎಂದಿದ್ದ. ಇನ್ನೇನು ಸೆಲೆಕ್ಟ್ ಆದಹಾಗೆ ಎಂದು ಸಂಭ್ರಮದಲ್ಲಿ ಆರ್ಡರ್ಗಾಗಿ ಕಾದಿರುವಾಗ ಸುರೇಂದ್ರನಾಯರ್ ಫೋನ್ ಮಾಡಿ – ತನ್ನಷ್ಟಕ್ಕೆ ತಾನೆ ಸೆಲೆಕ್ಟಾಗಿ ಆರ್ಡರ್ ಕೈಗೆ ಬರುತ್ತದೆ ಎಂದು ಕಾಯಬೇಡ. ಇದು ಹಿಂದಿನ ಕಾಲ ಅಲ್ಲ. ಐದಾದರೂ ಜೋಡಿಸಿಕೊಂಡು ಬಾ ಎಂದಿದ್ದ. ಆತ ಹೆಡ್ಆಫೀಸಿನಲ್ಲಿ ಚೇರ್ಮನ್ನರ ಪಿ.ಎ.; ಈತನ […]