
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ೧೯೧೫ರಲ್ಲಿ ಹುಟ್ಟಿಕೊಂಡ ‘ಕನ್ನಡ ಸಾಹಿತ್ಯ ಪರಿಷತ್’ಗೆ ಇದೀಗ ನೂರರ ಸಂಭ್ರಮ. ಇದು ನುಡಿಗುಡಿಯ ಕುರಿತು ಒಂದು ಸಾಂದರ್ಭಿಕ ಲೇಖನ. “ಮನುಷ್ಯನಿಗೆ ಆಯಾಸ ಅನಿವಾರ್ಯ. ಉತ್ಕೃಷ್ಟ ಸಂಸ್ಥೆಗಾದರೊ ದಣಿವೆಂಬುದೇ ಇಲ್ಲ, ಇರಕೂಡದು. ಸಂಕಲ್ಪಗಳು ಸಿದ್ಧಿಸಿದಷ್ಟೂ ಹೊಸ ಹೊಸ ಸಂಕಲ್ಪಗಳ ಉತ್ಪತ್ತಿ, ಕಾರ್ಯಕ್ಷೇತ್ರ ಇನ್ನೊಂದು ಮತ್ತೊಂದು ಮಗದೊಂದು ಎಂಬ ಕ್ರಮದ ವ್ಯಾಪ್ತಿ ವಿಸ್ತರಣೆ, ಯೋಜನೆಯ ಮೇಲೆ ಪುನರ್ ಯೋಜನೆ – ಹೀಗೆ ಅದು ಉಲ್ಲಾಸದಿಂದ ವರ್ಧಿಸುತ್ತದೆ, […]