ಓ! ನೀನಾ, ಬಾ ಮಹಾರಾಯಾ ಒಳಗೆ! ಈ ಊರಿಗೆ ನೀನು ಬಂದು ಬಹಳ ದಿನಗಳಾದವಂತೆ. ಈಗೇಕೆ ನನ್ನ ನೆನಪಾಯಿತು? ಊರಿನ ಮನೆಗಳ ಗೇಟುಗಳೆಲ್ಲ ತಾಳಿಬಿಗಿಸಿಕೊಂಡು ನಿಂತಿವೆಯೆ! ಮನೆಗಳ ಕಾಲಿಂಗ್ ಬೆಲ್ಗಳು ಮೌನ ಪರದೆಯ ಒಳಗೆ ಜಾರಿವೆಯೆ! ಯಾಕೆ ಹೊಸಲಲ್ಲಿ ನಿಂತೆ? ಏನು ಅನುಮಾನ ನಿನಗೆ? ನಾನು ನಿನ್ನನ್ನು ಮಾಧ್ಯಮದ ಬೊಂಬಾಯಿಗೆ ಸಿಗಿಸುವೆನೆಂಬ ಭಯವೇ! ಅಥವಾ ಪೊಲೀಸರ ಕೈಗೆ ಕೊಡುವೆನೆಂಬ ಅಪನಂಬಿಕೆಯೆ! ನೋಡು, ನಿನ್ನ ಬಗ್ಗೆ ನನಗೆ ಎಲ್ಲವೂ ಗೊತ್ತಾಗಿದೆ. ನೀನು ಈ ಭೂಮಿಯಲ್ಲಿ ಅವತರಿಸಿದ ಮೇಲೆ ಎಲ್ಲವೂ […]
ಒಂದು ಅನುಸಂಧಾನ
Month : July-2021 Episode : Author : ಶ್ರೀಪಾದ ಹೆಗಡೆ