ಹಗಲಿಗಿಂತ ಮುಖ್ಯವಾಗಿ ನಿಶ್ಶಬ್ದ ರಾತ್ರಿಯಲ್ಲಿ ಜನಸಮುದಾಯದ ಪ್ರಜ್ಞೆಯನ್ನು ಆಳುವ ಯಕ್ಷಗಾನದ (ಕನ್ನಡದ) ನೆಲವೇ ಆಗಿದ್ದ ಕುಂಬಳೆ–ಕಾಸರಗೋಡು ಪರಿಸರದಿಂದ ಬಂದವರು ಸುಂದರರಾವ್. ತೆಂಕುತಿಟ್ಟು ಯಕ್ಷಗಾನಕ್ಕೆ ಈಗಲೂ ಆ ಭಾಗ ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಒದಗಿಸುತ್ತಿದೆ. ಆದರೆ ಈಗ ಅಲ್ಲಿ ಭಾಷೆಯೊಂದಿಗೆ ಧರ್ಮೀಯ (ಮತೀಯ) ಆಕ್ರಮಣ ಕೂಡ ನಡೆಯುತ್ತಿದ್ದು, ಯಕ್ಷಗಾನದ ಪ್ರದರ್ಶನಗಳು ನಡೆಯುವುದು, ಆ ಮೂಲಕ ಪ್ರೇಕ್ಷಕ ವರ್ಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಬಲ್ಲ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಎಣೆಯಿಲ್ಲದ ಮಾತುಗಾರಿಕೆಯ ಮೂಲಕ ಯಕ್ಷಗಾನ, ತಾಳಮದ್ದಳೆಗಳ […]
‘ಆಟ’ವನ್ನು ಸುಂದರಗೊಳಿಸಿದ ಕುಂಬ್ಳೆ ಸುಂದರರಾಯರು
Month : February-2023 Episode : Author : ಎಚ್ ಮಂಜುನಾಥ ಭಟ್