
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಪ್ಡೇಟ್ ಆಗುತ್ತಿರುವ ತಂತ್ರಜ್ಞಾನವನ್ನು ಒಂದೇ ಸೂರಿನಲ್ಲಿ ನೋಡುವ ಯಂತ್ರಮೇಳವು ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ. ಸುಮಾರು ಮೂರೂವರೆ ಲಕ್ಷ ಕೃಷಿಕರು ಭಾಗವಹಿಸಿದ ಕೃಷಿ ಯಂತ್ರಮೇಳವು ಹೊಸ ಭರವಸೆ ಮೂಡಿಸಿದೆ.
Month : April-2015 Episode : Author : ನಾ. ಕಾರಂತ ಪೆರಾಜೆ
Month : April-2015 Episode : Author : ಪ. ರಾಮಕೃಷ್ಣ ಶಾಸ್ತ್ರಿ ತೆಂಕಕಾರಂದೂರು ಬೆಳ್ತಂಗಡಿ
ಒಂದು ಹಳ್ಳಿಗೆ ಹೋಗಿದ್ದೆ. ಹತ್ತಾರು ಎಕರೆಗಳಲ್ಲಿ ಅವರು ವೈವಿಧ್ಯಮಯ ಕೃಷಿ ಮಾಡುತ್ತಿದ್ದರು. ಫಲಭಾರದಿಂದ ತೂಗುತ್ತಿದ್ದ ಅಡಕೆಮರಗಳು, ಗೊನೆ ಹೊತ್ತು ತೊನೆಯುತ್ತಿರುವ ತೆಂಗುಗಳು, ಕೃಷಿಮೇಳದಲ್ಲಿ ಮೊದಲ ಬಹುಮಾನ ತಂದುಕೊಟ್ಟ ಅಷ್ಟೆತ್ತರದ ಬಾಳೆಗೊನೆಗಳು, ಸಾಲಾಗಿ ಬರುತ್ತಿದ್ದ ದನಗಳು ಎಲ್ಲವೂ ಇದ್ದ ಅವರಲ್ಲಿ ಕೈಗೊಬ್ಬ ಕಾಲಿಗೊಬ್ಬ ಕೆಲಸದವನೂ ಇದ್ದ. ಕುತೂಹಲದಿಂದ ಕೇಳಿದ್ದೆ, “ಕೆಲಸಕ್ಕೆ ಬೇಕಾದಷ್ಟು ಜನ ನಿಮಗೆ ಸಿಗುತ್ತಾರಾ?” ಅವರು, “ನನಗೆ ಕೆಲಸದ ಜನಕ್ಕೆ ದರಿದ್ರವೇ ಇಲ್ಲ. ಸಂಬಳ ಮಾತ್ರವಲ್ಲ, ವರ್ಷಕ್ಕೊಮ್ಮೆ ಬೋನಸ್ ಅಂತ ಪಾತ್ರೆಗಳನ್ನು ಕೊಡುತ್ತೇನೆ. ಅವರಲ್ಲಿ ಮದುವೆಯಾಗುವುದಾದರೆ ಹತ್ತು […]