ಹತ್ತಿರ ಹತ್ತಿರ ಇನ್ನೂರು ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಶಿಕ್ಷಣವ್ಯವಸ್ಥೆಯ ಅಸಮರ್ಪಕತೆ ಬಹಳ ಹಿಂದಿನಿಂದಲೇ ಚಿಂತಕರ ಹಾಗೂ ಸರ್ಕಾರಗಳ ಗಮನಕ್ಕೆ ಬಂದಿದೆ. ಈ ಹಿಂದೆ ಹಲವು ಸುಧಾರಣ ಪ್ರಯತ್ನಗಳು ನಡೆದಿದ್ದುದೂ ಇದೆ. ಪ್ರಮುಖವಾಗಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ (೧೯೬೮) ಸಿದ್ಧಗೊಂಡು ಒಂದಷ್ಟುಮಟ್ಟಿಗೆ ಕಾರ್ಯಗತವೂ ಆದ ಕೊಠಾರಿ ಸಮಿತಿಯ ಶಿಫಾರಸುಗಳನ್ನು (ಕಡ್ಡಾಯ ಪ್ರಾಥಮಿಕ ಶಿಕ್ಷಣ ಇತ್ಯಾದಿ) ಒಂದು ಮೈಲಿಗಲ್ಲೆಂದು ಭಾವಿಸಬಹುದು. ಅನಂತರ ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ (೧೯೮೬) ರಚಿತಗೊಂಡ ಆಯೋಗದ ವರದಿಯಲ್ಲಿ ಸಮಾನಾವಕಾಶ ಮೊದಲಾದ ಅಂಶಗಳು ಪ್ರಾಧಾನ್ಯ ಪಡೆದಿದ್ದವು. ನರೇಂದ್ರ ಮೋದಿಯವರ […]
ಹೊಸ ಶಿಕ್ಷಣನೀತಿ
Month : October-2021 Episode : Author :