ಗುರು ವಂದನೆ ಎಲ್ಲ ಜ್ಞಾನದ ತವನಿಧಿಯಾದ ವ್ಯಾಸಮಹರ್ಷಿಗಳ ಜನ್ಮದಿನದ ಸಂಕೇತವಾಗಿ ಪ್ರತಿವರ್ಷ ಆಷಾಢ ಹುಣ್ಣಿಮೆಯನ್ನು ‘ವ್ಯಾಸಪೂರ್ಣಿಮೆ’ ಅಥವಾ ‘ಗುರುಪೂರ್ಣಿಮೆ’ ಎಂದು ಭಕ್ತಿಯಿಂದ ಆಚರಿಸುವ ರೂಢಿ ಶತಮಾನಗಳಿಂದ ನಡೆದುಬಂದಿದೆ. ಆ ನಿಮಿತ್ತದಲ್ಲಿ ಮಾನವತೆಗೆ ವ್ಯಾಸರ ಸಂದೇಶವನ್ನು ಕುರಿತು ಈ ಲೇಖನ. ಶ್ರೀವೇದವ್ಯಾಸ ನಮೋ ಭೂ-ವಿಯದಾದ್ಯಂತದರ್ಶಿ ಕವಿಸೂರ್ಯ ನಮೋ | ಜೀವಿತಸಾರಜ್ಞ ನಮೋ ಭಾವಿತ-ವಿಶ್ವಪ್ರಜಾ-ಭವಿಷ್ಯಾರ್ಥ ನಮೋ || – ಡಿ.ವಿ.ಜಿ. “ಭೂಮ್ಯಾಕಾಶ ವ್ಯಾಪ್ತಿಯಲ್ಲಿನ ಸಮಸ್ತವನ್ನೂ ಕಂಡ ಕವಿಸೂರ್ಯರೂ ಎಲ್ಲ ಬದುಕಿನ ಸಾರವನ್ನರಿತವರೂ ಇಡೀ ವಿಶ್ವದ ಸಕಲ ಜನತೆಯ ಮುಂದಿನ ಆಗುಹೋಗುಗಳನ್ನೂ […]
ವ್ಯಾಸಸಂದೇಶ: ಭಾರತ-ಸಾವಿತ್ರೀ
Month : July-2021 Episode : Author : ಎಸ್.ಆರ್. ರಾಮಸ್ವಾಮಿ