ಜಿನ ಎಂಬ ಮಾತಿಗೆ ‘ಗೆದ್ದವನು’ ಎಂದು ಯೌಗಿಕಾರ್ಥ. ರಾಗದ್ವೇಷಾದಿಗಳನ್ನು ಸಂಪೂರ್ಣವಾಗಿ ಗೆದ್ದವನಿಗೆ ‘ಜಿನ’ ಎಂಬ ಹೆಸರು ಸಲ್ಲುತ್ತದೆ. ಜಿನಸಂಬಂಧವಾದ ಧರ್ಮವೇ ‘ ಜೈನಧರ್ಮ’. ಅಹಿಂಸೆ, ಸತ್ಯನಿಷ್ಠೆ, ಅಸ್ತೇಯ (ಕದಿಯದಿರುವುದು), ಬ್ರಹ್ಮಚರ್ಯ ಮುಂತಾದ ವ್ರತಗಳು ಜೈನಧರ್ಮಕ್ಕೂ ಇತರ ವಿಶ್ವಧರ್ಮಗಳಿಗೂ ಸಾಮಾನ್ಯವಾದರೂ ಜೈನಧರ್ಮದ್ದು ಒಂದು ವೈಶಿಷ್ಟ್ಯವುಂಟು. ಇತರ ಮತಗಳಂತೆ ಇದು ಯಾವೊಬ್ಬ ಏಕೈಕ ವ್ಯಕ್ತಿಯಿಂದಲೂ ಪ್ರವರ್ತಿತವಾದದ್ದಲ್ಲ. ಬೌದ್ಧಧರ್ಮದ ಪ್ರವರ್ತಕನೆಂದು ಗೌತಮಬುದ್ಧನನ್ನು ತೋರಿಸಲಾಗುವಂತೆ ಜೈನಧರ್ಮದ ಮೂಲಪುರುಷನೆಂದು ಯಾವ ಒಬ್ಬ ಸಂತನನ್ನೂ ನಿರ್ದೇಶಿಸಲಾಗದು. ಋಷಭನಾಥನಿಂದ ವರ್ಧಮಾನ ಮಹಾವೀರನವರೆಗೆ ಇಪ್ಪತ್ತನಾಲ್ಕು ಜನ ತೀರ್ಥಂಕರರು ಈ […]
ಮಹಾವೀರನು ಬೋಧಿಸಿದ ವಿಶ್ವಧರ್ಮ
Month : April-2020 Episode : Author : ಎಸ್.ಆರ್. ರಾಮಸ್ವಾಮಿ