ಪ್ರಾಸ್ತಾವಿಕ ಈಗ್ಗೆ ಹತ್ತಿರಹತ್ತಿರ ಏಳು ದಶಕಗಳ ಹಿಂದೆ ರೂಪ ತಳೆದ ಭಾರತೀಯ ರಾಜ್ಯಾಂಗವ್ಯವಸ್ಥೆಯು ಈ ದೇಶದ ಮನೋರಚನೆಗೆ ಹೊಂದಿಕೆಯಾಗುವ ರೀತಿಯದಾಗಿಲ್ಲವೆಂಬ ಅನಿಸಿಕೆ ಗಾಂಧಿಯವರಿಂದ ಮೊದಲ್ಗೊಂಡು ಅನೇಕ ಧೀಮಂತರಿಂದ ವ್ಯಕ್ತವಾಗಿದೆ. ಪ್ರಚಲಿತವಾಗಿರುವುದಕ್ಕಿಂತ ಮೇಲಾದ ಪರ್ಯಾಯ ಏನಿರಬಹುದೆಂಬ ಬಗೆಗೆ ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್ ಮೊದಲಾದ ಹಲವರು ಚಿಂತನೆ ನಡೆಸಿದ್ದಾರೆ. ಈಗ ಅಮಲಿನಲ್ಲಿರುವ ವ್ಯವಸ್ಥೆಯು ಪಾಶ್ಚಾತ್ಯಪ್ರೇರಿತವೆಂಬಷ್ಟೆ ಕಾರಣದಿಂದ ವಿಮರ್ಶನೀಯವೆನಿಸಿಲ್ಲ. ಒಟ್ಟಾರೆಯಾಗಿ ಸಂಸದೀಯ ಪ್ರಜಾಪ್ರಭುತ್ವ ಎಂದು ಈಗಿನದು ನಾಮಾಂಕನಗೊಂಡಿದೆ. ಪ್ರಾದೇಶಿಕ-ಭಾಷಿಕಾದಿ ವಿಶೇಷತೆಗಳನ್ನು ಮಾನ್ಯಮಾಡುವ ರೀತಿಯ ಪ್ರಾಂತಗಳು, ರಾಷ್ಟ್ರಸ್ತರೀಯ ಆವಶ್ಯಕತೆಗಳ ದೃಷ್ಟಿಯಿಂದ ಬಲಿಷ್ಠ […]
ಜನ್ಮಶತಾಬ್ದ ಸ್ಮರಣೆ ಪಂಡಿತ ದೀನದಯಾಳ ಉಪಾಧ್ಯಾಯ
Month : September-2015 Episode : Author :