ಸಂಪ್ರಸನ್ನೇ ಭಗವತಿ ಪುರುಷಃ ಪ್ರಾಕೃತೈರ್ಗುಣೈಃ | ವಿಮುಕ್ತೋ ಜೀವನಿರ್ಮುಕ್ತೋ ಬ್ರಹ್ಮನಿರ್ವಾಣಮೃಚ್ಛತಿ || – ಭಾಗವತ “ಭಗವಂತನು ಪ್ರಸನ್ನನಾದರೆ ಮನುಷ್ಯನು ತನ್ನ ಪ್ರಾಕೃತಗುಣಗಳ ಸಂಕೋಲೆಗಳಿಂದ ಬಿಡುಗಡೆ ಹೊಂದಿ ತನ್ನ ಜೀವಭಾವವನ್ನು ಕೊಡವಿಕೊಂಡು ಪರಬ್ರಹ್ಮಸ್ವರೂಪವಾದ ಮೋಕ್ಷಪದವಿಗೆ ಸೇರಿಕೊಳ್ಳುತ್ತಾನೆ.” ಭಗವಂತನ ಕೃಪೆಗೆ ನಾವು ಅರ್ಹರಾಗಬೇಕಾದರೆ ಅವನಲ್ಲಿ ನಮಗೆ ಅಸ್ಖಲಿತ ಪ್ರೇಮವೂ ಅವನು ನಮ್ಮನ್ನು ಸಂರಕ್ಷಿಸುತ್ತಾನೆಂಬ ಪೂರ್ಣ ವಿಶ್ವಾಸವೂ ಇರುವುದು ಆವಶ್ಯಕ. ಆದರೆ ನಮ್ಮ ಶ್ರದ್ಧೆಯನ್ನು ನಾವು ಶಬಲಿತಗೊಳಿಸಿಕೊಳ್ಳುವುದು ನಮ್ಮ ದೌರ್ಬಲ್ಯ. ಪ್ರಾಕೃತ ಪ್ರವೃತ್ತಿಗಳನ್ನು ಮೀರಲು ಯತ್ನಿಸುವುದು ಉತ್ಕರ್ಷಮಾರ್ಗದ ಮೊದಲ ಹೆಜ್ಜೆ. […]
ದೀಪ್ತಿ
Month : January-2022 Episode : Author :