
ಯಾವುದೇ ಪ್ರಜಾಪ್ರಭುತ್ವಾನುಗುಣ ಸರ್ಕಾರದ ದಾರ್ಢ್ಯವಂತಿಕೆಯ ಸೂಚಕವೆಂದರೆ ಅದರಲ್ಲಿಯ ನ್ಯಾಯಾಂಗದ ಕ್ರಿಯಾಶೀಲತೆಯ ಮಟ್ಟ – ಎಂಬುದು ರಾಜ್ಯಶಾಸ್ತ್ರದ ಒಂದು ಗೃಹೀತ ಸೂತ್ರ. ಈ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಭಾರತದ ಸದ್ಯಃಸ್ಥಿತಿ ಅಷ್ಟೇನೂ ಸಮಾಧಾನ ನೀಡುವಂತಿಲ್ಲ ಎನ್ನಬೇಕಾಗಿದೆ. ಕಳೆದ (2016) ಏಪ್ರಿಲ್ 25ರಂದು ದೆಹಲಿಯ ವಿಜ್ಞಾನಭವನದಲ್ಲಿ ನಡೆದ ಒಂದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತೀರ್ಥಸಿಂಹ ಠಾಕೂರ್ ಅವರು ದೇಶದ ವಿವಿಧ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ಸಂಖ್ಯೆಯ ತೀವ್ರ ಕೊರತೆಯನ್ನು ನೀಗಿಸಿ ನ್ಯಾಯಾಂಗದ […]