ಪ್ರತಿ ಸಂಧಿಕಾಲದಲ್ಲಿಯೂ ಇರುವಂತೆ ಈ ಬಾರಿಯೂ ಊಹಾಪೋಹಗಳು ಧಾರಾಳವಾಗಿಯೆ ಇದ್ದವಾದರೂ ಚದುರಂಗದಾಟಗಳ ಫಲಸ್ವರೂಪವಾಗಿ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಮೂವತ್ತನೆಯ ಮುಖ್ಯಮಂತ್ರಿಯ ಸ್ಥಾನ ಒಲಿದುಬಂದು ಜುಲೈ ೨೮ರಂದು ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೇರೆಲ್ಲ ಕಾರಣಗಳಿಗಿಂತ ಮಿಗಿಲಾಗಿ ಅವರು ಎಲ್ಲ ಬಣಗಳಿಗೂ ಸಮ್ಮತರಾಗಿರುವುದೂ ಪ್ರತಿಪಕ್ಷಗಳನ್ನು ಅವರು ಸಮರ್ಥವಾಗಿ ಎದುರಿಸಬಲ್ಲರೆಂಬ ವ್ಯಾಪಕ ಭಾವನೆಯೂ ಅವರ ಆಯ್ಕೆಗೆ ದಾರಿಮಾಡಿದ್ದಿರಬೇಕು ಎಂಬುದು ಸ್ಪಷ್ಟವೇ ಆಗಿದೆ. ರಾಜ್ಯವೊಂದರ ರಾಜಕೀಯ ಜೀವನದಲ್ಲಿ ಆಗಿಂದಾಗ ಪರಿವರ್ತನೆಯಾಗುವುದು ಒಂದು ಸಹಜ ಪ್ರಕ್ರಿಯೆ. ಯಾವುದೇ ವ್ಯವಸ್ಥೆ ನಿರಂತರವಾಗಿ ಏಕರೂಪದಲ್ಲಿ […]
ರಾಜ್ಯ ರಾಜಕೀಯ ಸ್ಥಿತ್ಯಂತರ
Month : September-2021 Episode : Author : -ಎಸ್.ಆರ್.ಆರ್.