ತಿಲಕರ ನಿಧನದ ನೂರನೇ ವರ್ಷ ನಿಮಿತ್ತ ಸ್ಮರಣಲೇಖನ ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಿಂದ ಆರಂಭಿಸಿ ಮೂರು ದಶಕಗಳ ಕಾಲ ಭಾರತದ ಹೃದಯಸಮ್ರಾಟರೂ ರಾಷ್ಟ್ರನಾಯಕರಲ್ಲಿ ಅಗ್ರಣಿಗಳೂ ಆಗಿದ್ದವರು ತಿಲಕರೆಂಬುದೂ ಸ್ವರಾಜ್ಯಾಭಿಮುಖ ಸಂಘರ್ಷದಲ್ಲಿ ಸಕ್ರಿಯತೆ ತಂದವರು ಅವರೆಂಬುದೂ ವಿವಾದಾತೀತ. ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನು ನೀಡಿದವರು ಅವರು. ಇದು ಸಾಧ್ಯವಾದದ್ದು ಅವರ ನಿಶಿತ ಪ್ರತಿಭೆ, ತೀಕ್ಷ್ಣ ವೈದುಷ್ಯ, ಅಸೀಮ ನಿಃಸ್ವಾರ್ಥ ಮೊದಲಾದ ವ್ಯಕ್ತಿಗುಣಗಳಿಂದ. ಧ್ಯೇಯಸಾಧನೆಗಾಗಿ ಅವರಂತೆ ಸರ್ವಸ್ವಾರ್ಪಣೆ ಮಾಡಿದವರ ನಿದರ್ಶನಗಳು ಇತಿಹಾಸದಲ್ಲಿ ವಿರಳವಾಗಷ್ಟೆ ದೊರೆಯುತ್ತವೆ. ಸಮಾಜೋಜ್ಜೀವನ ಪಶ್ಚಿಮಭಾರತದಲ್ಲಿ ‘ಆಧುನಿಕ’ ಶಿಕ್ಷಣವ್ಯವಸ್ಥೆ 19ನೇ […]
ಸ್ವರಾಜ್ಯಾರಾಧಕ ಬಾಲ ಗಂಗಾಧರ ತಿಲಕ್
Month : July-2020 Episode : Author : ಎಸ್.ಆರ್. ರಾಮಸ್ವಾಮಿ