
ಆವತ್ತು ಕಲ್ಯಾಣಿ ಹಾಡೋದೇ ಆನಂದ! ಈವತ್ತು ಹೀಗೆ ಕೊಕ್ಕೊಕ್ಕೋ ಅಂತ ಹಾಡೋದೇ ಆನಂದ! ಆತ ಒಬ್ಬ ಸುಪ್ರಸಿದ್ಧ ಸಂಗೀತಗಾರ. ಅರಮನೆಯ ಆಸ್ಥಾನವಿದ್ವಾಂಸ. ಕಲ್ಯಾಣಿರಾಗವನ್ನು ಹಾಡುವುದರಲ್ಲಿ ಅವನನ್ನು ಬಿಟ್ಟರಿಲ್ಲ! ಮಧುರಕಂಠ. ಸೊಗಸಾದ ಸಾಧನೆ. ಮಹಾರಾಜನಿಗೆ ಅವನೆಂದರೆ ಬಹಳ ಮೆಚ್ಚುಗೆ. ವಾಸಿಸಲು ಭವ್ಯ ಭವನ, ಅಪಾರ ಐಶ್ವರ್ಯ ಎಲ್ಲವನ್ನೂ ಬೇಕಾದ ಹಾಗೆ ಕಲ್ಪಿಸಿಕೊಟ್ಟಿದ್ದ.