ಭಾರತೀಯ ಇತಿಹಾಸವನ್ನೂ ಸಮಾಜವನ್ನೂ ನೈಜ ಭಾರತೀಯತೆಯ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಅದೇ ರೀತಿಯಲ್ಲಿ ಭಾರತೀಯರಿಗೆ ಕಾಣಿಸಿದ ಸಂಶೋಧಕರಲ್ಲಿ ಅಗ್ರಗಣ್ಯರಾದ ಒಬ್ಬರು ಧರ್ಮಪಾಲ್ (೧೯.೨.೧೯೨೨-೨೪.೧೦.೨೦೦೬). ಭಾರತದಲ್ಲಿನ ಹಾಗೂ ಲಂಡನ್ನಿನ ಲೇಖ್ಯಾಗಾರಗಳಲ್ಲಿ ಅಸೀಮ ಶೋಧನೆ ನಡೆಸಿದ ಧರ್ಮಪಾಲ್ ಪ್ರಚಲಿತ ಕಥನಗಳಿಂದ ಪೂರ್ಣ ಭಿನ್ನವಾದ ಬ್ರಿಟಿಷ್‌ಪೂರ್ವ ಭಾರತದ ಚಿತ್ರಣವನ್ನೂ ಶಿಕ್ಷಣ, ಕೃಷಿ, ವಿಜ್ಞಾನ-ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಇಂಗ್ಲೆಂಡಿಗಿಂತ ಬಹುಪಾಲು ಉನ್ನತ ಮಟ್ಟದಲ್ಲಿದ್ದುದನ್ನೂ ಬ್ರಿಟಿಷರದೇ ದಾಖಲೆಗಳ ಆಧಾರದ ಮೇಲೆ ದೃಢವಾಗಿ ಸ್ಥಾಪಿಸಿದ ಸಾಧನೆ ದಿಕ್‌ಪ್ರದರ್ಶಕವೂ ರೋಮಾಂಚಕಾರಿಯೂ ಆದದ್ದು. ಈ ಸತ್ಯದರ್ಶನದ ಬೆಳಕಿನಲ್ಲಿ […]
ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ
Month : January-2022 Episode : Author :