ಡಿ.ವಿ.ಜಿಯವರು ಕ್ರಾಂತಿವಿರೋಧಿಗಳಲ್ಲ. ಆದರೆ ಅವರು ಶಾಂತಿಯಲ್ಲಿ ಪರ್ಯವಸಿಸದ ಕ್ರಾಂತಿಗಿಂತ ಮಾನವಲೋಕಕ್ಕೆ ಭೀಕರಶಾಪವಾಗುವಂಥದ್ದು ಮತ್ತಾವುದೂ ಇಲ್ಲವೆಂದೂ ಸಹ ಚೆನ್ನಾಗಿ ತಿಳಿದಿದ್ದರು. ವರ್ಷದಲ್ಲಿ ಮೂರು ತಿಂಗಳು ಮಾತ್ರ ಮಳೆಯಿರಬೇಕು, ಬಗ್ಗಡವಾಗಿ ಉಕ್ಕೇರಿಬರುವ ನದೀಪ್ರವಾಹವು ತಿಳಿಯಾಗದಿದ್ದಲ್ಲಿ ಆ ‘ಜೀವನ’ವೇ ಜಗತ್ತಿಗೆ ಜವನಾದೀತು. ಹೀಗೆಯೇ ಅವರಿಗೆ ಸಮಾಜಸುಧಾರಣೆಯಲ್ಲಿದ್ದ ಉತ್ಸಾಹವೂ ವಿವೇಕದಿಂದ ಕೂಡಿತ್ತು. ವೀರೇಶಲಿಂಗಂಪಂತುಲು ಅವರು ಆಯೋಜಿಸುತ್ತಿದ್ದ ವಿಧವಾವಿವಾಹಗಳಿಗೆ ಇವರೇ ಪುರೋಹಿತರು. ಆದರೆ ಬಾಲ್ಯವಿವಾಹನಿಷೇಧದ ಕಾನೂನನ್ನು ಎಚ್ಚರದಿಂದ ಅಳವಡಿಸಬೇಕೆಂದು ಹೇಳುತ್ತಿದ್ದರು. ದಲಿತರ ದೇವಾಲಯಪ್ರವೇಶಕ್ಕೆ ಅನುಮತಿ ಸಿಗಲೇಬೇಕೆಂದು ದುಡಿದವರವರು. ಅಂತೆಯೇ ದೇವಾಲಯಗಳಲ್ಲಿ ನೃತ್ಯಸೇವೆ ನಿಂತುಹೋಯಿತೆಂದು ಪರಿತಾಪ […]
ಡಿ.ವಿ.ಜಿ. ಅವರ ತಾತ್ತ್ವಿಕನೇಪಥ್ಯ 2
Month : March-2015 Episode : ಡಿ.ವಿ.ಜಿ. ಅವರ ತಾತ್ತ್ವಿಕನೇಪಥ್ಯ -ಲೇಖನ 2 Author : ಶತಾವಧಾನಿ ಡಾ|| ರಾ. ಗಣೇಶ್