
ಸನಾತನಧರ್ಮದ ಭಾಗವೇ ಆಗಿದ್ದ ಹಲವು ದೂರವ್ಯಾಪಿ ಅಂಶಗಳನ್ನು ಮುನ್ನೆಲೆಗೆ ತಂದು ಪ್ರಖರವಾಗಿ ಮತ್ತು ವೈಚಾರಿಕಪ್ರಾಕಾರದಲ್ಲಿ ಪ್ರಭಾವಿಯಾಗಿ ಪ್ರತಿಪಾದಿಸಿದುದು ಶ್ರೀ ಅರವಿಂದರ ಕೊಡುಗೆ. ಸಮಕಾಲೀನ ರಾಷ್ಟ್ರಭಕ್ತರಲ್ಲಿ ದರ್ಶನಸ್ಫುಟತೆಯನ್ನೂ ಕಾರ್ಯೋತ್ಸಾಹವನ್ನೂ ಉಜ್ಜೀವಿಸುವುದರಲ್ಲಿ ಶ್ರೀ ಅರವಿಂದರ ಮಾತೂ ಬರಹವೂ ಮಹತ್ತ್ವದ ಪಾತ್ರ ವಹಿಸಿದವು.