ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ ಕೂಡ ಕನ್ನಡದಲ್ಲಿ ಮಾತ್ರವಲ್ಲ, ಇನ್ನಿತರ ಭಾರತೀಯ ಭಾಷೆಗಳಲ್ಲಿಯೂ ದೇವುಡು ಅವರ ಈ ನಿಟ್ಟಿನ ಕಾದಂಬರಿಗಳನ್ನು ಮೀರಿಸುವ ರಚನೆಗಳು ಬಂದಿಲ್ಲವೆಂದು ತಜ್ಞರು ಹೇಳುತ್ತಾರೆ. ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ‘ಮಹಾತ್ರಯ’ದ […]
ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ
Month : February-2023 Episode : Author : ಬಿ.ಎನ್. ಶಶಿಕಿರಣ್