ಆಧ್ಯಾತ್ಮಿಕ ಲೇಖನಮಾಲೆ – 2 ಕಾವೇರೀಪಟ್ಟಣದಲ್ಲಿ ವೆಂಕಟನಾಥರ ಅನುರೂಪದ, ಅಪರೂಪದ, ಅನ್ಯೋನ್ಯ ದಾಂಪತ್ಯವು ಸುಖಕರವಾಗಿಯೇ ಸಾಗಿತ್ತು. ಬೇಕುಬೇಕೆಂಬ ಹಾಹಾಕಾರ-ಬಯಕೆಗಳಿಲ್ಲದ ಸಂತೃಪ್ತ ಮನಸ್ಸಿನ ಈ ದಂಪತಿಗಳಿಗೆ ತಮ್ಮ ಬದುಕಿನಲ್ಲಿದ್ದ ಬಡತನದಿಂದ ಬೇಸರವಿರಲಿಲ್ಲ. “ಇಟ್ಹಾಂಗೆ ಇರುವೆನು ಹರಿಯೇ” ಎಂಬ ಶ್ರೀಪಾದರಾಜರ ನುಡಿಯಂತೆ ದೇವರು ಕೊಟ್ಟಿರುವಷ್ಟು ಸಾಕೆಮಗೆ ಎಂಬ ತೃಪ್ತ ಮನೋಭಾವ. ದೈವದಲ್ಲಿ ಪ್ರೀತಿ, ಭಕ್ತಿ ತುಂಬಿಕೊಂಡಿದ್ದ ದಂಪತಿಗಳು. ಸಿರಿತನ-ವೈಭವಕ್ಕೆ ಎಂದೂ ಆಶಿಸದ ಅನನ್ಯ ಜೋಡಿ. ಹರಿಭಕ್ತಿಯೇ ತಮ್ಮೆಲ್ಲ ಸಿರಿಭಾಗ್ಯ ಎಂದು ತಿಳಿದ ತೃಪ್ತ ಬದುಕು ಅವರದ್ದಾಗಿತ್ತು. ಸದಾ ಹರಿಧ್ಯಾನದ ಜೊತೆಗೆ […]
ಕರುಣಾಮಯಿಶ್ರೀ ರಾಘವೇಂದ್ರ ಗುರುಸಾರ್ವಭೌಮರು
Month : October-2019 Episode : Author : ಡಾ. ಅನಸೂಯಾದೇವಿ