
ಪ್ರತಿಭಾವಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಒಮ್ಮೆ ತಾನು ತುಂಬ ಗೌರವದಿಂದ ಕಾಣುವ ಇಬ್ಬರು ಕನ್ನಡ ಸಾಹಿತಿಗಳನ್ನು ಹೆಸರಿಸಿ ಅದಕ್ಕೆ ಕಾರಣ ನೀಡಿದ್ದರು. ಶಿವರಾಮ ಕಾರಂತರ ಪ್ರಯೋಗಶೀಲತೆ ಮತ್ತು ಕುವೆಂಪು ಅವರ ಕಲಾತ್ಮಕತೆ ತಮಗಿಷ್ಟ ಎಂದು ಅವರು ಹೇಳಿದ್ದರು. ಕಾರಂತರು ಸಾಹಿತ್ಯದಲ್ಲಿ ಮಾತ್ರವಲ್ಲ; ತಮ್ಮ ಜೀವನದಲ್ಲೇ ಪ್ರಯೋಗಶೀಲತೆಯನ್ನು ಮೆರೆದವರು. ಅವರು ಕಾಲೇಜು ಮೆಟ್ಟಿಲನ್ನು ತುಳಿಯಲಿಲ್ಲ. ದೇಶ ಸುತ್ತಿದರು; ಕೋಶ ಓದಿದರು. ಯಾವುದೇ ಉದ್ಯೋಗ, ಸಂಪಾದನೆಯ ಮೂಲಕ್ಕೆ ಅಂಟಿಕೊಳ್ಳದೆ ಸ್ವಾತಂತ್ರ್ಯ ಹೋರಾಟ, ಖಾದಿಪ್ರಚಾರ, ರಂಗಭೂಮಿ, ನಾಟಕ ರಚನೆ-ನಿರ್ದೇಶನ, […]