ಕೆಸರಿನಿಂದ ಕಮಲ ಹುಟ್ಟುವುದು ಒಂದು ಪ್ರಕೃತಿವೈಚಿತ್ರ್ಯ. ಅದರಂತೆ ಕೊರೋನಾ ಎಂಬ ಭಯಾನಕ ವಿಪತ್ತಿನ ಕಾರಣದಿಂದಾಗಿ ಜನರಿಗೆ ತಮ್ಮ ಕ್ಷಮತೆ ಎಷ್ಟಿದೆಯೆಂಬುದು ಅರಿವಿಗೆ ಬರುವಂತಾಗಿದೆ. ಇದನ್ನು ಒಂದು ಉಪಲಬ್ಧಿ ಎಂದು ಭಾವಿಸಿದರೆ ತಪ್ಪಿಲ್ಲ. ಏಕೆಂದರೆ ನಿತ್ಯ-ಧಾವಂತವೇ ಸಹಜಸ್ಥಿತಿಯೆಂದು ಭಾವಿಸುವಷ್ಟು ಅಧಿಕ ‘ಪ್ರಗತಿ’ಯನ್ನು ಮಾನವತೆ ಸಾಧಿಸಿದ್ದಾಗಿದೆ. ಅವಲೋಕನಕ್ಕೆ ಯಾರಿಗೂ ಪುರಸತ್ತೇ ಇಲ್ಲ. ಅತಿವೇಗಕ್ಕೆ ಬದಲಾಗಿ ನಿಧಾನ, ದುಂದುಗಾರಿಕೆಗೆ ಬದಲಾಗಿ ಮಿತವ್ಯಯ, ಅನಾವಶ್ಯಕ ಸಂಕೀರ್ಣತೆಗೆ ಬದಲಾಗಿ ಸರಳತೆ – ಈ ಲಕ್ಷಣಗಳನ್ನುಳ್ಳ ಜೀವನಕ್ರಮ ಕೂಡಾ ಸಂತೃಪ್ತಿಕರವೂ ಸಮಾಧಾನಕರವೂ ಆಗಿರಬಲ್ಲದೆಂಬ ಪ್ರಾಥಮಿಕ ಮೌಲ್ಯಪರಿಜ್ಞಾನವು […]
‘ಅವಗುಂಠನ ಪರ್ವ’
Month : May-2020 Episode : Author : ಎಸ್.ಆರ್. ರಾಮಸ್ವಾಮಿ