ಕ್ಷಮಯಾ ರೋಚತೇ ಲಕ್ಷ್ಮೀರ್ಬ್ರಾಹ್ಮೀ ಸೌರೀ ಯಥಾ ಪ್ರಭಾ | ಕ್ಷಮಿಣಾಮಾಶು ಭಗವಾಂಸ್ತುಷ್ಯತೇ ಹರಿರೀಶ್ವರಃ ||| – ಭಾಗವತ “ಕ್ಷಮೆಯಿಂದ ಮನುಷ್ಯನ ಬ್ರಹ್ಮತೇಜಸ್ಸು ಸೂರ್ಯನ ಅತಿಶಯ ಪ್ರಕಾಶದಂತೆ ಬೆಳಗುತ್ತದೆ. ಎಲ್ಲ ಲೋಕಗಳ ಒಡೆಯನಾದ ಪರಮಾತ್ಮನು ಕ್ಷಮಾಗುಣವುಳ್ಳವರಲ್ಲಿ ಬಹಳ ಬೇಗ ಸಂತೋಷ ಪಡುತ್ತಾನೆ.” ಮುಯ್ಯಿಗೆ ಮುಯ್ಯಿ, ಅಕಾರ್ಯಕ್ಕೆ ದಂಡನೆ ಆಗಲೇಬೇಕು – ಎಂಬ ಧೋರಣೆ ಲೌಕಿಕ-ವ್ಯಾವಹಾರಿಕ ಕಕ್ಷೆಗೆ ಸ್ವಲ್ಪಮಟ್ಟಿಗೆ ಸರಿಹೋಗಬಹುದು. ಆದರೆ ವಿಶಾಲ ಮನಸ್ಸಿನಿಂದಲೂ ಕಾರುಣ್ಯಪ್ರವೃತ್ತಿಯಿಂದಲೂ ಜನಿಸಿದ ಕ್ಷಮಾಗುಣವು ಸರ್ವರಿಗೂ ಹಿತಕರವೂ ಸಂಸ್ಕಾರಕಾರಿಯೂ ಸಂಸ್ಥಿತಿಪೋಷಕವೂ ಆಗುತ್ತದೆಂಬ ಇನ್ನೊಂದು ಪಕ್ಷವೂ […]
ದೀಪ್ತಿ
Month : August-2021 Episode : Author :