“ಬಡ ಮೆಕ್ಸಿಕೋ, ಅಮೆರಿಕಾಗೆ ಹತ್ತಿರ, ದೇವರಿಂದ ಬಹು ದೂರ!’’ ಬಲಾಢ್ಯ ಅಮೆರಿಕದ ನೆರೆನಾಡಾಗಿ ತನ್ನ ದೇಶ ಅನುಭವಿಸುತ್ತಿರುವ ಸಂಕಷ್ಟಗಳನ್ನು ನೆನೆದು ಒಂದು ಶತಮಾನದ ಹಿಂದೆ ಮೆಕ್ಸಿಕೋದ ಅಂದಿನ ಅಧ್ಯಕ್ಷ ಫಿಗರೆಡೋ ಡಯಾಸ್ ಅಲವತ್ತುಕೊಂಡದ್ದು ಹೀಗೆ! ಈ ಮಾತುಗಳು ಅಮೆರಿಕ ಕಳೆದ ಇನ್ನೂರು ವರ್ಷಗಳಿಂದಲೂ ಪಶ್ಚಿಮಾರ್ಧ ಗೋಲದಲ್ಲಿ ಅನುಸರಿಸಿಕೊಂಡು ಬರುತ್ತಿರುವ ನೀತಿಗಳ ಒಂದು ಚಿತ್ರಣವನ್ನು ನಮಗೆ ನೀಡುತ್ತವೆ. ಹಾಗೆ ನೋಡಿದರೆ ಪ್ರತಿಯೊಂದು ಬಲಾಢ್ಯ ದೇಶ ಅಥವಾ ಸಾಮ್ರಾಜ್ಯ ತನ್ನ ಸುತ್ತಲಿನ ಸಣ್ಣಪುಟ್ಟ ದೇಶಗಳು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳದಂತೆ […]





