
ಜ್ಞಾನಭಂಡಾರದಲ್ಲಿ ಗಾದೆಗಳ ಪಾತ್ರ ದೊಡ್ಡದು. ಹಾಗಾಗಿ ನಾವು ಅವುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಗಾದೆ, ಹೆಚ್ಚು ಬಳಕೆಯಲ್ಲಿರುವ ಗಾದೆ. ಗಾದೆಗಳು ಹೇಗೆ ಹುಟ್ಟಿಕೊಂಡವು ಎನ್ನುವುದು ಕುತೂಹಲಕಾರಿ ಪ್ರಶ್ನೆ. ಕವಿತೆಗಳಂತೆ, ಕತೆಗಳಂತೆ, ಕಾದಂಬರಿಗಳಂತೆ ಯಾರೋ ಬರೆದು ಗಾದೆಗಳನ್ನು ಪ್ರಕಟಿಸಲಿಲ್ಲ. ಮನಸ್ಸನ್ನು ಸೆಳೆಯುವ ಒಂದು ಘಟನೆ ಸಂಭವಿಸಿದಾಗ, ಅದರ ಸಾರವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ, ಮಾತಲ್ಲಿ ಹಿಡಿದು, ನುಡಿದು ಚಾಲ್ತಿಗೆ ತರುವ ಒಂದು ಅದ್ಭುತ ಕ್ರಿಯಾಶಕ್ತಿ ನಮ್ಮ ಹಿರಿಯರಲ್ಲಿ ಇತ್ತು.