
ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ದ್ವಂದ್ವದಾಟಗಳಿಗೆ ಕೊನೆಮೊದಲಿಲ್ಲ. ಹಳೆಯದರಿಂದ ಪಾಠಕಲಿಯುವ ಪ್ರಬುದ್ಧತೆ ಕೆಲವೊಮ್ಮೆ ನಾವು ಬೆಳೆಸಿಕೊಳ್ಳುವುದಿಲ್ಲ. ಹಳೆಯ ಪದ್ಧತಿಯ ಬಗೆಗೆ ತಿರಸ್ಕಾರವಿದ್ದರೂ, ಹೊಸ ಬದಲಾವಣೆಗಳಿಗೂ ಸಿದ್ಧರಾಗುವುದೇ ಇಲ್ಲ. ಈ ತ್ರಿಶಂಕುಮನಃಸ್ಥಿತಿಯಿಂದಾಗಿಯೇ 1991ರ ನಂತರ ಮೊದಲಬಾರಿಗೆ ಜಾರಿಗೆ ಬಂದ ರೈತಪರ ಕೃಷಿಕಾಯಿದೆಗೆ ವಿಘ್ನವೊಡ್ಡುವ ಶಕ್ತಿಗಳಿಗೆ ಹುರುಪು ಬಂದಿದೆ! ಮೊದಮೊದಲು ತೆರೆಮರೆಯಲ್ಲಿ ನಡೆದ ಈ ಪ್ರಯತ್ನಗಳು ಈಗ ಮುನ್ನೆಲೆಗೆ ಬಂದಿವೆ. ಹೊಸ ಹಸಿರುಕ್ರಾಂತಿಯ ಆಸೆಯನ್ನು ಕೊಲ್ಲುವ ಶಕ್ತಿಗಳು ನಿರಂತರ ಕ್ರಿಯಾಶೀಲವಾಗಿದ್ದು ಅದರ ಗುರಿ ಆಡಳಿತದ ವಿರುದ್ಧ ಎನ್ನುವುದು ದಿನದಿಂದ ದಿನಕ್ಕೆ […]