
ಅಮ್ಮಾ ತಾಯಿ ವಿಭೂತಿ ರಸವಂತಿ ನೀ ಜಸವಂತಿ ನೊಸಲಿನ ಹೊಸಲಾಗೆ ಕುಂತಿ ||೧|| ನನಗೋ ಬಸವಣ್ಣನ ನೆನಪೇ ಬಂತಿ ಹುಳ ಹತ್ತಿ ದೇಹ ಜಂತಿ ಮೂರರ ಕಾಯ ಆರರ ಗಾಯ ಇದು ಮಾಯಲು ವಿಭೂತಿಯ ದಯ ಬೇಕಯ್ಯ ಅಮ್ಮಾ ತಾಯಿ ವಿಭೂತಿ ||೨|| ಹೃದಯ ಪುಂಡರೀಕ ಶಿವನ ಹಿಮಾಲಯ ಗುರು ಪರಮಹಂಸರ ಚಿತ್ತ ಗುರು ಅಂಬಿಕಾತನಯರ ದತ್ತ ಈ ಗುರುತೀಗ ಮೂರು ಬೆರಳು ನೆತ್ತಿಗೆ ವಿಭೂತಿಯ ನೆರಳು ಅಮ್ಮಾ ತಾಯಿ ವಿಭೂತಿ ||೩|| ’ಓಂ ಶಿವೋಹಂ ರಕ್ಷ […]