ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2022

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2022

ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2022

ವಿಷಯ: ಭವಿಷ್ಯದಲ್ಲಿ ನಾನೇನಾಗಬೇಕು? : ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ?

ಕಾಲೇಜು ಶಿಕ್ಷಣವು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತದೆ. ಇತ್ತೀಚಿಗೆ ವಿದ್ಯಾಭ್ಯಾಸದ ರೂಪ-ಸ್ವರೂಪಗಳೂ ಬದಲಾಗಿವೆ. ಅನೇಕ ಹೊಸ ವಿಷಯಗಳು ಪ್ರವೇಶಿಸಿವೆ. ಕಲಿಕೆಯ ಮಾದರಿಯಲ್ಲೂ ಹೊಸತನ ತರುವ ಪ್ರಯತ್ನಗಳು ನಡೆಯುತ್ತಿವೆ. ಹೊಸ ಶಿಕ್ಷಣ ನೀತಿ ಹಲವು ಆಯಾಮಗಳನ್ನು ತೆರೆದಿಟ್ಟಿದೆ.

ಒಬ್ಬ ವಿದ್ಯಾರ್ಥಿಯಾಗಿ ನಾನೇಕೆ ಕಾಲೇಜು ಶಿಕ್ಷಣ ಪಡೆಯುತ್ತಿರುವೆ? ಶಿಕ್ಷಣ ಪೂರೈಸಿ ನಾನು ಏನಾಗಬೇಕು? ವಿದ್ಯಾವಂತರಿಗೆ ಎಲ್ಲಿದೆ ಉದ್ಯೋಗಾವಕಾಶಗಳು? – ಎಂಬ ಚರ್ಚೆ ಇರುವಾಗಲೇ, ಯಾವುದೋ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಯುವ ಮೊದಲೇ ನೌಕರಿ ಖಾತರಿಪಡಿಸುವ ಕ್ಯಾಂಪಸ್ ಇಂಟರ್ ವ್ಯೂಗಳೂ ನೆಡೆಯುತ್ತಿದೆ. ಹೇಗೊ ಒಂದು ಉದ್ಯೋಗ ಹಿಡಿದು ’ಸುರಕ್ಷಿತ ವಲಯ’ (comfort zone)ಕ್ಕೆ ದಾಟಿಕೊಳ್ಳುವುದು ನನ್ನ ಗುರಿಯೇ? ಅಥವಾ ಸ್ವಲ್ಪ ಕಠಿಣ ಅನ್ನಿಸಿದರೂ ಸರಿ ನಾಲ್ಕು ಜನರಿಗೆ ಕೆಲಸ ಕೊಡುವ ಉದ್ಯೋಗದಾತನಾಗಲೇ?
ಯಾವ ದಾರಿಯಲ್ಲಿ ನಿಜವಾದ ಭವಿಷ್ಯವಿದೆ? ಸಾರ್ಥಕತೆ ಇದೆ? ಹೊಸ ದಾರಿಯಲ್ಲಿ ಭವಿಷ್ಯ ಹುಡುಕಲು ಹೊರಟವರಿಗೆ ಎದುರಾಗುವ ಸವಾಲುಗಳೇನು? ಅದಕ್ಕೆ ಬೇಕಾದ ಮಾನಸಿಕತೆ ಹೇಗಿರಬೇಕು? ನಮ್ಮ ಸುತ್ತಮುತ್ತ ಉದ್ಯೋಗದಾತರಾದವರ ಉದಾಹರಣೆ ಇದೆಯೇ? ಅವರ ಅನುಭವಗಳು ಹೇಳುವ ಪಾಠಗಳೇನು?

ಇದು ಈ ವರ್ಷದ ಉತ್ಥಾನ ಪ್ರಬಂಧ ಸ್ಪರ್ಧೆಯ ವಿಷಯದ ಚೌಕಟ್ಟು.


ವಿಷಯದ ಕುರಿತಾದ ನಿಮ್ಮ ವಿಚಾರಸರಣಿಯನ್ನು ಪ್ರಬಂಧ ರೂಪದಲ್ಲಿ ಬರೆಯಿರಿ. ೧೫೦೦ ಪದಗಳು ಮೀರದಂತೆ ಪ್ರಬಂಧವಿರಲಿ .

ಮೊದಲ ಬಹುಮಾನ: ರೂ. ೧೦,೦೦೦ /-
ಎರಡನೆಯ ಬಹುಮಾನ: ರೂ. ೭,೦೦೦ /-
ಮೂರನೆಯ ಬಹುಮಾನ: ರೂ. ೫,೦೦೦/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೨,೦೦೦/-

ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ಅಕ್ಟೋಬರ್ 30, 2022

ಕಳುಹಿಸಬೇಕಾದ ಇ-ಮೇಲ್ ವಿಳಾಸ : [email protected]

ಸ್ಪರ್ಧೆಯ ನಿಯಮಗಳು:

  • ಈ ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.

ನಿಮ್ಮ ಕೈಬರಹವನ್ನು post ಮೂಲಕ ಕಳುಹಿಸಬಹುದು. ಇಮೇಲ್ ಮೂಲಕ ಕಳುಹಿಸುವಾಗ ಕಡ್ಡಾಯವಾಗಿ ಟೈಪ್ ಮಾಡಿ (word fileನಲ್ಲಿ) ಕಳುಹಿಸಬೇಕು. ಫೋಟೋ ತೆಗೆದು pdf ಮಾಡಿ ಕಳುಹಿಸಿದಲ್ಲಿ ನಿಮ್ಮ ಪ್ರಬಂಧವನ್ನು ಸ್ವೀಕರಿಸುವುದಿಲ್ಲ.

  • ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
  • ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
  • ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
  • ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.
  • ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜೊತೆಗೆ ಭಾವಚಿತ್ರವೂ ಇರಬೇಕು.
  • ಪ್ರಬಂಧವನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (pdf ಮತ್ತು word file – ಎರಡನ್ನೂ) [email protected] – ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು.
  • ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ವು ಕಾಯ್ದಿರಿಸಿಕೊಂಡಿದೆ.
  • ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
  • ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:

ಸಂಪಾದಕರು, ’ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – 2022

’ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,

ಕೆಂಪೇಗೌಡನಗರ, ಬೆಂಗಳೂರು – ೫೬೦ ೦೦೪

ದೂರವಾಣಿ: 080- 26604673 / 77954 41894

ಪ್ರಬಂಧ ಕಳುಹಿಸಬೇಕಾದ ಇಮೇಲ್ ವಿಳಾಸ: [email protected]

ಇದು ಈ ವರ್ಷದ ಉತ್ಥಾನ ಪ್ರಬಂಧ ಸ್ಪರ್ಧೆಯ ವಿಷಯದ ಚೌಕಟ್ಟು.

One Response to “ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2022”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ