
ತುರ್ತುಪರಿಸ್ಥಿತಿಯ ವೇಳೆ ಖಾಸಗಿ ಮಾಲೀಕತ್ವದ ಪತ್ರಿಕೆಗಳು ಮತ್ತು ಅವುಗಳಿಗೆ ಜಾಹೀರಾತು ನೀಡುವ ಖಾಸಗಿ ಜಾಹೀರಾತು ಸಂಸ್ಥೆಗಳನ್ನೇ ಬಗ್ಗಿಸಿ ತಮಗೆ ಬೇಕಾದ ರೀತಿಯಲ್ಲಿ ನಡೆಯುವಂತೆ ಮಾಡಿದ ಕೇಂದ್ರ ವಾರ್ತಾ ಮಂತ್ರಿ ವಿ.ಸಿ. ಶುಕ್ಲ ಅವರು ತಮ್ಮ ಕೈಯೊಳಗಿರುವ ಸರ್ಕಾರೀ ಮಾಧ್ಯಮಗಳನ್ನು ಹೇಗೆ ನಡೆಸಿಕೊಂಡಿರಬಹುದೆನ್ನುವುದು ಊಹೆಗೆ ನಿಲುಕದ ವಿಷಯವೇನಲ್ಲ. ತುರ್ತುಪರಿಸ್ಥಿತಿ ಕಾಲದಲ್ಲಿ ಅವುಗಳಿಗೆ ಎರಡು ಮುಖ್ಯ ಕೆಲಸಗಳಿದ್ದವು. ಅವುಗಳೆಂದರೆ: ೧) ಪೋಷಕತ್ವದ (Patronage) ಒಂದು ಮೂಲವಾಗಿರುವುದು. ೨) ಒಂದು ರಾಜಕೀಯ ಪಕ್ಷ ಮತ್ತದರ ಕೆಲವು ನಾಯಕರ ಪ್ರತಿಷ್ಠೆಯನ್ನು (ವರ್ಚಸ್ಸು) ಬೆಳೆಸುವುದು. […]