ಈಗ್ಗೆ ಎಪ್ಪತ್ತೆಂಬತ್ತು ವರ್ಷ ಹಿಂದಿನವರೆಗೆ ಎರಡುಮೂರು ತಲೆಮಾರಿನವರು ಒಟ್ಟಿಗೇ ‘ಕೂಡು-ಕುಟುಂಬ’ವಾಗಿ ಇರುತ್ತಿದ್ದುದು ವಿರಳವಾಗಿರಲಿಲ್ಲ. ಉದ್ಯೋಗಾರ್ಥ ನಗರಗಳಿಗೋ ವಿದೇಶಗಳಿಗೋ ವಲಸೆ ಹೋಗುವುದು ಮೊದಲಾದ ಹಲವು ಕಾರಣಗಳಿಂದ ‘ಒಡೆದ’ ಕುಟುಂಬಗಳು ವ್ಯಾಪಕಗೊಂಡವು. ಕುಟುಂಬನಿಯಂತ್ರಣದ ಕಾರಣದಿಂದಲೂ ಕುಟುಂಬಗಳು ಸಂಕುಚಿತಗೊಳ್ಳತೊಡಗಿದವು. ಸ್ವಚ್ಛಂದತೆಯ ಆಕಾಂಕ್ಷೆ ಮೊದಲಾದವೂ ಸೇರಿಕೊಂಡವು. ಈಗಲಾದರೋ ಒಂದೇ ಮಗು ಇರುವ ಕುಟುಂಬಗಳು ಸಾಮಾನ್ಯ. ಸಮಸ್ಯೆಗಳು ತಲೆದೋರುವುದು ಅಪಘಾತಗಳೋ ಸಾವುನೋವುಗಳೋ ಎರಗಿದಾಗ. ಆಸರೆಗೆ ಜನರೇ ಇಲ್ಲದ ಸ್ಥಿತಿಯುಂಟಾಗುತ್ತದೆ. ಹೆಚ್ಚು ಜನರ ಸಂಗಡಿಕೆಯು ವ್ಯಾವಹಾರಿಕತೆಯಿಂದಾಚೆಗೆ ಸಾಂಸ್ಕೃತಿಕ-ಮಾನಸಿಕ ಆವಶ್ಯಕತೆಯನ್ನೂ ಪೂರಯಿಸುತ್ತದೆ. ಈಚಿನ ಕೋವಿಡ್ ಸಂದರ್ಭದಲ್ಲಿ ಅನೇಕರನ್ನು […]
ಕೂಡು-ಕುಟುಂಬ
Month : April-2024 Episode : Author :