೨೦೧೪ರಲ್ಲಿ ಮೂರು ಭೀಕರ ವಿಮಾನ ಅಪಘಾತ ಸಂಭವಿಸಿತು; ಅಲ್ಲವೇ? ಸ್ವಲ್ಪ ಯೋಚಿಸಿನೋಡಿ ಅಂತಹ ೩೦ ವಿಮಾನ ಅಪಘಾತವು ಪ್ರತಿವರ್ಷವೂ ಸಂಭವಿಸಿದರೆ ಏನಾದೀತೆಂದು……
ದುರ್ದೈವವೆಂದರೆ, ಅಂಥದ್ದೇ ಪರಿಸ್ಥಿತಿ ಭಾರತೀಯ ರೈತರ ಪಾಲಿಗೆ ಎರಗಿಬಂದಿರುವುದು. ಕಳೆದ ೧೯ ವರ್ಷಗಳಲ್ಲಿ, ಎರಡು ಲಕ್ಷದ ತೊಂಬತ್ತಾರು ಸಾವಿರದ ನಾಲ್ಕುನೂರ ಅರುವತ್ತಾರು (೨,೯೬,೪೬೬) ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅಂಥ ೬೦೦ ವಿಮಾನ ಅಪಘಾತಗಳಿಗೆ ಸಮವಾಗಿದೆ!

ನಮ್ಮೆಲ್ಲರ ಅನ್ನದಾತ, ನೇಗಿಲಯೋಗಿ ರೈತನಿಗೆ ನೆರವಾಗುವ ಬಗ್ಗೆ ನಮ್ಮ ಸರಕಾರ ಎಂದಾದರೂ ಯೋಚಿಸಿದೆಯೇ? ಹಾಗೆ ಅದು ಯೋಚಿಸುವುದಾದರೂ ಯಾವತ್ತೋ?
ಭಾರತದ ಅಭಿವೃದ್ಧಿ ಹಳ್ಳಿಗಳಿಂದ ಆರಂಭವಾಗಬೇಕೇ ಹೊರತು, ‘ಸ್ಮಾರ್ಟ್‌ಸಿಟಿ’ಗಳಿಂದ ಅಲ್ಲ.
ಏನಂತೀರಿ….?