ಭಾರತೀಯ ಸ್ತ್ರೀ ಅಂದರೆ ಪರ್ಣತೆಯ ಸಂಕೇತ. ಭಕ್ತಿ, ಶಕ್ತಿ, ಶೌರ್ಯ, ಸಾಹಸ, ತ್ಯಾಗ, ಸಹನೆ, ಜ್ಞಾನ ಹೀಗೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಉತ್ತುಂಗಕ್ಕೆ ಏರಿದವಳು ಆಕೆ. ನಮ್ಮ ದೇಶದಲ್ಲಿ ಸ್ತ್ರೀಯರು ಸಾಧನೆ ಮಾಡದ ಯಾವ ಕ್ಷೇತ್ರವೂ ಇಲ್ಲ. ಅದು ರಾಜಕೀಯದಿಂದ ಹಿಡಿದು ಅಧ್ಯಾತ ಕ್ಷೇತ್ರದವರೆಗೂ, ಕ್ರೀಡೆಯಿಂದ ಹಿಡಿದು ವಿಜ್ಞಾನ ಕ್ಷೇತ್ರದವರೆಗೂ ವಿಸ್ತರಿಸಿದೆ…
ಭಗವಂತನ ಸೃಷ್ಟಿಯಲ್ಲಿ ಗಂಡು-ಹೆಣ್ಣು ಎಂಬುದು ಒಂದೇ ಗಾಲಿಯ ಎರಡು ಚಕ್ರಗಳಿದ್ದಂತೆ. ಒಂದೇ ಜೀವದ ಎರಡು ಕಣ್ಣುಗಳು ಇದ್ದಂತೆ. ಇದರಲ್ಲಿ ಗಂಡು ಮೇಲು, ಹೆಣ್ಣು ಕೀಳು ಎಂಬ ತಾರತಮ್ಯದ ಭಾವವೇ ಬರುವುದಿಲ್ಲ. ಗಂಡು-ಹೆಣ್ಣು ಸಾಮರಸ್ಯದಿಂದ ಬದುಕಿದಾಗಲೇ ಸ್ವಸ್ಥಸಮಾಜದ ನಿರ್ಮಾಣವಾಗುತ್ತದೆ. ಗಂಡ ಮೇಲೋ, ಹೆಂಡತಿ ಮೇಲೋ? ಪುರುಷ ಶ್ರೇಷ್ಠನೋ, ಮಹಿಳೆ ಶ್ರೇಷ್ಠಳೋ? ಎಂಬಿತ್ಯಾದಿ ಪ್ರಶ್ನೆಯೇ ಒಂದು ರೀತಿಯಲ್ಲಿ ಹಾಸ್ಯಾಸ್ಪದ. ಇದು ಹೇಗೆಂದರೆ ನಮ್ಮ ಶರೀರದಲ್ಲಿ ಮೆದುಳು ಮುಖ್ಯವೋ, ಹೃದಯ ಮುಖ್ಯವೋ ಎಂಬ ಪ್ರಶ್ನೆಯಿದ್ದಂತೆ. ಮೆದುಳು ಮತ್ತು ಹೃದಯ ಎರಡೂ ಸಾಮರಸ್ಯದಿಂದ ಇದ್ದಾಗಲೇ ಜೀವನ ಸುಲಲಿತವಾಗಿ ಸಾಗುತ್ತದೆ. ಜೀವನದ ನೌಕೆ ಸುಗಮವಾಗಿ ಸಾಗಬೇಕಾದರೆ ಗಂಡು-ಹೆಣ್ಣು ಇಬ್ಬರ ಪಾತ್ರವೂ ಮುಖ್ಯ.
ಆದರೂ ನಮ್ಮ ಸಮಾಜ ಪರುಷಪ್ರಧಾನವಾಗಿ ಬೆಳೆದುಬಂದಿದೆ ಎನ್ನುತ್ತಾರೆ. ಸ್ತ್ರೀಯರ ಶರೀರಧರ್ಮಕ್ಕೆ ಸಂಬಂಧಿಸಿದಂತೆ ಆಕೆಗೆ ಕೆಲವೊಂದು ನಿರ್ಬಂಧಗಳಿರಬಹುದು, ಇತಿ-ಮಿತಿಗಳಿರಬಹುದು. ಇದರರ್ಥ ಮಹಿಳೆ ಗಂಡಿಗಿಂತ ಕೀಳು ಎಂದಲ್ಲ. ಆಕೆ ಶಾರೀರಿಕವಾಗಿ ಪರುಷರಿಗಿಂತ ದುರ್ಬಲಳಾಗಿದ್ದರೂ, ಮಾನಸಿಕವಾಗಿ ಪರುಷರಿಗಿಂತ ಪ್ರಬಲಳು, ಬೌದ್ಧಿಕವಾಗಿ ಪ್ರಬುದ್ಧಳು. ತನ್ನ ಸ್ವಂತ ವಿಷಯಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡುವ ಸ್ವಾತಂತ್ರ್ಯ ಆಕೆಗಿತ್ತು. ತನಗೆ ಸರಿಹೊಂದುವ ಗಂಡನನ್ನು ಹೂಮಾಲೆ ಹಾಕಿ ಆಯ್ಕೆ ಮಾಡುವ ಸ್ವಯಂವರದಂತಹ ಪದ್ಧತಿ ಪರಾಣದ ಕಾಲದಲ್ಲಿತ್ತು. ನಮ್ಮ ದೇಶದಲ್ಲಿ ಸ್ತ್ರೀಗೆ ಸ್ವಾತಂತ್ರ್ಯವಿತ್ತು. ಆದರೆ ಸ್ವಚ್ಛಂದತೆ ಇರಲಿಲ್ಲ. ಸ್ವಾತಂತ್ರ್ರ್ರ್ಯಕ್ಕೂ, ಸ್ವಚ್ಛಂದತೆಗೂ ಅಜಗಜಾಂತರವಿದೆ. ಯುವಕ, ಯುವತಿಯರಿಗೆ ಸ್ವಚ್ಛಂದತೆ ಕೊಟ್ಟರೆ ವಿವಾಹಪರ್ವ ಸಂತಾನ, ವಿವಾಹವಿಚ್ಛೇದಗಳಂತಹ ವಿಕೃತಿಗಳು ಸಮಾಜದಲ್ಲಿ ತಲೆದೋರುತ್ತವೆ ಎಂಬುದು ನಮ್ಮ ಹಿರಿಯರಿಗೆ ಗೊತ್ತಿತ್ತು.
ನಮ್ಮ ದೇಶದಲ್ಲಿ ಸ್ತ್ರೀಯರ ಬಗ್ಗೆ ಪಜ್ಯಭಾವನೆ ಪರಾತನಕಾಲದಿಂದಲೂ ಇತ್ತು. ಇಲ್ಲಿ ಎಲ್ಲ ದೇವರನ್ನು ಸ್ತ್ರೀಯರೊಂದಿಗೆ ನಾವು ಗೌರವಿಸುತ್ತೇವೆ. ಲಕ್ಷ್ಮೀನಾರಾಯಣ, ಪಾರ್ವತಿ-ಪರಮೇಶ್ವರ, ಸೀತಾರಾಮ, ರಾಧಾಕೃಷ್ಣ ಹೀಗೆ ಪರುಷರ ಹೆಸರಿಗಿಂತ ಸ್ತ್ರೀಯರ ಹೆಸರನ್ನೇ ಉಲ್ಲೇಖಿಸಿ, ಗೌರವಿಸಿ ಪರುಷ ದೇವರನ್ನು ಗುರುತಿಸುತ್ತೆವೆ. ನಾವು ದೇವರನ್ನು ತಾಯಿ ‘ಕಾಳಿ’ ಎಂದು ಕರೆಯುತ್ತೇವೆ. ಆದರೆ ಮಧ್ಯಪ್ರಾಚ್ಯದಲ್ಲಿ ಹುಟ್ಟಿದ ಜಗತ್ತಿನ ಬಹುತೇಕ ಮತಗಳು ದೇವರನ್ನು ತಂದೆ ಎನ್ನುತ್ತವೆ. ಸ್ತ್ರೀಯರ ಬಗ್ಗೆ ಈಗಲೂ ತಾರತಮ್ಯ ತೋರಿಸುತ್ತೇವೆ.
ಅನ್ಯ ಮತಗಳಲ್ಲಿ
ಶ್ರೀಮತಿ ಗೋಲ್ಡಾಮೇರ್ ಇಸ್ರೇಲ್ನ ಪ್ರಧಾನಮಂತ್ರಿಯಾಗಿದ್ದಾಗ, ಭಾರತದ ಪ್ರಧಾನಮಂತ್ರ್ರಿ ಶ್ರೀಮತಿ ಇಂದಿರಾಗಾಂಧಿ ಇಸ್ರೇಲ್ಗೆ ಹೋದರು. ಅವರಿಗೆ ಅಲ್ಲಿನ ಜನ ಹೇಗೆ ಪ್ರಾರ್ಥಿಸುತ್ತಾರೆ, ಪ್ರಾರ್ಥನಾಮಂದಿರ ಸಿನಗಾಗ್ನಲ್ಲಿ ಏನು ಮಾಡುತ್ತಾರೆ ಎಂದು ನೋಡಬೇಕೆಂದೆನಿಸಿದಾಗ. ಅವರನ್ನು ಅಲ್ಲಿನ ಒಂದು ಸಿನಗಾಗ್ಗೆ ಕರೆದುಕೊಂಡು ಹೋಗಿ ಬಾಲ್ಕನಿಯಲ್ಲಿ ಕುಳ್ಳಿರಿಸಲಾಯಿತು.
ಇಂದಿರಾಗಾಂಧಿ ಗೋಲ್ಡಾಮೇರ್ಳನ್ನು ಕೇಳಿದರು, ಇದೇನು, ಇಲ್ಲಿಯ ನಿಯಮವೇನು – ಪ್ರಧಾನ ಮಂತ್ರಿಗಳು ಮಾತ್ರ ಸಿನಗಾಗ್ನ ಬಾಲ್ಕನಿಯಲ್ಲಿ ಕುಳಿತುಕೊಳ್ಳಬೇಕೆಂಬುದು? ಎಂದು. ಏಕೆಂದರೆ ಇವರಿಬ್ಬರೂ ಸಹ ಮಹಿಳೆಯರೇ. ಗೋಲ್ಡಾಮೇರ್ಗೆ ತಮ್ಮ ಪದ್ಧತಿಯಲ್ಲಿ ಹೆಂಗಸರು ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕೆಂದು ಹೇಳಲು ಇಷ್ಟವಾಗಲಿಲ್ಲ. ಆದರೆ ಇಂದಿರಾಗಾಂಧೀ ಅಂದುಕೊಂಡಿದ್ದು, ‘ತಾವಿಬ್ಬರೂ ಪ್ರಧಾನಿಗಳಾಗಿರುವುದಿಂದ ತಮಗೆ ಪ್ರತ್ಯೇಕ ಸ್ಥಳವನ್ನಿತ್ತಿದ್ದಾರೆ’ ಎಂದು. ಹೌದು, ಪ್ರತ್ಯೇಕ ಸ್ಥಾನವೇನೆ ಸರಿಯೇ, ಆದರೆ ಅದು ಪ್ರಧಾನಿಗಳೆಂದು ಅಲ್ಲ, ಇಬ್ಬರೂ ಸ್ತ್ರೀಯರೆಂದು ಎಂಬ ಸಂಗತಿ ಇಂದಿರಾಗಾಂಧಿಗೆ ಹೊಳೆಯಲೇ ಇಲ್ಲ. ಇವರು ಪ್ರಧಾನಿಗಳಾಗಿರಬಹುದು, ಆದರೆ ಅದು ಅಲ್ಲಿ ಲೆಕ್ಕಕ್ಕಿಲ್ಲ. ಜ್ಯೂಗಳಲ್ಲಿ ಹೆಂಗಸು ಹೆಂಗಸೇ.
ಮಧ್ಯಪ್ರಾಚ್ಯ ದೇಶದಲ್ಲಿ ಹುಟ್ಟಿದ ಇನ್ನು ಕೆಲವು ಮತಗಳಲ್ಲಿ ಸ್ತ್ರೀಯರಿಗೆ ಪ್ರಾರ್ಥನಾಮಂದಿರಕ್ಕೆ ಹೋಗಿ ಪ್ರಾರ್ಥಿಸಲೂ ಅವಕಾಶವಿಲ್ಲ. ಆದರೆ ಭಾರತೀಯರಲ್ಲಿ ಸ್ತ್ರೀಯರಿಲ್ಲದೆ ಯಾವ ಪಜಾಕಾರ್ಯಗಳೂ ನಡೆಯುವುದಿಲ್ಲ. ನಮ್ಮ ಶಾಸ್ತ್ರದಲ್ಲಿ ಪಜಾಕಾರ್ಯಗಳನ್ನು ಗಂಡ-ಹೆಂಡತಿ ಇಬ್ಬರೂ ಸೇರಿ ಮಾಡಬೇಕೆಂಬ ನಿಯಮವಿದೆ. ಸ್ತ್ರೀಯರಿಲ್ಲದೆ ಯಾವ ಶುಭಕಾರ್ಯಕ್ಕೂ ಶೋಭೆಯೂ ಇಲ್ಲ, ಸಾರ್ಥಕತೆಯೂ ಇಲ್ಲ. ಭಾರತೀಯರಲ್ಲಿ ಧರ್ಮಪತ್ನಿ ಎಂಬ ಶಬ್ದಪ್ರಯೋಗವಿದೆಯೇ ವಿನಾ ಧರ್ಮಪತಿ ಎಂಬ ಶಬ್ದವಿಲ್ಲ.
‘ಮಹಿಳೆಯರು ನಿಸರ್ಗದತ್ತವಾಗಿ ಕೀಳುವರ್ಗಕ್ಕೆ ಸೇರಿದವರಾಗಿದ್ದಾರೆ’ ಎಂಬ ಅರಿಸ್ಟಾಟಲ್ನ ವಾದವನ್ನು ನಮ್ಮ ದೇಶ ಎಂದೂ ಅಂಗೀಕರಿಸಲಿಲ್ಲ. ವೇದಕಾಲದಿಂದಲೂ ವೇದ, ಉಪನಿಷತ್ತುಗಳ ಶ್ರೇಷ್ಠ ತತ್ತ್ವಗಳನ್ನು ಸ್ತ್ರೀಯರು ಇತರರಿಗೆ ಬೋಧಿಸಿದರು. ಋಗ್ವೇದವು ಸ್ತ್ರೀ ಕೂಡಾ ಬ್ರಹ್ಮಜ್ಞಾನಕ್ಕೆ ಅರ್ಹಳು ಎನ್ನುತ್ತದೆ (….ಸ್ತ್ರೀ ಹಿ ಬ್ರಹ್ಮಾ ವಿಭೂವಿಥಃ – ೮:೩೩:೧೯). ಆಕೆಯೂ ಯಜ್ಞೋಪವೀತ ಧರಿಸಿ ಯಜ್ಞ ಮಾಡಲು ಅರ್ಹಳು. ಆ ಸಮಯದಲ್ಲಿ ಸ್ತ್ರೀಯರಿಗೂ ಉಪನಯನದ ಸಂಸ್ಕಾರ ಮಾಡುವ ಪದ್ಧತಿ ಇತ್ತು ಎಂಬುದಾಗಿ ನಮ್ಮ ಸ್ಮೃತಿಗಳು ಸಾರುತ್ತವೆ.
ಶಾಸ್ತ್ರ ಪರಿಣತಿ
ಬಾಣಭಟ್ಟನ ‘ಕಾದಂಬರಿ’ಯಲ್ಲೂ ಈ ಬಗ್ಗೆ ಉಲ್ಲೇಖವೊಂದು ಬರುತ್ತದೆ. ‘ಬ್ರಹ್ಮಸೂತ್ರೇಣ ಪವಿತ್ರೀಕೃತ ಕಾಯಂ’ ಎಂದಿದೆ. ಅಂದರೆ ಯಜ್ಞಸೂತ್ರದಿಂದ ಪವಿತ್ರ ಮಾಡಲ್ಪಟ್ಟ ಶರೀರ ಉಳ್ಳವಳು ಎಂದರ್ಥ. ಋಗ್ವೇದದಲ್ಲಿ ಸ್ತ್ರೀಯರ ಬಗ್ಗೆ ಬ್ರಹ್ಮವಾದಿನಿ ಹಾಗೂ ಸದ್ಯೋವಧು ಎಂಬುದಾಗಿ ಎರಡು ರೀತಿಯ ಮಾಹಿತಿ ಸಿಗುತ್ತದೆ. ಚಿಕ್ಕಂದಿನಿಂದಲೆ ವೇದಾಧ್ಯಯನ ಮಾಡಿ ಪ್ರಾಯಕ್ಕೆ ಬಂದಾಗ ಮದುವೆಯಾಗುವುದನ್ನು ಸದ್ಯೋವಧು ಎನ್ನುತ್ತಾರೆ. ಬ್ರಹ್ಮವಾದಿನಿಯರು ತುಂಬಾ ಸಮಯ ಬ್ರಹ್ಮಚಾರಿಣಿಯರಾಗಿದ್ದು ವೇದಾಧ್ಯಯನ ಮಾಡುತ್ತಿದ್ದರು. ಅವರಿಗೆ ಉಪನಯನ, ಇನ್ನಿತರ ಸಂಸ್ಕಾರ ಇತ್ತು. ನಿತ್ಯಕರ್ಮದಲ್ಲಿ ಭಾಗಿಯಾಗುತ್ತಾ ಅವರು ಎಲ್ಲ ಯಜ್ಞ-ಯಾಗಗಳನ್ನು ಮಾಡುತ್ತಿದ್ದರು. ಇಂತಹ ಋಷಿಕೆಯರಲ್ಲಿ ಗೋಧಾ, ಅಪಾಲಾ, ಜುಹು, ಲೋಪಾಮುದ್ರಾ, ವಿಶ್ವಾವರ, ಸಿಕ್ತಾ, ಘೋಷಾ, ಮೈತ್ರೇಯಿ – ಹೀಗೆ ಕೆಲವರು. ಇವರೆಲ್ಲರೂ ವೇದಗಳ, ಪರಾಣಗಳ ಅಧ್ಯಯನವನ್ನು ನಡೆಸುತ್ತಿದ್ದರು. ಪರುಷರಂತೆ ಅವರೂ ಜ್ಞಾನಿಗಳಾಗಿದ್ದರು.
ಯಾಜ್ಞವಲ್ಕ್ಯರು ಪತ್ನಿಯಾದ ಮೈತ್ರೇಯಿಗೆ ತನ್ನ ಆಸ್ತಿಯನ್ನೆಲ್ಲ ನಿನಗೆ ಕೊಡುತ್ತೇನೆಂದಾಗ, ಅದರಿಂದ ಬ್ರಹ್ಮಜ್ಞಾನ ಸಿಗುವುದಿಲ್ಲವಲ್ಲ, ಆದ್ದರಿಂದ ನಿಮ್ಮ ಆಸ್ತಿಯಿಂದ ನನಗೇನು ಪ್ರಯೋಜನ? ಎಂಬುದಾಗಿ ಮೈತ್ರೇಯಿ ಪ್ರಶ್ನಿಸಿದಳು. ಅಂದರೆ ಅಂದಿನ ಸ್ತ್ರೀಯರಿಗೆ ಜ್ಞಾನದಾಹ ತುಂಬಾ ಇತ್ತು. ಅವರು ಶಾಸ್ತ್ರದಲ್ಲಿ ಪರಿಣತಿಯನ್ನೂ ಪಡೆದಿದ್ದರು.
ಶಂಕರಾಚಾರ್ಯರಿಗೂ ಮಂಡನಮಿಶ್ರರಿಗೂ ಶಾಸ್ತ್ರದ ವಾದ ನಡೆಯುವಾಗ ತೀರ್ಪುಗಾರರು ಯಾರು ಎಂಬ ಪ್ರಶ್ನೆ ಬರುತ್ತದೆ. ಆಗ ಶಂಕರಾಚಾರ್ಯರು ಮಂಡನಮಿಶ್ರರ ಪತ್ನಿ ಉಭಯಭಾರತಿ ತೀಪಗಾರಳಾಗಲಿ ಎಂಬುದಾಗಿ ಸೂಚಿಸುತ್ತಾರೆ. ಶಂಕರಾಚಾರ್ಯರು ಹಾಗೂ ಮಂಡನಮಿಶ್ರರು ಶಾಸ್ತ್ರದಬಗ್ಗೆ ಪ್ರೌಢಮಟ್ಟದ ವಾದ ಮಾಡುವಾಗ ಅವರಲ್ಲಿ ಯಾರು ಸೋತರು, ಯಾರು ಗೆದ್ದರು ಎಂದು ನಿರ್ಣಯ ಕೊಡುವಷ್ಟು ಪ್ರಬುದ್ಧತೆ, ವೈಚಾರಿಕತೆ ಉಭಯಭಾರತಿಗಿತ್ತು. ಅಷ್ಟು ಮಾತ್ರವಲ್ಲ, ಮಂಡನಮಿಶ್ರರು ವಾದದಲ್ಲಿ ಸೋತಾಗ ಉಭಯಭಾರತಿಯೇ ಶಂರಾಚಾರ್ಯರೊಂದಿಗೆ ವಾದಕ್ಕೆ ಕುಳಿತುಕೊಳ್ಳುತ್ತಾಳೆ. ಅಂದರೆ ವೇದ, ಪರಾಣ, ಶ್ರುತಿ, ಸ್ಮೃತಿಗಳನ್ನೆಲ್ಲ ಓದಿ ಅರಗಿಸಿಕೊಂಡು ಮಹಾಜ್ಞಾನಿಯಾಗಿದ್ದರಿಂದಲೇ ಉಭಯಭಾರತಿ ಶಂಕರಾಚಾರ್ಯರೊಂದಿಗೆ ವಾದಕ್ಕೆ ಕುಳಿತಿದ್ದಳು.
ಶಸ್ತ್ರ-ಶಾಸ್ತ್ರ ಧಾರಿಣಿ
ಪರಾಣಕಾಲದ ಸ್ತ್ರೀಯರು ಕೇವಲ ಶಾಸ್ತ್ರಾಧ್ಯಯನ ಮಾತ್ರ ಮಾಡುತ್ತಿರಲಿಲ್ಲ. ಅಗತ್ಯಬಿದ್ದಾಗ ಶಸ್ತ್ರವನ್ನೂ ಕೈಯಲ್ಲಿ ಹಿಡಿಯುತ್ತಿದ್ದರು. ಒಂದು ಕೈಯಲ್ಲಿ ಶಾಸ್ತ್ರ, ಇನ್ನೊಂದು ಕೈಯಲ್ಲಿ ಶಸ್ತ್ರವನ್ನು ಹಿಡಿಯುವ ಕ್ಷಾತ್ರತೇಜಸ್ಸು ಪರಾಣದ ಸ್ತ್ರೀಯರಲ್ಲಿ ಇತ್ತು.
ವೇದಕಾಲದಲ್ಲಿ ರಾಷ್ಟ್ರರಕ್ಷಣೆಯಲ್ಲಿ ವೀರಾಂಗನೆಯರು ಅಸಮಾನ ಶೌರ್ಯ ಮೆರೆದ ಉಲ್ಲೇಖಗಳು ಹಲವಾರಿವೆ. ಅಶ್ವಿನಿದೇವತೆಗಳ ವಿವಿಧ ಸಾಧನೆಗಳನ್ನು ಸ್ಮರಿಸುವ ಒಂದು ಸೂಕ್ತದಲ್ಲಿ ಬರುವ ವಾಕ್ಯದ ಅರ್ಥ – ‘ವಿಸ್ವಲೆಗೆ ಕೃತಕ ಕಾಲನ್ನು ಜೋಡಿಸಿದರು’ ಎಂದು. ಅದರ ಹಿನ್ನೆಲೆ ಹೀಗಿದೆ; ಈಗಿನ ವಾಯವ್ಯ ಭಾರತದಿಂದ ಮಧ್ಯಏಷ್ಯಾದವರೆಗಿನ ಬೃಹತ್ ಸಾಮ್ರಾಜ್ಯವನ್ನು ಆಳುತ್ತಿದ್ದ ಖೇಲ ಮಹಾರಾಜನ ಮೇಲೆ ವಿದೇಶೀ ಅಸುರರ ಆಕ್ರಮಣ ನಡೆಯಿತು. ರಾಜ ಆಗ ವ್ಯಾಧಿಗ್ರಸ್ತನಾಗಿದ್ದ. ಆದರೆ ರಣಕುಶಲಿಯಾಗಿದ್ದ ಅವನ ಮಗಳು ವಿಸ್ವಲೆ ಶತ್ರುಗಳನ್ನು ತಾನೇ ಯುದ್ಧಭೂಮಿಯಲ್ಲಿ ಎದುರಿಸಿದಳು. ಶತ್ರುಗಳ ಸೇನಾಬಲ ಖೇಲನದಕ್ಕಿಂತ ಮಿಗಿಲಾಗಿತ್ತು. ಯುದ್ಧದ ಸಂದರ್ಭದಲ್ಲಿ ವಿಸ್ವಲೆಯ ಕಾಲಿಗೆ ಗಾಯವಾಗಿ ವ್ರ್ರಣವಾಯಿತು. ಅವಳ ಕೋರಿಕೆಯಂತೆ ಅವಳ ಕಾಲನ್ನು ಕಡಿದು ಕೃತಕ ಕಾಲನ್ನು ಜೋಡಿಸಲಾಯಿತು. ತದನಂತರ ಆಕೆ ಮತ್ತೆ ರಣರಂಗಕ್ಕಿಳಿದು ವೀರಾವೇಶದಿಂದ ಹೋರಾಡಿದಳು. ಸ್ತ್ರೀಯಾದ ವಿಸ್ವಲೆಯೇ ಅಷ್ಟು ಶೌರ್ಯ ಮೆರೆದುದರಿಂದ ಅವಳ ಸೈನಿಕರಲ್ಲಿ ನವೋತ್ಸಾಹದ ಸಂಚಲನ ಉಂಟಾಯಿತು. ಸೈನಿಕರೆಲ್ಲರೂ ಉತ್ಸಾಹದಿಂದ, ದಿಟ್ಟತನದಿಂದ ಹೋರಾಡಿ ಗೆಲವನ್ನು ಪಡೆದರು. ವೀರಾಂಗನೆ ವಿಸ್ವಲೆಯ ಎದುರು ಹೋರಾಟ ಮಾಡಲಿಕ್ಕಾಗದೆ ಶತ್ರುಗಳು ಕೊನೆಗೆ ಪಲಾಯನಮಾಡಿದರು.
ನಮ್ಮ ಪರ್ವಜರು ಶರೀರಧರ್ಮಕ್ಕನುಸಾರವಾಗಿ ಸ್ತ್ರೀಯರಿಗೆ ಹಾಗೂ ಪರುಷರಿಗೆ ಸಂಸಾರದ ನಿರ್ವಹಣೆಯಲ್ಲಿ ಬೇರೆಬೇರೆ ಜವಾಬ್ದಾರಿಯನ್ನು ವಹಿಸಿದ್ದರೇ ವಿನಾ ಅದನ್ನು ಸ್ತ್ರೀಶೋಷಣೆ ಎಂಬುದಾಗಿ ಕರೆಯವುದು ಉಚಿತವಲ್ಲ. ಪರುಷರು ಮಾಡುವ ಕೆಲವೊಂದು ಕೆಲಸವನ್ನು ಸ್ತ್ರೀಯರು ಮಾಡಲಾಗುವುದಿಲ್ಲ. ಸ್ತ್ರೀಯರು ಮಾಡುವ ಕೆಲವೊಂದು ಕೆಲಸವನ್ನು ಪರುಷರು ಮಾಡಲಾಗುವುದಿಲ್ಲ. ತನ್ನ ಗರ್ಭದಲ್ಲಿದ್ದ ಮಗುವನ್ನು ಪ್ರೇಮದಿಂದ, ವಾತ್ಸಲ್ಯದಿಂದ, ಸಹನೆಯಿಂದ ಬೆಳೆಸುವ ಸೃಜನಾತ್ಮಕ ಶಕ್ತಿ ಸ್ತ್ರೀಯರಲ್ಲಿ ಮಾತ್ರ ಕಂಡುಬರುವುದು. ಸ್ತ್ರೀಯರು ಮನೆಯಲ್ಲಿದ್ದು ಮಕ್ಕಳ ಲಾಲನೆ ಪಾಲನೆ ಮಾಡುವುದು ಬುದ್ಧಿಜೀವಿಗಳ ಪಾಲಿಗೆ ಶೋಷಣೆಯಾಗಿ ಕಂಡುಬರುತ್ತದೆ. ಇಂದಿನ ಕಾಲದಲ್ಲೂ ಎಷ್ಟೋ ಜನ ಮಾತೆಯರು ಗೃಹಿಣಿಯರಾಗಿಯೇ ಇರಲು ಇಷ್ಟಪಡುತ್ತಾರೆ. ತಾನಾಗಿ ಅಯ್ಕೆಮಾಡಿದ ಕೆಲಸಕ್ಕೂ, ಆಕೆಯ ಮೇಲೆ ಹೇರಿದ ಒತ್ತಡಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಒತ್ತಾಯಕ್ಕೆ ಮಣಿದು ಮಾಡುವ ಕೆಲಸದಲ್ಲಿ ಸಂತೋಷವಿರುವುದಿಲ್ಲ, ತೃಪ್ತಿಯಿರುವುದಿಲ್ಲ. ಇಚ್ಛೆಯಿಂದ ಮಾಡಿದ ತ್ಯಾಗದಲ್ಲಿ ಸಂತೋಷ, ತೃಪ್ತಿಯಿರುತ್ತದೆ. ಇದನ್ನು ಗುರುತಿಸುವ ಪ್ರಬುದ್ಧತೆ ಇಂದಿನ ಬುದ್ಧಿಜೀವಿಗಳಲ್ಲಿ ಇಲ್ಲದೆ ಇರುವುದು ವಿಷಾದದ ಸಂಗತಿ.
ಸಮಯಪ್ರಜ್ಞೆ
ಭಾರತೀಯ ನಾರಿಯರು ಸಮಯ-ಸಂದರ್ಭಕ್ಕೆ ಸರಿಯಾಗಿ ಹೇಗೆ ವರ್ತಿಸಬೇಕು, ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂಬ ಚಾತುರ್ಯವನ್ನೂ ಸಾಮರ್ಥ್ಯವನ್ನೂ ಪಡೆದವರಾಗಿದ್ದರು. ಅತ್ರಿಮಹರ್ಷಿಯ ಪತ್ನಿ ಅನಸೂಯ ಮಹಾಪತಿವ್ರತೆಯಾಗಿದ್ದಳು. ಆಕೆಯ ಪಾತಿವ್ರತ್ಯವನ್ನು ಪರೀಕ್ಷಿಸಲು ತ್ರಿಮೂರ್ತಿಗಳು ಅತ್ರಿ ಮುನಿಯ ಆಶ್ರಮಕ್ಕೆ ಬಂದು ಭಿಕ್ಷೆ ಬೇಡಿದರು. ಆಗ ಅತ್ರಿಮಹರ್ಷಿ ನದೀತೀರಕ್ಕೆ ಆಹ್ನಕ್ಕೆಂದು ಹೋಗಿದ್ದರು. ಪತಿವ್ರತೆಯಾದ ಅನಸೂಯೆಯು ಬಂದ ಅತಿಥಿಗಳನ್ನು ಸ್ವಾಗತಿಸಿದಳು.
ಅವರು ತಾಯಿ, ನಮಗೆ ಹಸಿವಾಗಿದೆ; ಇಚ್ಛಾಭೋಜನವನ್ನು ನೀಡು ಎಂದರು. ಆಗ ಆಕೆಯು ಭೋಜನ ಸಿದ್ಧವಾಗಿದೆ. ನೀವು ಊಟ ಮಾಡಿರಿ ಎಂದಳು.
ಆಗ ಅವರು, ಆಗಲಿ, ಆದರೆ ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂದರು. ಆಗ ಅನಸೂಯೆಗೆ ಇವರು ತನ್ನ ಪರೀಕ್ಷಾರ್ಥವಾಗಿ ಬಂದ ದೈವೀಪರುಷರೆಂಬ ಅರಿವಾಗಿ, ಆಗಲಿ ಎಂದಳು. ತ್ರಿಮೂರ್ತಿಗಳ ವಿಚಿತ್ರ ಬೇಡಿಕೆಯಿಂದ ಆಕೆ ವಿಚಲಿತಳಾಗಿಲ್ಲ. ತ್ರಿಮೂರ್ತಿಗಳ ಬೇಡಿಕೆಯೂ ಈಡೇರಬೇಕು, ತನ್ನ ಗೌರವಕ್ಕೂ ಚ್ಯುತಿ ಬರಬಾರದೆಂಬುದಾಗಿ ಸಂಕಲ್ಪಿಸಿ, ತನ್ನ ತಪೋಬಲದಿಂದ ಅತಿಥಿಗಳನ್ನು ಶಿಶುಗಳನ್ನಾಗಿ ಮಾಡಿಬಿಟ್ಟಳು. ಅನಂತರ ಊಟವನ್ನು ಬಡಿಸಿದಳು. ಆಗ ಆಕೆಗೆ ಅವರಲ್ಲಿ ಪತ್ರವಾತ್ಸಲ್ಯ ಮೂಡಿತು. ಆ ಮೂವರನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಹಾಲುಣಿಸಿದಳು. ಕೊನೆಗೂ ತ್ರಿಮೂರ್ತಿಗಳು ಅನಸೂಯಳ ಪಾತಿವ್ರತ್ಯವನ್ನು ಹಾಗೂ ಸಮಯಕ್ಕೆ ಸರಿಯಾದ ವರ್ತನೆ ಮತ್ತು ಆಕೆಯ ಆತಿಥ್ಯದಿಂದ ಸಂತುಷ್ಟರಾದರು. ಅತ್ರಿ-ಅನಸೂಯರ ಕೋರಿಕೆಯ ಮೇರೆಗೆ ತ್ರಿಮೂರ್ತಿಸ್ವರೂಪನಾದ ದತ್ತಾತ್ರೇಯ ಅವರ ಮಗನಾಗಿ ಜನಿಸಿದ.
ಕೆಲವು ಇತಿಹಾಸ ತಥ್ಯಗಳು
ಬುದ್ಧಿಜೀವಿಗಳು ಸ್ತ್ರೀಯರ ಶೋಷಣೆಗೆ ಉದಾಹರಣೆಯಾಗಿ ಸತಿಸಹಗಮನ ಪದ್ಧತಿ, ಬಾಲ್ಯವಿವಾಹ ಪದ್ಧತಿ ಮುಂತಾದವುಗಳನ್ನು ಉಲ್ಲೇಖಿಸುತ್ತಾರೆ. ಆದರೆ ಇಂತಹ ಪದ್ಧತಿಗಳು ಯಾವಾಗ, ಯಾಕಾಗಿ ನಮ್ಮ ಸಮಾಜದಲ್ಲಿ ಆಚರಣೆಗೆ ಬಂದಿತ್ತು ಎಂಬುದನ್ನು ವಿಮರ್ಶೆ ಮಾಡುವ ವ್ಯವಧಾನ ಅವರಲ್ಲಿ ಇರುವುದಿಲ್ಲ. ವಿದೇಶೀ ವಿಧರ್ಮೀಯರು ಈ ದೇಶದ ಮೇಲೆ ದಂಡೆತ್ತಿ ಬಂದು, ನಮ್ಮ ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಲು ಪ್ರಾರಂಭಿಸಿದಾಗ ಸತಿಸಹಗಮನ, ಬಾಲ್ಯವಿವಾಹ ಮುಂತಾದ ಪದ್ಧತಿಗಳು ಆಚರಣೆಗೆ ಬಂದವೇ ವಿನಾ ಅದು ಪರಾಣಕಾಲದಿಂದಲೂ ನಡೆದುಬಂದ ಸನಾತನ ಸಂಸ್ಕೃತಿಯಲ್ಲ. ವಿಧರ್ಮೀಯರ ಆಕ್ರಮಣP ಒಳಗಾಗಿ ಗಂಡ ತೀರಿಕೊಂಡಾಗ ಶತ್ರುಗಳ, ಕಾಮಪಿಪಾಸುಗಳ ಅತ್ಯಾಚಾರಕ್ಕೆ ಒಳಗಾಗಬಾರದು ಎಂಬ ಪ್ರಜ್ಞೆಯಿಂದ ಸ್ತ್ರೀ ತನ್ನ ಸ್ವಂತ ಇಚ್ಛೆಯಿಂದಲೆ ಸಹಗಮನ ಮಾಡಿದರೆ ಅದು ಬಲಿದಾನವೆ? ಸ್ತ್ರೀ ಶೋಷಣೆಯೆ? ಒಂದು ವೇಳೆ ಚಿತೆಗೆ ಹಾರದೆ ಆಕ್ರಮಣಕಾರರ ಲೈಂಗಿಕ ದೌರ್ಜನ್ಯಕ್ಕೊಳಗಾಗುವುದು ಶೋಷಣೆಯಲ್ಲವೆ?
ಚಿತ್ತೂರು ರಾಜಸ್ಥಾನದ ಆತ್ಮದಂತೆ. ರಜಪೂತರ ಶೌರ್ಯ, ಬಲಿದಾನಗಳು ಅದರ ಬೆಳಕು. ೧೨ನೇ ಶತಮಾನದಲ್ಲಿ ಚಿತ್ತೂರಿನಲ್ಲಿ ಪದ್ಮಿನಿ ಎಂಬ ರಾಣಿಯಿದ್ದಳು. ಅವಳು ಗುಣ, ಸೌಂದರ್ಯಗಳ ಗಣಿಯಾಗಿದ್ದಳು. ಇವಳ ಸೌಂದರ್ಯದ ವರ್ಣನೆಯನ್ನು ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಕೇಳಿದ. ಅವಳನ್ನು ಪಡೆಯಲೇಬೇಕೆಂಬ ಹುಚ್ಚು ಹಿಡಿದು ದೊಡ್ಡ ಸೈನ್ಯದ ಸಹಿತ ಬಂದು ಚಿತ್ತೂರಿಗೆ ಮುತ್ತಿಗೆ ಹಾಕಿದ. ಅನೇಕ ತಿಂಗಳಾದರೂ ಕೋಟೆ ಅವನ ವಶವಾಗಲಿಲ್ಲ. ಆಗ ಮೋಸಮಾಡಿ ಜಯಗಳಿಸುವ ಯೋಜನೆ ಮಾಡಿ, ಏಕಾಂಗಿಯಾಗಿದ್ದ ರಾಜ ಭೀಮಸಿಂಹನನ್ನು ಬಂಧಿಸಿ, ಪದ್ಮಿನಿ ನನ್ನವಳಾದರೆ ರಾಜನನ್ನು ಬಿಡುವೆ, ಇಲ್ಲವಾದಲ್ಲಿ ರಾಜನ್ನು ವಧಿಸುವೆ ಎಂದು ಹೇಳಿಕಳುಹಿಸಿದ.
ರಜಪತರಿಗೆ ತುಂಬ ನಿರಾಶೆ, ಕೋಪ ಬಂತು. ಆದರೆ ಮಾಡುವುದೇನು? ಆಗ ಪದ್ಮಿನಿಗೆ ಸಲಹೆಗಾರರಾಗಿ ಸಹಾಯಕರಾಗಿ ಇಬ್ಬರು ಧೀರರು ಮುಂದೆ ಬಂದರು. ಎಪ್ಪತ್ತು ವರ್ಷದ ಗೋರಾ; ಹದಿನೇಳು ವರ್ಷದ ಬಾದಲ. ಇಬ್ಬರ ಸಲಹೆಯಂತೆ ಪದ್ಮಿನಿ ಖಿಲ್ಜಿಗೆ ಹೇಳಿಕಳುಹಿಸಿದಳು: ಸುಲ್ತಾನರ ಬಳಿಗೆ ಬರುವೆ. ನನ್ನೊಡನೆ ನನ್ನ ಸಖಿಯರು ಇರುತ್ತಾರೆ. ಮೊದಲು ನನ್ನ ಪತಿಯನ್ನು ಒಂಟಿಯಾಗಿ ನೋಡಲು ಅವಕಾಶ ಬೇಕು. ಸುಲ್ತಾನ ತನ್ನ ಉಪಾಯ ಸಫಲವಾಯ್ತೆಂದು ಹಿಗ್ಗಿದ. ಐನೂರು ಸಖಿಯರು ಪಲ್ಲಕ್ಕಿಗಳಲ್ಲಿ ಹೊರಟರು. ಪದ್ಮಿನಿಯ ಪಲ್ಲಕ್ಕಿ ರಾಜನಿದ್ದ ಡೇರೆಗೆ ಹೋಯಿತು. ಪಲ್ಲಕ್ಕಿ ಒಳಗೆ ಬಂದಾಗ ಇಳಿದ ವ್ಯಕ್ತಿ, ‘ಮಹಾರಾಜ, ನಾನು ಬಾದಲ, ಪದ್ಮಿನಿಯಲ್ಲ. ಮೊದಲು ನೀವು ಚಿತ್ತೂರು ಸೇರಿ’ ಎಂದು ಅವನ ಬಂಧನಗಳನ್ನು ಕತ್ತರಿಸಿ ಬಿಡುಗಡೆ ಮಾಡಿದ. ಅವನತ್ತ ಹೋಗುತ್ತಿದ್ದಂತೆ ಸಖಿಯರ ವೇಷದಲ್ಲಿ ಬಂದಿದ್ದ ಗೋರಾ ಇತ್ಯಾದಿ ಸೈನಿಕರೆಲ್ಲ ಸಾಹಸದಿಂದ ಯುದ್ಧಮಾಡಿ ಅಲ್ಲ್ಲಾವುದ್ದೀನ್ನನ್ನು ಸೋಲಿಸಿದರು. ಆದರೆ ಕಾಳಗದಲ್ಲಿ ಗೋರಾ ಸ್ವರ್ಗಸ್ಥನಾದ. ಸೋತ ಅಲ್ಲಾವುದ್ದೀನ ಮತ್ತಷ್ಟು ಕೆರಳಿದ. ಮತ್ತೊಮ್ಮೆ ಹೆಚ್ಚು ಸೈನ್ಯದೊಡನೆ ಚಿತ್ತೂರನ್ನು ಮುತ್ತಿದ. ಅನೇಕ ತಿಂಗಳ ಹೋರಾಟದ ನಂತರ ಗೆಲ್ಲುವ ದಾರಿ ಕಾಣದೆ ರಜಪತ ನಾರಿಯರೆಲ್ಲರೂ ‘ಜೌಹಾರ್’ ನಡೆಸಲು ನಿಶ್ಚಯಿಸಿದರು. ದೊಡ್ಡ ಚಿತೆಯೊಂದು ಸಿದ್ಧವಾಯ್ತು. ಪದ್ಮಿನಿ ಇತ್ಯಾದಿ ರಜಪತ ನಾರಿಯರೆಲ್ಲ ಶತ್ರುವಶವಾಗುವ ಬದಲು ಅಗ್ನಿಪ್ರವೇಶ ಮಾಡಿದರು. ಕೋಟೆಯ ಒಳಗೆ ಆಸೆಯಿಂದ ಬಂದ ಅಲ್ಲಾವುದ್ದೀನನಿಗೆ ಸಿಕ್ಕಿದ್ದು ಉರಿಯುತ್ತಿದ್ದ ಚಿತೆ ಮಾತ್ರ. ಹಿಂದುಗಳ ಮಾನ, ಸ್ವಾಭಿಮಾನ ಅವನಿಗೊಂದು ಅರ್ಥವಾಗದ ಒಗಟಾಗಿಯೇ ಉಳಿಯಿತು.
ಭಾರತೀಯ ಮಾತೆಯರು ಸಹನಾಮೂರ್ತಿಗಳಾಗಿದ್ದರೂ, ತ್ಯಾಗಮೂರ್ತಿಗಳಾಗಿದ್ದರೂ ದೇಶ, ಧರ್ಮಕ್ಕೆ ಚ್ಯುತಿ ಬರುವಾಗ ಹೋರಾಟಕ್ಕೂ ಸಿದ್ಧರಾಗುತ್ತಿದ್ದರು. ಎಷ್ಟೋ ಸ್ತ್ರೀಯರು ಗಂಡ ರಣರಂಗದಲ್ಲಿ ಯುದ್ಧ ಮಾಡುವಾಗ ಆತನೊಂದಿಗೆ ತಾವೂ ಹೋರಾಟ ಮಾಡಿದ್ದಿದೆ. ದಶರಥನಿಗೆ ಯುದ್ಧದಲ್ಲಿ ಕೈಕೇಯಿ ಸಹಾಯ ಮಾಡಿದ್ದರಿಂದಲೇ ದಶರಥ ಮಹಾರಾಜ ಆಕೆಗೆ ಎರಡು ವರಗಳನ್ನು ಕೇಳಲು ಅವಕಾಶ ಕೊಟ್ಟ್ಟಿದ್ದ. ರಾಣಿ ಸರ್ವೇಶ್ವರಿ, ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಅಸಂಖ್ಯಾತ ಮಹಿಳೆಯರು ಈ ಮಾತೃಭೂಮಿಗಾಗಿ ಹೋರಾಡಿ ಹುತಾತ್ಮರಾಗಿದ್ದಾರೆ.
ಸ್ತ್ರೀವಾದಿಗಳ ಪ್ರಧಾನ ಆಪಾದನೆಯೆಂದರೆ ಪರುಷರಿಂದ ಮಹಿಳೆ ಶೋಷಣೆಗೊಳಗಾಗುತ್ತಾಳೆ ಎಂಬುದು. ವಿಶೇಷವಾಗಿ ಗಂಡನಿಂದ ಪೀಡಿತಳಾಗಿರುತ್ತಾಳೆ, ಆಕೆ ಹುಟ್ಟಿದ್ದೇ ಗಂಡನನ್ನು ಸಂತೋಷ ಪಡಿಸಲು, ಆಕೆ ಗಂಡನ ಮಾತನ್ನು ಮೀರಬಾರದು, ಆತ ಹಾಕಿದ ಲಕ್ಷ್ಮಣರೇಖೆಯನ್ನು ದಾಟಬಾರದು, ಗಂಡ ಹೇಳಿದಂತೆ ಮನೆಯಲ್ಲಿ ಬಿದ್ದಿರಬೇಕು, ಗಂಡನಿಗೆ ಸದಾ ಹೆದರಿಕೊಂಡು ವಿಧೇಯಳಾಗಿರಬೇಕು, ಇತ್ಯಾದಿ ಎಲ್ಲ್ಲ ಆಪಾದನೆಗಳಿಗೆ ಅಪವಾದವಾಗಿದ್ದಳು ‘ಭಾರತೀಯ ಸ್ತ್ರೀ’. ಆಕೆ ಗಂಡನಿಗೆ ವಿಧೇಯಳೂ ಆಗಿರುತ್ತಾಳೆ; ಅನ್ಯಾಯ, ಅಧರ್ಮ ನಡೆದಾಗ ಗಂಡನ ವಿರೋಧಿಯೂ ಆಗುತ್ತಾಳೆ. ಆಕೆ ಎಲ್ಲರನ್ನು ಸಾಕಿಸಲಹುವ ಕರುಣಾಮಯಿ ತಾಯಿಯೂ ಆಗುತ್ತಾಳೆ; ಅಗತ್ಯ ಬಿದ್ದಾಗ ದುರ್ಗೆಯೂ ಆಗುತ್ತಾಳೆ, ಕಾಳಿಯೂ ಆಗುತ್ತಾಳೆ.
ದುರ್ಗಾದಾಸ ಮಹಾರಾಷ್ಟ್ರದ ಅಪ್ರತಿಮವೀರರಲ್ಲಿ ಒಬ್ಬ. ಆತ ಮೊಗಲ್ ರಾಜರಿಗೆ ಸಿಂಹಸ್ವಪ್ನವಾಗಿದ್ದ. ಮೊಗಲರಾಜನು ಏನಾದರೂ ಉಪಾಯ ಮಾಡಿ ಅವನನ್ನು ಕೊಲ್ಲಬೇಕೆಂದು ಪ್ರಯತ್ನಪಡುತ್ತಿದ್ದ. ಆದರೆ ದುರ್ಗಾದಾಸ ಅವನ ಎಲ್ಲ ಉಪಾಯಗಳನ್ನು ಮೊದಲೇ ಹೇಗೋ ತಿಳಿದು ಅವನ್ನು ವಿಫಲಗೊಳಿಸುತ್ತಿದ್ದ.
ಒಂದು ಸಲ ದುರ್ಗಾದಾಸ ತೀರ್ಥಯಾತ್ರೆ ಮಾಡಲು ಇಚ್ಛಿಸಿ ದಕ್ಷಿಣ ಭಾರತದ ಕಡೆ ಹೊರಟ. ದಾರಿಯ ಮಧ್ಯದಲ್ಲ್ಲಿ ಒಬ್ಬ ಮರಾಠಿಗನ ಮನೆಯಲ್ಲಿ ಉಳಿದುಕೊಂಡ. ಬಹಳ ದಿನಗಳಿಂದ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಆದ್ದರಿಂದ ಆ ರಾತ್ರಿ ಅಲ್ಲಿಯೇ ತಂಗಿ ಮರುದಿನ ಮುಂದಕ್ಕೆ ಪ್ರಯಣ ಮಾಡಲು ನಿಶ್ಚಯಿಸಿದ್ದು ಆಯಾಸಗೊಂಡಿದ್ದುದರಿಂದ ಬೇಗನೆ ನಿದ್ರೆ ಮಾಡಿದ.
ಆ ಮನೆಯ ಯಜಮಾನ ಮೊಗಲ ರಾಜ್ಯದ ಸೇವಕನಾಗಿದ್ದ. ಮನೆಗೆ ಬಂದ ಅತಿಥಿಯನ್ನು ನೋಡಿ ಇವನು ಮೊಗಲ್ ರಾಜ್ಯದ ಶತ್ರುವಾದ ದುರ್ಗಾದಾಸನೆಂದು ತಿಳಿದು ಅವನಿಗೆ ಬಹಳ ಸಂತೋಷವಾಯಿತು. ಅವನು ತನ್ನ ಪತ್ನಿಯನ್ನು ಕರೆದು -ನಮ್ಮ ಮನೆಗೆ ಧನಲಕ್ಷ್ಮಿ ತಾನಾಗಿಯೇ ಬಂದಿದ್ದಾಳೆ ಎಂದು ಹೇಳಿದ. ಯಾರು ಆ ಭಾಗ್ಯಲಕ್ಷ್ಮಿ? ಎಂದು ಆಶ್ಚರ್ಯದಿಂದ ಕೇಳಿದಳು ಪತ್ನಿ. ಅವನು ದುರ್ಗಾದಾಸನನ್ನು ತೋರಿಸುತ್ತಾ – ಇವನು ನಮ್ಮ ಒಡೆಯನಾದ ಮೊಗಲ್ ರಾಜನ ಶತ್ರು ದುರ್ಗಾದಾಸ. ಇವನನ್ನು ನಾವು ಇಲ್ಲಿಯೇ ಕೊಂದರೆ ರಾಜನು ನನಗೆ ತುಂಬಾ ಪಾರಿತೋಷಿಕಗಳನ್ನು ಕೊಡುತ್ತಾನೆ ಎಂದು ಪಿಸುಮಾತಿನಲ್ಲಿ ಹೇಳಿದ. ಆದರೆ ಅತಿಥಿಯಾಗಿ ಬಂದಿರುವ ದೇಶಭಕ್ತನನ್ನು ಕೊಲ್ಲುವುದನ್ನು ಅವನ ಹೆಂಡತಿ ನಿರಾಕರಿಸಿದಳು.
ಎಂತಹ ಮೂರ್ಖಳು ನೀನು, ಈ ರೀತಿಯ ಅವಕಾಶವು ಎಲ್ಲಿ ಸಿಗುತ್ತೆ? ದೂರ ಹೋಗು! ಎಂದು ಅವಳನ್ನು ನಿಂದಿಸುತ್ತಾ ಆತ ದುರ್ಗಾದಾಸನನ್ನು ಕತ್ತಿಯಿಂದ ಕೊಲ್ಲಲು ಸಿದ್ಧನಾದ.
ಆ ಸಾಧ್ವಿಯು ಇನ್ನು ಮುಂದಕ್ಕೆ ಬಿಡಬಾರದು ಎಂದು ಯೋಚಿಸಿ ಪತಿಯ ಸಮೀಪಕ್ಕೆ ಓಡಿದಳು. ಅವನ ಕೈಯಿಂದ ಕತ್ತಿಯನ್ನು ಕಿತ್ತುಕೊಂಡು ತನ್ನ ಹೊಟ್ಟೆಗೆ ಚುಚ್ಚಿಕೊಂಡಳು. ನೀಚ, ನಿನಗೆ ಧಿಕ್ಕಾರ. ಈ ದಿನ ನೀನು ಮರಾಠಕುಲದ ಗೌರವವನ್ನು ಹಾಳುಮಾಡಿದೆ. ನಿನ್ನಂಥ ನೀಚನೊಡನೆ ಪತ್ನಿಯಾಗಿ ಒಂದು ಕ್ಷಣವೂ ನಾನು ಜೀವಿಸಲು ಇಚ್ಛಿಸುವುದಿಲ್ಲ. ದೇಶದ್ರೋಹಕ್ಕಿಂತ ದೊಡ್ಡ ಪಾಪ ಬೇರೊಂದಿಲ್ಲ ಎಂದು ಹೇಳುತ್ತಾ ಆ ವೀರವನಿತೆ ತನ್ನ ಪ್ರಾಣಬಿಟ್ಟಳು. ಈ ರೀತಿಯ ದೃಶ್ಯವನ್ನು ನೋಡಿ ಆತ ದುರ್ಗಾದಾಸನನ್ನು ಎಬ್ಬಿಸಿ ಕ್ಷಮೆ ಕೇಳಿ, ತಾನು ಕೂಡ ಆತ್ಮಾರ್ಪಣೆ ಮಾಡಿಕೊಂಡ.
ಒಂದು ಧ್ರುವತಾರೆ
ಇಂತಹ ಶೌರ್ಯವಂತ ಸ್ತ್ರೀಯರ ಮಧ್ಯೆ ಧ್ರುವತಾರೆಯಂತೆ ಬೆಳಗುವಾಕೆ ಉಳ್ಳಾಲದ ಅಬ್ಬಕ್ಕದೇವಿ. ಕ್ರಿ.ಶ. ೧೬ನೇ ಶತಮಾನದಲ್ಲಿ ಪೋರ್ಚುಗೀಸರು ಕರ್ನಾಟಕ ಪಶ್ಚಿಮ ಕರಾವಳಿಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಪೆರ್ಚುಗೀಸರಿಗೆ ಸಹಕರಿಸುತ್ತಿದ್ದ ತನ್ನ ಪತಿಯನ್ನು ತ್ಯಜಿಸಿ, ತವರೂರಾದ ಉಳ್ಳಾಲಕ್ಕೆ ಹಿಂದಿರುಗಿದ ಅಬ್ಬಕ್ಕದೇವಿ, ಪೆರ್ಚುಗೀಸರನ್ನು ಯುದ್ಧದಲ್ಲಿ ಸೋಲಿಸಿ ತುಳುನಾಡಿನಿಂದ ಅವರನ್ನು ಓಡಿಸಿದಳು. ಆಗ ಯೂರೋಪಿನಲ್ಲಿಯೇ ಬಲಿಷ್ಠರಾಗಿದ್ದ ಪೋರ್ಚುಗೀಸರನ್ನು ಒಂದು ಪಟ್ಟ ರಾಜ್ಯದ ರಾಣಿ ಸೋಲಿಸಿರುವುದು ಜಗತ್ತನ್ನೇ ಅಚ್ಚರಿಗೊಳಿಸಿತು. ಇತಿಹಾಸದಲ್ಲಿ ಇದು ಒಂದು ದೊಡ್ಡ ಘಟನೆ ಎನಿಸಿತು. ಆಕೆಯ ಅನಂತರವೂ ಆಕೆಯ ಮಗಳಾದ ಎರಡನೆಯ ಅಬ್ಬಕ್ಕದೇವಿ ಪೋರ್ಚುಗೀಸರಿಗೆ ಸಿಂಹಸ್ವಪ್ನವೆನಿಸಿದ್ದಳು.
ಭಾರತೀಯ ಸ್ತ್ರೀ ಅಂದರೆ ಪರ್ಣತೆಯ ಸಂಕೇತ. ಭಕ್ತಿ, ಶಕ್ತಿ, ಶೌರ್ಯ, ಸಾಹಸ, ತ್ಯಾಗ, ಸಹನೆ, ಜ್ಞಾನ ಹೀಗೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಉತ್ತುಂಗಕ್ಕೆ ಏರಿದವಳು ಆಕೆ. ನಮ್ಮ ದೇಶದಲ್ಲಿ ಸ್ತ್ರೀಯರು ಸಾಧನೆ ಮಾಡದ ಯಾವ ಕ್ಷೇತ್ರವೂ ಇಲ್ಲ. ಅದು ರಾಜಕೀಯದಿಂದ ಹಿಡಿದು ಅಧ್ಯಾತ ಕ್ಷೇತ್ರದವರೆಗೂ, ಕ್ರೀಡೆಯಿಂದ ಹಿಡಿದು ವಿಜ್ಞಾನ ಕ್ಷೇತ್ರದವರೆಗೂ ವಿಸ್ತರಿಸಿದೆ.
ಹೆಣ್ಣಿನ ಪಾಂಡಿತ್ಯ ಆಕೆಗೆ ಹುಟ್ಟಿನಿಂದಲೇ ಲಭಿಸುತ್ತದೆ. ಆದರೆ ಗಂಡಿನ ಪಾಂಡಿತ್ಯ ಆತನಿಗೆ ಅಧ್ಯಯನದಿಂದಲೇ ಬರಬೇಕು ಎಂಬುದಾಗಿ ಸುಭಾಷಿತವೊಂದು ಸಾರಿದೆ.
ಹಿಂದೂ ನಾರಿಯರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವೃತ್ತಿಯವರು. ಪ್ರಾಯಶಃ ಪ್ರಪಂಚದ ಇತರ ನಾರಿಯರಿಗಿಂತ ಹೆಚ್ಚು ಎಂದು ಬೇಕಾದರೂ ಹೇಳಬಹುದು. ಸ್ತ್ರೀತ್ವದ ಪೂರ್ಣ ಭಾವನೆಯೆಂದರೆ ಪರ್ಣ ಸ್ವಾತಂತ್ರ್ಯ ಎಂಬುದಾಗಿ ಸ್ವ್ವಾಮಿ ವಿವೇಕಾನಂದರು ಹೇಳಿದ್ದಾರೆ.
ಹೆಣ್ಣಿನ ಘನತೆಯನ್ನು ಸಾರುವ ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೀಗೆ ಹೇಳಿದ್ದಾನೆ:
ಹೆಣ್ಣಿನಿಂದಲೇ ಇಹವು| ಹೆಣ್ಣಿನಿಂದಲೇ ಪರವು
ಹೆಣ್ಣಿಂದ ಸಂಪದವು| ಹೆಣ್ಣೊಲ್ಲದಣ್ಣಗಳು
ಯಾರು ಸರ್ವಜ್ಞ ||
ಓರ್ವ ಗೃಹಿಣಿ ಮನೆಯಲ್ಲಿ ಹಲವು ಜವಾಬ್ದಾರಿಗಳನ್ನು ಸಮಯ, ಸಂದರ್ಭಕ್ಕೆ ಸರಿಯಾಗಿ ಸಮರ್ಥವಾಗಿ ನಿಭಾಯಿಸ ಬಲ್ಲಳು. ಈ ಬಗ್ಗೆ ಸುಭಾಷಿತವೊಂದು ಈ ರೀತಿ ಹೇಳುತ್ತದೆ –
ಕಾರ್ಯೇಷು ದಾಸೀ ಕರಣೇಷು ಮಂತ್ರೀ
ಭೋಜ್ಯೇಷು ಮಾತಾ ಶಯನೇಷು ರಂಭಾ |
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರೀ
ಷಟ್ಧರ್ಮಯುಕ್ತಾ ಕುಲಧರ್ಮಪತ್ನೀ ||
ಹೀಗೆ ಈ ದೇಶದಲ್ಲಿ ಸ್ತ್ರೀ ಎಲ್ಲ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವವಳಾಗಿದ್ದಳು. ಸ್ತ್ರೀ ಅಂದರೆ ಸಂಸಾರವನ್ನು ಸುಗಮವಾಗಿ ಸಾಗಿಸುವ ಸಾಮರ್ಥ್ಯ ಇರುವವಳು ಎಂದರ್ಥ. ಸ್ತ್ರೀ ಕೇವಲ ಓರ್ವ ವ್ಯಕ್ತಿಯಲ್ಲ; ಅವಳು ಶಕ್ತಿ. ಅಂತಹ ಸ್ತ್ರೀಶಕ್ತಿಗೆ ನಮಿಸೋಣ.
Comments are closed.