ಈ ಜಗತ್ತಿನಲ್ಲಿ ಯೋಗಿಗಳೂ ಸಂನ್ಯಾಸಿಗಳೂ ಒಂದೇ ಆಗಿರುವರು. ನಾಮಭೇದದಿಂದ ಬೇರೆಯಾಗಿ ತೋರಬಹುದು. ಆದರೆ ವಿಚಾರದೃಷ್ಟಿಯಿಂದ ನೋಡಿದರೆ ಅವರು ಒಂದೇ ಎಂದು ನಿಶ್ಚಿತವಾಗುವುದು. ನಾಮದಿಂದ ಬರುವ ದ್ವೈತದ ಆರೋಪವನ್ನು ಬಿಟ್ಟುಕೊಟ್ಟರೆ, ಯೋಗವೆಂಬುದೇ ಸಂನ್ಯಾಸವು. ಯಾಕೆಂದರೆ ಬ್ರಹ್ಮದೃಷ್ಟಿಯಿಂದ ನೋಡಲು, ಇವೆರಡರಲ್ಲಿ ಭೇದಕ್ಕೆ ಅವಕಾಶವಿಲ್ಲ. ಒಬ್ಬನನ್ನೇ ಬೇರೆ ಬೇರೆ ಹೆಸರುಗಳಿಂದ ಕರೆದಂತೆ, ಅಥವಾ ಎರಡು ಮಾರ್ಗಗಳಿಂದ ಒಂದೇ ಊರಿಗೆ ಹೋದಂತೆ, ಇಲ್ಲವೆ ಸ್ವಭಾವತಃ ನೀರು ಒಂದೇ ಆಗಿದ್ದು ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿದಾಗ ಭಿನ್ನವೆನಿಸುವಂತೆ, ಯೋಗ ಮತ್ತು ಸಂನ್ಯಾಸಗಳಲ್ಲಿ ಭಿನ್ನತ್ವವುಂಟೆಂದು ತಿಳಿ, […]
ಯೋಗಮಾರ್ಗ
Month : November-2015 Episode : Author : ಸಂತ ಜ್ಞಾನೇಶ್ವರ ಮಹಾರಾಜರು