ತಲೆಯಲ್ಲಿ ವಿಚಿತ್ರವಾಗಿ ಸುತ್ತಿದ ರುಮಾಲು, ಉದ್ದದ ನಿಲುವಂಗಿ, ಎಡಭುಜದಲ್ಲಿ ಜೋಳಿಗೆ, ಕೈಯಲ್ಲಿ ಚಿಮುಟ ಮತ್ತು ಸಟಕಾ – ಹೀಗಿತ್ತು ಅಂದು ದೇವಾಲಯದೊಳಗೆ ಬಂದ ತರುಣ ಫಕೀರ ಬಾಬಾನ ಉಡುಗೆ. ಸಾಯಿ… ಬಾಬಾ… ಸಾಯಿಬಾಬಾ ಎಂದು ಉದ್ಗರಿಸುತ್ತ ಆನಂದಬಾ? ಹರಿಸುತ್ತಿದ್ದ ಮಹಾಲ್ಸಾಪತಿಯನ್ನು ಕುರಿತು ಬಾಬಾರವರು ಮಹಾಲ್ಸಾಪತಿ, ನಿನ್ನ ಅಕುಂಠಿತ ಶ್ರದ್ಧೆ ವಿಶ್ವಾಸಗಳು ನನ್ನ ಮನತುಂಬಿದವು. ನೀನು ನನ್ನನ್ನು ’ಭಗವಾನ್’ ಎಂದು ಕರೆದೆ. ನಾನು ನಿನ್ನನ್ನು ’ಭಗತ್’ ಎಂದು ಕರೆಯುತ್ತೇನೆ. ಮುಂದಿನ ದಿನಗಳಲ್ಲಿ ಭಗತ್ ಜೊತೆಯಲ್ಲೇ ಭಗವಾನ್ ಇರುತ್ತಾನೆ. ಈ ಶಿರಡಿಯಲ್ಲೇ ಇನ್ನು ಮುಂದೆ ಉಳಿಯಲು ನಿರ್ಧರಿಸಿ ನಾನು ಬಂದಿದ್ದೇನೆ ಎಂದರು. ನೀನು ಖಂಡೋಬಾನ ಅರ್ಚಕವೃತ್ತಿ ಮುಂದುವರಿಸು. ನಾನು ನಿನ್ನ ಸಮೀಪದಲ್ಲೇ ಇರುತ್ತೇನೆ ಎಂದು ಹೇಳಿ ಅಲ್ಲಿಂದ ಉತ್ತರದಿಕ್ಕಿನಲ್ಲಿದ್ದ ತಮ್ಮ ಗುರುಸ್ಥಾನವಾದ ಬೇವಿನಮರದ ಬುಡಕ್ಕೆ ಹಿಂದಿರುಗಿ ಅಲ್ಲೇ ಅನತಿದೂರದಲ್ಲಿ ಕುಳಿತರು.
ಅಂದು ಮೊದಲ್ಗೊಂಡು ಬಾಬಾ ಪ್ರತಿದಿನ ಐದು ಮನೆಗಳಲ್ಲಿ ಭಿಕ್ಷೆ ಕೇಳಿ ಪಡೆದು ಬೇವಿನಮರದ ಬುಡಕ್ಕೆ ಬಂದು ಅಲ್ಲಿದ್ದ ಬೀದಿನಾಯಿಗಳಿಗೂ ಪಶುಪಕ್ಷಿಗಳಿಗೂ ಆ ಭಿಕ್ಷಾನ್ನವನ್ನು ಹಂಚಿ, ಉಳಿದುದನ್ನು ತಾವು ಸೇವಿಸುತ್ತಿದ್ದರು. ಕೆಲವೊಮ್ಮೆ ಎಲ್ಲೋ ಮಲಗಿ ರಾತ್ರಿ ಕಳೆಯುವರು, ಹಸಿವು ಆದಾಗ? ಭಿಕ್ಷೆ ಕೇಳುವರು. ಬೇವಿನಮರದ ಬುಡದಲ್ಲಿ ಹೆಚ್ಚು ಹೊತ್ತು ಕೂರುತ್ತಿದ್ದರು. ಜನರು ಬಂದು ಮಾತಾಡಿಸಲು ತೊಡಗಿದರೆ ಹೆಚ್ಚೇನೂ ಮಾತಾಡದೇ ಮೌನವಾಗಿರುವರು. ಕೆಲವೊಮ್ಮೆ ಕಾಡಿಗೆ ನಡೆದು ಹೋಗಿಬಿಡುವರು. ಊರಿಗೆ ಮರಳಿದಾಗ ಯಾರೇನು ನೀಡಿದರೂ ಮೌನವಾಗಿ ಭಿಕ್ಷೆ ಪಡೆಯುವರು; ಇಂಥದ್ದೇ ಬೇಕೆಂಬ ಜಿಹ್ವಾ ಬಯಕೆಯಿಲ್ಲ. ಏನು ದೊರೆಯುತ್ತದೋ ಅದನ್ನು ಸುತ್ತಮುತ್ತಲಿದ್ದ ನಾಯಿ, ಬೆಕ್ಕು, ಕಾಗೆ ಮುಂತಾದವುಗಳಿಗೆ ಹಂಚಿ, ಆಮೇಲೆ ತಾವೊಂದಿ? ಸೇವಿಸುವುದು ಅವರ ಪರಿಪಾಟಿಯಾಗಿತ್ತು. ಕ್ರಮೇಣ ಇವರ ಈ ಚರ್ಯೆ ತಿಳಿದ ಗ್ರಾಮದ ಇನ್ನಿತರ ಭಿಕ್ಷುಕರು ಇವರ ಮುಂದೆ ಬಂದು ಕೈಯೊಡ್ಡುತ್ತಿದ್ದುದೂ ಉಂಟು. ಆಗ ಬಾಬಾ ತಮಗೇನೂ ಉಳಿಸಿಕೊಳ್ಳದೆ, ಇದ್ದುದೆಲ್ಲವನ್ನು ಅವರಿಗೆಲ್ಲ ಹಂಚಿಬಿಡುತ್ತಿದ್ದರು.
ಸಾಯಿಬಾಬಾರ ಬದುಕಿಗೂ ಉರಿಯುವ ಧುನಿಗೂ ದ್ವಾರಕಾಮಾಯಿಯಲ್ಲಿ ಅವರು ಬೆಳಗುವ ಹಣತೆಗೂ ಅಲೌಕಿಕ ಸಂಬಂಧ ಏರ್ಪಟ್ಟಿತ್ತು. ಉರಿಯುವ ಧುನಿಯಲ್ಲಿ ಜನರ ಕ?, ದುಃಖ, ದಾರಿದ್ರ್ಯ, ರೋಗರುಜಿನಗಳನ್ನು ಆಹುತಿಯಾಗಿ ನೀಡಿ ಸುಡುತ್ತಾ ಬಂದರು ಬಾಬಾ.
ಬಾಬಾರದು ಹಸಿವು ನಿದ್ದೆ ನೀರಡಿಕೆ ದೇಹಬಾಧೆಗಳಿಲ್ಲದ ಅವಧೂತರ ಬದುಕಾಗಿತ್ತು ಎಂದು ಸಾಮಾನ್ಯಜನರಿಗೆ ಗೊತ್ತಾಗುವುದಾದರೂ ಹೇಗೆ? ಎ? ಜನ ’ಈತನೊಬ್ಬ ಹುಚ್ಚ’ ಎಂದೇ ಪರಿಗಣಿಸಿಬಿಟ್ಟರು. ಬಾಬಾರನ್ನು ಹುಚ್ಚು ಫಕೀರ, ತಿರುಕ, ಕೊಳಕ ಎಂದು ತುಚ್ಛೀಕರಿಸುವವರೂ ಇದ್ದರು. ಬಾಬಾ ಶಿರಡಿಗೆ ಬಂದಾಗ ಮೊದಲು ಅವರಿಗೆ ಭಿಕ್ಷೆ ನೀಡಿದ್ದು ’ಬಯಿಜಾಬಾಯಿ’ ಎಂಬ ಗೃಹಿಣಿ. ಆಕೆ ತುಂಬ ಗೌರವದಿಂದ, ಪ್ರೀತಿಯಿಂದ ಬಾಬಾರ ಹೊಟ್ಟೆಪಾಡಿನ ಬಗ್ಗೆ ಕಾಳಜಿ ವಹಿಸುತ್ತಿದ್ದಳು. ಈ ಬಯಿಜಾಬಾಯಿ ಮತ್ತು ಅರ್ಚಕ ಮಹಾಲ್ಸಾಪತಿ ಇವರಿಬ್ಬರೂ ’ಬಾಬಾ ಸಾಮಾನ್ಯ ಪುರು?ರಲ್ಲ, ಮಹಿಮಾನ್ವಿತರು’ ಎಂಬುದನ್ನು ಜನಸಾಮಾನ್ಯರ ಅರಿವಿಗೆ ತರಲು ಬಹುವಾಗಿ ಶ್ರಮಿಸಿದರು. ಬಾಬಾರನ್ನು, ಅವರ ಗುರುಸ್ಥಾನವನ್ನು ಕುರಿತು ಜನರನ್ನು ಎಚ್ಚರಿಸಲು ಬಹಳ ಶ್ರದ್ಧೆ, ಭಕ್ತಿ, ತಾಳ್ಮೆಯಿಂದ ಕೆಲಸಮಾಡಿದವರು ಇವರಿಬ್ಬರು. ಕ್ರಮೇಣ ಇವರ ಮಾತಿನಲ್ಲಿ ನಂಬಿಕೆ ಬಂದು ಕೆಲವು ಆಸ್ತಿಕ ಸಜ್ಜನರು ಬಾಬಾರ ಬಳಿಗೆ ಬಂದು ತಮ್ಮ ಕ?ಗಳನ್ನು ಹೇಳಿಕೊಂಡು ಪಾರುಮಾಡಲು ಕೋರಲಾರಂಭಿಸಿದರು. ಅವರಿಗೆ ಬಾಬಾ ಸೂಕ್ತ ಪರಿಹಾರಮಾರ್ಗಗಳನ್ನು ತೋರಿ ಶಾಂತಿ-ನೆಮ್ಮದಿಯ ಬದುಕಿಗೆ ಕಾರಣರಾದರು. ಈ ಖ್ಯಾತಿ ಒಬ್ಬರಿಂದ ಒಬ್ಬರಿಗೆ ಹರಡಿತು. ಜನರು ಗುಂಪುಗುಂಪಾಗಿ ತಮ್ಮ ಅಹವಾಲು ಹೇಳಿಕೊಳ್ಳಲು ಬರಲಾರಂಭಿಸಿದರು.
ಪದೇಪದೇ ಕಾಡಿಗೂ ಹೋಗಿ ಇದ್ದುಬಿಡುತ್ತಿದ್ದ ಸಾಯಿಬಾಬಾರನ್ನು ಕುರಿತು ಒಮ್ಮೆ ಮಹಾಲ್ಸಾಪತಿ ಹೀಗೆ ಕೋರಿದ: ಎ? ಜನರು ನಿಮ್ಮ ಕರುಣೆ ಬಯಸಿ ಸಂದರ್ಶಿಸಲು ಬರುತ್ತಿದ್ದಾರೆ. ಅವರು ನೀವು ಕಾಡಿನಲ್ಲಿದ್ದರೆ ದರ್ಶನ ಸಿಗದೆ ನಿರಾಶೆಗೊಳ್ಳುತ್ತಿದ್ದಾರೆ. ನೀವೆಲ್ಲಾದರೂ ಒಂದೆಡೆ ನೆಲೆಯಾಗಬೇಕು ಬಾಬಾ. ಆಗ ಸಂತ್ರಸ್ತರಿಗೆ ನಿಮ್ಮ ಬಳಿ ಬಂದು ಶರಣಾಗಲು ನೆರವಾಗುತ್ತದೆ.
ನನ್ನ ಸ್ಥಾನ ಯಾವುದೆಂದು ನಿನಗೆ ಗೊತ್ತಿಲ್ಲವೇ ಭಗತ್? ಎಂದು ಬಾಬಾ ಕೇಳಿದರು. ಜ್ಞಾನೋದಯವಾದಂತೆ ಮಹಾಲ್ಸಾಪತಿ ತಮ್ಮ ಗುರುಸ್ಥಾನವನ್ನೂ, ಅದರ ಆಳದಲ್ಲಿ ಮಸೀದಿಯೊಂದು ಇರುವುದನ್ನೂ, ನಡುವೆ ಈ ಮಸೀದಿಗೆ ಸುರಂಗಮಾರ್ಗವಿರುವುದನ್ನೂ ತಾವೇ ತಿಳಿಸಿದ್ದಿರಿ. ಆ ಮಸೀದಿ ಪಾಳುಬಿದ್ದಿದೆ, ಅದನ್ನು ಮರಳಿ ಸ್ವಚ್ಛಗೊಳಿಸಿಕೊಡುತ್ತೇನೆ. ತಾವು ಅಲ್ಲಿಯೇ ನೆಸಬೇಕೆಂದು ನಮ್ಮೆಲ್ಲರ ಕೋರಿಕೆಯಾಗಿದೆ ಬಾಬಾ… ಎಂದು ಬೇಡಿಕೊಂಡನು.
ಆ ಪಾಳುಮಸೀದಿಯನ್ನು ಭಕ್ತವೃಂದದವರೆಲ್ಲ ಸೇರಿ ಶುಭ್ರಗೊಳಿಸಿ, ಸ್ವಚ್ಛಗೊಳಿಸಿಕೊಟ್ಟರು. ಬಾಬಾ ಒಂದು ಶುಭದಿನದಂದು ಆ ಮಸೀದಿಯಲ್ಲಿ ವಾಸ್ತವ್ಯ ಆರಂಭಿಸಿದರು. ಬಾಬಾ ಆ ಹಾಳುಬಿದ್ದ ಮಸೀದಿಯಲ್ಲಿ ನೆಸಬಾರದೆಂದು ಕೆಲವು ಕುಲಮತಸ್ಥರಿಂದ ಆಕ್ಷೇಪಣೆಯೂ ಬಂದಿತು. ಆಗ ಬಾಬಾ ಇದೇ ನನ್ನ ಮಂದಿರ, ಇದೇ ನನ್ನ ಮಸೀದಿ, ಇದೇ ನನ್ನ ದ್ವಾರಕೆ ಎಂಬುದಾಗಿ ಘೋಷಿಸಿ ಒಳಗಡಿಯಿಟ್ಟುಬಿಟ್ಟರು. ಬಾಬಾ ಹೀಗೆ ಹೇಳಿದ್ದರಿಂದ ಮುಂದೆ ಇದೇ ಅವರ ವಾಸ್ತವ್ಯಕ್ಕೆ ’ದ್ವಾರಕಾಮಾಯಿ’ ಎಂಬ ಹೆಸರೂ ನೆಲೆ ನಿಂತಿತು. ದ್ವಾರಕಾಮಾಯಿ ದಿನೇದಿನೇ ಜನರ ಬಾಯಲ್ಲಿ ನಲಿದಾಡತೊಡಗಿತು.
ತಮ್ಮ ಜೀವಿತದ ಕೊನೆಯ ಅವಧಿಯವರೆಗೂ ಮುಂದೆ ಸಾಯಿಬಾಬಾ ವಾಸ್ತವ್ಯವಿದ್ದದ್ದು ಇದೇ ದ್ವಾರಕಾಮಾಯಿಯಲ್ಲಿ. ಇಲ್ಲಿಯೇ ನೆಸಿ ಜ್ಞಾನದ ಧುನಿ(ದೀವಿಗೆ)ಯನ್ನು ಹೊತ್ತಿಸಿರಿಸಿ ಅದಕ್ಕೆ ಅರಿ?ಡ್ವರ್ಗಗಳಿಂದ ಆವೃತವಾದ ಮನು?ರ ನಾನಾಬಗೆಯ ದೋ?ಗಳನ್ನು ಆಹುತಿಯಾಗಿ ನೀಡುತ್ತ ಬಂದರು. ಇಲ್ಲಿ ’ಧುನಿ’ ಹೊತ್ತಿಸಿ ಅದನ್ನೇ ಅವಲೋಕಿಸುತ್ತ, ಸದಾ ದಕ್ಷಿಣಾಭಿಮುಖವಾಗಿಯೇ ಕುಳಿತುಕೊಳ್ಳುತ್ತಿದ್ದರು. ವಿ?ಯ ವಾಸನಾಸಮೇತವಾದ ಮನು?ನ ಅಹಂಕಾರವನ್ನು, ನಾನಾ ಚಿತ್ತವೃತ್ತಿಗಳನ್ನು ’ಧುನಿ’ಯಲ್ಲಿ ಆಹುತಿ ನೀಡುತ್ತ, ಪ್ರಜ್ವಲಿಸುವ ಅಗ್ನಿಕುಂಡದಿಂದ ಜ್ಞಾನತೇಜಸ್ಸನ್ನು ಹೊಂದುತ್ತಾ, ಪರಮಾತ್ಮನ ನಾಮಸ್ಮರಣೆ ಮಾಡುತ್ತಿದ್ದರು.
ಗುರುವಿನ ಸೇವೆ
ಗುರುಸೇವೆಗೆ ಅನೇಕ ಮಾರ್ಗಗಳಿವೆ. ಅದರಲ್ಲಿ ಗುರುಗಳ ಚರಿತ್ರೆ, ಜೀವನವನ್ನು ಕುರಿತು ಗ್ರಂಥ ರಚಿಸುವುದೂ ಸೇರುತ್ತದೆ.
ಸಾಯಿಭಕ್ತರಾದ ಗೋವಿಂದ ರಘುನಾಥ ದಾಭೋಲ್ಕರ್ ಎಂಬವರು ಶುದ್ಧಾಂತಃಕರಣದಿಂದ ಉತ್ಕೃ?ವಾದ ಶ್ರದ್ಧೆ, ಭಕ್ತಿ, ಪ್ರೇಮದಲ್ಲಿ ರಚಿಸಿರುವ ಗ್ರಂಥವೇ ’ಸಾಯಿ ಸಚ್ಚರಿತ್ರೆ’. ಈ ಗ್ರಂಥಕಾರರನ್ನು ’ಅಣ್ಣಾಸಾಹೇಬ ದಾಭೋಲ್ಕರ್’ ಎಂದೂ ಕರೆಯುತ್ತಿದ್ದರು. ಇವರು ಮಾಮಲೇದಾರರಾಗಿ, ರೆಸಿಡೆಂಟ್ ಮ್ಯಾಜಿಸ್ಟ್ರೇಟ್ ಆಗಿ ಉನ್ನತ ಹುದ್ದೆಯಲ್ಲಿದ್ದವರು.
ಇವರನ್ನು ಸಾಯಿಬಾಬಾ ಪ್ರೀತಿಯಿಂದ ’ಹೇಮಾಡಪಂತ’, ’ಹೇಮಾದ್ರಿ ಪಂತ’ ಎಂದು ಕರೆಯುತ್ತಿದ್ದರಂತೆ.
ಅವಧೂತರಾಗಿದ್ದ ಬಾಬಾರಿಗೆ ಹಸಿವು, ನಿದ್ದೆ, ತೃ? ಬಾಧಿಸುತ್ತಿರಲಿಲ್ಲವಾದರೂ, ತನ್ನ ಗುರುವಿನ ಆದೇಶದಂತೆ ತಪ್ಪದೆ ದಿನಕ್ಕೆ ಐದು ಮನೆಯಲ್ಲಿ ಭಿಕ್ಷೆ ಬೇಡಿ ತಂದು ಅದನ್ನು ತನ್ನ ಸುತ್ತಣ ಪ್ರಾಣಿಪಕ್ಷಿಗಳಿಗೆ, ತನ್ನ ಸುತ್ತ ಹಿಂಬಾಲಿಸಿ ಬರುವ ಭಿಕ್ಷುಕರಿಗೆ ಹಂಚುವುದು ಅವರ ಪರಿಪಾಟಿ ಆಗಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿರುವಂತೆಯೇ ಕೆಲವೊಮ್ಮೆ ಕಬೀರರ ದೋಹೆಗಳನ್ನು ಹಾಡುತ್ತಾ, ಹೇಳುತ್ತಾ ತಮ್ಮಲ್ಲೇ ತಾವು ಕೆಲವೊಮ್ಮೆ ಮಾತಾಡಿಕೊಳ್ಳುತ್ತಾ, ಯಾರೊಂದಿಗೋ ಸಂಭಾಷಿಸುವಂತೆ ಕೈಯಿಂದ ಕೆಲವು ರೀತಿಯ ಸನ್ನೆಗಳನ್ನು ಮಾಡುತ್ತಾ ಸಾಗುತ್ತಿದ್ದರು. ಮೇಲ್ನೋಟಕ್ಕೆ ಮತಿಹೀನ ಹುಚ್ಚರಂತೆ ಕಾಣುವ ಅವರನ್ನು ಕೆಲವು ಕಿಡಿಗೇಡಿಗಳು ಬೇಕೆಂತಲೇ ಮಾತಿಗೆಳೆದು ಕಿಚಾಯಿಸುವುದೂ ಇದ್ದಿತ್ತು. ಆಗೆಲ್ಲ ಬಾಬಾ ತೀವ್ರ ಮೌನಿ, ಇಲ್ಲವೆ ಕಬೀರರ ದೋಹೆಗಳ ಮೂಲಕವೇ ಉತ್ತರಿಸಿ ಹೊರಟುಹೋಗುತ್ತಿದ್ದರು. ಬಾಬಾ ದ್ವಾರಕಾಮಾಯಿ ಬಿಟ್ಟರೆ ಬೇವಿನಮರದ ಅಡಿಯಲ್ಲಿ, ಇಲ್ಲವೆ ಹತ್ತಿರವಿದ್ದ ಕಾಡಿಗೆ ಹೋಗಿದ್ದುಬಿಡುತ್ತಿದ್ದರು. ಕೆಲವೊಮ್ಮೆ ಶಿರಡಿಯ ಸುತ್ತಮುತ್ತಲಿದ್ದ ರಾಹತ್, ನಿಮಗಾಂವ್ ಮುಂತಾದ ಗ್ರಾಮಗಳಿಗೆ ಹೋಗಿಬರುತ್ತಿದ್ದರು. ಅವರೆಲ್ಲರ ಕಣ್ಣಿಗೆ ಇವರೊಬ್ಬ ಕೌತುಕದ ವ್ಯಕ್ತಿಯಾಗಿದ್ದರು.
ಸುತ್ತಮುತ್ತಲಿನ ಜನರ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮೇಲ್ನೋಟಕ್ಕೆ ಮತಿಭ್ರಮಣೆಯಾದವರಂತೆ ಕಂಡರೂ, ಅವರು ಮಹಾಮಹಿಮ ಪರಿವ್ರಾಜಕ ಸಂನ್ಯಾಸಿ, ಅವರ ಮಾತುಗಳು ಗೂಢಾರ್ಥದಿಂದ ಕೂಡಿರುತ್ತವೆ ಎಂದೆಲ್ಲ ವಿವರಿಸುತ್ತ ಮಹಾಲ್ಸಾಪತಿ, ಬಯಿಜಾಬಾಯಿ, ಸಖಾರಾಮ್, ಗಣಪತ್ಕೋತೆ ಪಾಟೀಲ್ ಮುಂತಾದ ಬಾಬಾರ ಅಂತರಂಗಭಕ್ತರು ಜನರ ಸಂದೇಹಗಳನ್ನು ನಿವಾರಿಸುತ್ತಿದ್ದರು.
ಬಾಬಾ ತನ್ನ ಬಳಿ ಬಂದವರು ಯಾವ ಕುಲಮತಸ್ಥರೇ ಆಗಿರಲಿ, ಅವರವರ ಜಾತಿಮತದ ನಂಬಿಕೆಗೆ ತಕ್ಕಂತೆಯೇ ಉತ್ತರಿಸಿ ಅವರ ಸಮಸ್ಯೆಗಳ ನಿವಾರಣೆಗೆ ನೆರವಾಗುತ್ತಿದ್ದರು. ತನ್ನ ಸುತ್ತಲೂ ಸೇರಿ ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದ ಜನರಿಗೆ ವೇದ, ಉಪನಿ?ತ್, ಪುರಾಣ, ಭಗವದ್ಗೀತೆಯ ಶ್ಲೋಕಗಳನ್ನೂ, ಕುರಾನ್, ಬೈಬಲ್, ಗುರುಗ್ರಂಥಗಳಲ್ಲಿನ ಬೋಧೆಗಳನ್ನೂ ಉಲ್ಲೇಖಿಸಿ ವಿವರಿಸುತ್ತಿದ್ದರು. ಶಿರಡಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಆಧ್ಯಾತ್ಮಿಕ ಪಥ ಹಿಡಿದಿದ್ದ ಅನೇಕ ಸಾಧುಸಂತರು ನೆಲಸಿದ್ದರು. ಅವರೆಲ್ಲರೂ ’ಇಲ್ಲೊಬ್ಬ ಹುಚ್ಚ ಫಕೀರ ಇದ್ದಾನೆ, ಕಂಡು ಮಾತನಾಡಿಸಿ ಬರೋಣ’ ಎಂದೇ ಬಾಬಾರನ್ನು ಸಮೀಪಿಸಿದರು. ಇವರೆಲ್ಲರಿಗೂ ಬಾಬಾರ ಬಗ್ಗೆ ಸರಿಯಾಗಿ ತಿಳಿಹೇಳಿದವನು ಮಹಾಲ್ಸಾಪತಿಯೇ. ಕಡೆಕಡೆಗೆ ಈ ಸಾಧುಸಂತರ ಗುಂಪು ಸಾಯಿಬಾಬಾರ ಸನ್ನಿಧಿಯಲ್ಲಿ ಅಪೂರ್ವ ಶಾಂತಿ-ಸಮಾಧಾನಗಳನ್ನು ಪಡೆದು, ಬಾಬಾರಿಂದ ದೂರಸರಿಯಲು ಅಸಾಧ್ಯವಾಗಿ ಸಾಧುಸತ್ಸಂಗಗಳನ್ನು ಏರ್ಪಡಿಸಿಕೊಂಡು ಅಲ್ಲಿಯೇ ನೆಲಸಿಬಿಟ್ಟರು.
ಈ ಅನೇಕಾನೇಕ ಸಾಧಕರ ನಡುವೆ ಬಾಬಾರಿಗೆ ದೇವಿದಾಸ ಮತ್ತು ಜಾನಕಿದಾಸ ಎಂಬ ಇಬ್ಬರು ಸಾಧುಗಳ ಸಂಗ ತುಂಬಾ ಹಿತಕರವಾಗಿತ್ತು. ಕಾಶಿನಾಥ ಎಂಬವನು ದೇವಿದಾಸನ ಪರಮಶಿ?. ಇವರೆಲ್ಲರೂ ಸೇರಿ ಮಹಾಲ್ಸಾಪತಿಯನ್ನೂ ಕೂಡಿಕೊಂಡು ಸಾಯಿಬಾಬಾರ ಸುತ್ತ ಕುಳಿತು ತಮ್ಮತಮ್ಮ ವಿಚಾರಧಾರೆಗಳನ್ನು ವಿನಿಮಯ ಮಾಡಿಕೊಳ್ಳುತ್ತ ಆಧ್ಯಾತ್ಮಿಕ ಸತ್ಸಂಗದಲ್ಲಿ ತೊಡಗುತ್ತಿದ್ದರು. ಚರ್ಚೆ, ಸಂಶಯ ಯಾವುದೇ ಇರಲಿ, ಬಾಬಾ ಎಲ್ಲವನ್ನೂ ಸೂತ್ರಬದ್ಧವಾಗಿಯೂ ಶಾಸ್ತ್ರಸಿದ್ಧವಾಗಿಯೂ ವಿವರಿಸಿ ಅವರ ಸಂಶಯ ನಿವಾರಣೆ ಮಾಡುತ್ತಿದ್ದುದರಿಂದ ಅವರ ಮಾತುಗಳನ್ನು ಕೇಳಲು ಇವರೆಲ್ಲ ಉತ್ಸುಕರಾಗಿರುತ್ತಿದ್ದರು.
ವಿಶ್ವಭ್ರಾತೃತ್ವದ ಪ್ರತೀಕವಾಗಿದ್ದ ಸಾಯಿಬಾಬಾ ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಹೀಗೆ ಯಾವುದೇ ಧರ್ಮಾಧಾರವು ಎಲ್ಲೆಲ್ಲಿ ಆವಶ್ಯಕ, ಎಲ್ಲೆಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಸೋದಾಹರಣವಾಗಿ ತಿಳಿಸಿ ಹೇಳುತ್ತಿದ್ದರು. ಬಾಬಾ ರಾತ್ರಿ ಹೊತ್ತು ತುಂಬಾ ಸಮಯ ’ಧುನಿ’ ಎದುರು ಕುಳಿತಿದ್ದು, ಚಿಲುಮೆಗೆ ತಂಬಾಕು ತುಂಬಿ ಹೊಗೆಯನ್ನು ಸೇವಿಸಿ ಅನಂತರ ತಮ್ಮ ಗುರುಗಳು ನೀಡಿದ್ದ ಇಟ್ಟಿಗೆಯನ್ನು ತಲೆಕೆಳಗೆ ಇರಿಸಿಕೊಂಡು ನಿದ್ದೆ ಹೋಗುತ್ತಿದ್ದರು. ಆ ಇಟ್ಟಿಗೆಯೇ ಅವರ ಪಾಲಿಗೆ ಅವರ ಗುರುವಿನ ಮಡಿಲು ಎಂಬಂತಾಗಿತ್ತು.
ಸಂಕಷ್ಟನಿವಾರಕ ಸಾಯಿಬಾಬಾ
ಮೊಹಿದ್ದೀನ್ ತಾಂಬೋಳಿ, ವಾಮನ ತಾತ್ಯಾ ಮುಂತಾಗಿ ಅನೇಕರಿಗೆ ಶಿರಡಿಯಲ್ಲಿ ಬಾಬಾರ ಅನುಗ್ರಹ ಸಿದ್ಧಿಸಿತು. ಮಣ್ಣಿನ ಪಾತ್ರೆ, ಮಡಕೆ ಕುಡಿಕೆಗಳನ್ನು ಮಾಡುವ ವಾಮನ ತಾತ್ಯಾ ಪದೇಪದೇ ’ಸಾಯಿಬಾಬಾರ ಕೃಪೆಯಿಂದ ತನ್ನ ವ್ಯಾಪಾರ ಅಭಿವೃದ್ಧಿಯಾಯಿತು’ ಎಂದು ಹೇಳುತ್ತಿರುವುದನ್ನು ಕೇಳಿ ಮೊಹಿದ್ದೀನ್ ತಾನೂ ಬಾಬಾರನ್ನು ಭೇಟಿಯಾದನು; ಇವರು ನಮ್ಮ ಜಾತಿಯೋ, ಹಿಂದುವೋ? ಎನ್ನುವ ಆಲೋಚನೆ ಮುತ್ತಿ ಬಾಬಾರನ್ನು ಅನೇಕ ವಿ?ಯಗಳಿಗಾಗಿ ಕೆಣಕಿದನು. ಮೊದಮೊದಲು ಬಾಬಾ ಸ್ಪಂದಿಸಲಿಲ್ಲವಾದರೂ, ಕಡೆಕಡೆಗೆ ವಿಚಾರವಿನಿಮಯ ಚರ್ಚೆಗಳು, ವಾದವಿವಾದ ನಡೆಯಿತು. ಕಡೆಗೊಮ್ಮೆ ಇಬ್ಬರ ನಡುವೆ ಕುಸ್ತಿ ಕದನವೂ ನಡೆಯಿತು. ಬಾಬಾ ಸಾಕ? ದೈಹಿಕಸಾಮರ್ಥ್ಯ ಹೊಂದಿದ್ದರೂ, ಬೇಕೆಂತಲೇ ಈ ಮೊಹಿದ್ದೀನ್ ಎದುರಿಗೆ ಕುಸ್ತಿಯಲ್ಲಿ ಸೋತರು. ಅಲ್ಲೇ ಇದ್ದ ಗಂಗಾಗೀರ್ ಎಂಬ ಅಧ್ಯಾತ್ಮಸಾಧಕ ಗುರುವು ಸೋಲುವುದೇ ಶಿ?ನನ್ನು ಸಿದ್ಧಗೊಳಿಸಲು ಎಂದು ಉದ್ಗಾರವೆತ್ತಿದನು. ಮೊಹಿದ್ದೀನ್ನ ಒಳಗಣ್ಣು ತೆರೆದು ಬಾಬಾರಿಗೆ ಶರಣಾದನು.
’ಭಾಗೋಜಿ’ ಎಂಬ ಕು?ರೋಗಿಯನ್ನು ಬಾಬಾ ಸ್ವತಃ ತಾನೇ ಮೈಕೈ ಮುಟ್ಟಿ ಆಹಾರ ನೀಡಿ ಉಪಚರಿಸಿ, ಆನಂತರ ಆ ರೋಗಿಯನ್ನು ಮಸೀದಿಗೆ ಕರೆತಂದು ಧುನಿಯ ಎದುರೇ ಒಂದು ಗೋಣಿಚೀಲದ ಮೇಲೆ ಮಲಗಿಸಿದರು. ಮೈಮೇಲೆ ಪ್ರಜ್ಞೆಯೇ ಇಲ್ಲದೆ ಮಲಗಿದ್ದ ಭಾಗೋಜಿಯನ್ನು ನೋಡುತ್ತ ಪಾಪಿ ಶರೀರವೊಂದು ಪುಣ್ಯ ಬೇಡಿ ಮಸೀದಿ ಪ್ರವೇಶಿಸಿದೆ. ಇರಲಿ, ಅಲ್ಲಾಮಾಲಿಕ್, ಅಲ್ಲಾ ಭಲಾ ಕರೇಗಾ ಎಂದು ಉದ್ಗರಿಸಿ ತಾವೂ ಅಲ್ಲೇ ಪಕ್ಕದಲ್ಲೇ ತಮ್ಮ ಇಟ್ಟಿಗೆಗೆ ತಲೆಯಿಟ್ಟು ಮಲಗಿಬಿಟ್ಟರು.
ಬಾಬಾ ಕು?ರೋಗಿಯೊಬ್ಬನನ್ನು ಮಸೀದಿಯಲ್ಲಿಟ್ಟುಕೊಂಡು ಅವನ ಜೊತೆಗೇ ಇರುತ್ತಾರೆಂಬ ವಾರ್ತೆ ಶಿರಡಿ ಊರಲ್ಲೆಲ್ಲ ವ್ಯಾಪಿಸಿ ಬಾಬಾರನ್ನು ಅಸ್ಪೃಶ್ಯರಂತೆ ಜನ ನೋಡತೊಡಗಿದರು. ಭಿಕ್ಷೆ ನೀಡಲೂ ನಿರಾಕರಿಸಿದರು. ಆ ಭಾಗೋಜಿ ಕಾಯಿಲೆ ನಿನಗೂ ಅಂಟಿಕೊಳ್ಳಲಿದೆ. ನಿನ್ನಿಂದ ಕು?ರೋಗ ಊರಿಗೆಲ್ಲ ಹರಡುತ್ತದೆ, ದೂರ ಸರಿ, ಬರಬೇಡ ಎಂದು ಅಸಹ್ಯ ಪಟ್ಟುಕೊಂಡರು. ಬಯಿಜಾಬಾಯಿ ಒಬ್ಬಳು ಊರಿನ ಯಾರ ಕಣ್ಣಿಗೂ ಬೀಳದೆ ಅಡ್ಡದಾರಿ ಹಿಡಿದು ಮಸೀದಿಗೆ ಬಂದು ಸೆರಗಿನಲ್ಲಿ ತಾನು ತಂದಿದ್ದ ರೊಟ್ಟಿ ಪಲ್ಯದ ಭಿಕ್ಷೆ ನೀಡಲು ಹೋದಾಗ ಅಲ್ಲಿ ಕಂಡ ದೃಶ್ಯ ಅವಳನ್ನು ಸ್ತಂಭೀಭೂತಳನ್ನಾಗಿ ಮಾಡಿತು. ಭಾಗೋಜಿ ಮಲಗಿದ್ದ, ಅವನ ದೇಹ ಅಸಹ್ಯಕರವಾಗಿದೆ, ಕೊಳೆತ ಹುಣ್ಣುಗಳಿಂದ ವಾಸನೆ ಬರುತ್ತಿದೆ. ಆದರೆ ಸಾಯಿಬಾಬಾ ಧುನಿಯಿಂದ ಮುಷ್ಟಿ ಮುಷ್ಟಿ ಬೂದಿಯನ್ನು ತೆಗೆದು ಆ ವ್ರಣಗಳಿಗೆಲ್ಲ ತುಂಬಿ ಆತನ ಮೈಗೆಲ್ಲ ಲೇಪಿಸುತ್ತಿದ್ದಾರೆ! ಈ ಎಲ್ಲ ವಿ?ಯ ತಿಳಿದ ಜನರು ಬಾಬಾರ ಬಗ್ಗೆಯೇ ಅಸಹ್ಯಪಟ್ಟುಕೊಂಡರು. ಹೀಗೆಯೆ ದಿನಗಳು ಕಳೆದಂತೆ ಭಾಗೋಜಿಗೆ ತಗುಲಿದ್ದ ಕು?ರೋಗವು ಬಾಬಾರ ಬೂದಿ ಚಿಕಿತ್ಸೆಯಿಂದಲೇ ನಿವಾರಣೆಯಾಗಿ ಆತ ಆರೋಗ್ಯವಂತನಾಗಿ ದೇಹಕಾಂತಿಯಿಂದ ಕೂಡಿ ನಡೆದಾಡುತ್ತಿದ್ದುದನ್ನೂ ನೋಡುವ ಯೋಗ ಊರಿನ ಜನರಿಗೊದಗಿತು. ಜನ ಮತ್ತೆ ಬಾಬಾರನ್ನು ಭೇಟಿಯಾಗಲು ಬರತೊಡಗಿದರು. ಬಾಬಾರಲ್ಲಿ ಅದೇನೋ ಅಲೌಕಿಕ ಶಕ್ತಿ ತುಂಬಿದೆ ಎನ್ನುವ ವಿಚಾರ ಶಿರಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹರಡುತ್ತ ಪ್ರಚಾರ ಪಡೆಯಿತು.
ನಿಮಗಾಂವ್ನ ನಾನಾಸಾಹೇಬ ದಂಪತಿಗಳಿಗೆ ಮಕ್ಕಳಾಗಿಲ್ಲವೆಂಬ ಕೊರಗಿತ್ತು. ಮಸೀದಿಗೆ ಬಂದು ಬಾಬಾರಿಗೆ ಶರಣಾದಾಗ ಧುನಿಯ ಬೂದಿಯನ್ನು ಒಂದು ಮುಷ್ಟಿ ತೆಗೆದುಕೊಟ್ಟು ದಂಪತಿಗಳಿಬ್ಬರೂ ರಾತ್ರಿ ಹಾಲಲ್ಲಿ ಬೆರೆಸಿ ಕುಡಿಯಿರಿ ಎಂದರು ಬಾಬಾ. ಹಾಗೆಯೇ ಆ ಬೂದಿಮಿಶ್ರಿತ ಹಾಲನ್ನು ಸೇವಿಸಿದ ನಂತರ ತಿಂಗಳೊಪ್ಪತ್ತಿನಲ್ಲೇ ಪವಾಡವೇ ನಡೆಯಿತು ಎಂಬಂತೆ ನಾನಾಸಾಹೇಬನ ಪತ್ನಿ ಗರ್ಭಧಾರಣೆ ಮಾಡಿದಳು. ಒಂಬತ್ತು ತಿಂಗಳು ತುಂಬಿ ಆರೋಗ್ಯವಾಗಿದ್ದ ಗಂಡುಮಗುವನ್ನು ಹೆತ್ತಳು. ಹೀಗೆ ಅನೇಕ ಘಟನೆಗಳು ’ಸಾಯಿ ಸಚ್ಚರಿತೆ’ಯಲ್ಲಿ ದಾಖಲಾಗಿ, ಬಾಬಾ ಮಾಡಿದ ಪವಾಡಗಳಿಗೆ ಸಾಕ್ಷಿ ನುಡಿಯುತ್ತವೆ.
ಸಾಯಿಬಾಬಾರ ಬದುಕಿಗೂ ಉರಿಯುವ ಧುನಿಗೂ ದ್ವಾರಕಾಮಾಯಿಯಲ್ಲಿ ಅವರು ಬೆಳಗುವ ಹಣತೆಗೂ ಅಲೌಕಿಕ ಸಂಬಂಧ ಏರ್ಪಟ್ಟಿತ್ತು. ಉರಿಯುವ ಧುನಿಯಲ್ಲಿ ಜನರ ಕ?, ದುಃಖ, ದಾರಿದ್ರ್ಯ, ರೋಗರುಜಿನಗಳನ್ನು ಆಹುತಿಯಾಗಿ ನೀಡಿ ಸುಡುತ್ತಾ ಬಂದರು ಬಾಬಾ. ಈ ನಡುವೆ ಬಾಬಾರ ಮಹಿಮೆ ಎಲ್ಲೆಡೆ ವ್ಯಾಪಕವಾಗಿ ಪ್ರಚಾರ ಪಡೆಯುತ್ತಿದ್ದ ಹಾಗೆಯೆ ಅಕ್ಕಲಕೋಟ ಮಹಾರಾಜರ ಶಿ?ರಾದ ಆನಂದಮಠದ ಸಾಧು ಆನಂದನಾಥ ಎಂಬವರೂ ಶಿರಡಿಗೆ ಬಂದು ಸಾಯಿಬಾಬಾರನ್ನು ಭೇಟಿಮಾಡಿದರು. ಅನೇಕ ಕ?ನ?ಗಳಿಂದಲೂ, ಸಂಸಾರ ಬಂಧನದಿಂದಲೂ, ರೋಗರುಜಿನಗಳಿಂದಲೂ ನರಳುತ್ತಿರುವವರನ್ನು ಸದಾ ಉದ್ಧರಿಸುವ ಸದುದ್ದೇಶವು ಈ ಸಾಯಿಬಾಬಾ ಗುರುವಿಗಿದೆ ಎಂದು ಆನಂದನಾಥರು ಬಾಬಾರ ಬಗ್ಗೆ ಊರಿನವರಿಗೆ ತಿಳಿಹೇಳಿದರು. ಬಾಬಾರ ಶರೀರವೇನೋ ಸದಾ ಪರಿವ್ರಾಜಕ, ಆದರೆ ಕ?ದಲ್ಲಿರುವವರಿಗೆ ಸಹಾಯ ಮಾಡುವುದೇ ಅವರ ಕಾಯಕವಾಗಿತ್ತು. ಕ? ನಿವಾರಣೆ ಹೊಂದಿದವರು ಬಂದು ಕೃತಜ್ಞತೆ ಸಲ್ಲಿಸಿದರೆ ಅಲ್ಲಾ ಮಾಲಿಕ್… ಸಬ್ ಕಾ ಮಾಲಿಕ್ ಏಕ್ ಎಂದು ಹೇಳಿ ನಕ್ಕುಬಿಡುತ್ತಿದ್ದರು. ರೋಗಗ್ರಸ್ತರನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಉಪಚರಿಸುತ್ತ ಚಿಕಿತ್ಸೆ ನೀಡುತ್ತ ನೋಡಿಕೊಳ್ಳುತ್ತಿದ್ದರು ದಯಾಮಯಿ ಸಾಯಿಬಾಬಾ.
ಶಿರಡಿಯಲ್ಲಿ ಉಪಾಧ್ಯಾಯ ವೃತ್ತಿಯಲ್ಲಿದ್ದ ಮಾಧವರಾವ್ ದೇಶಪಾಂಡೆ ಎಂಬಾತ ಮಸೀದಿಯಲ್ಲಿದ್ದ ಬಾಬಾರ ಚಲನವಲನಗಳನ್ನು ಗಮನಿಸುತ್ತಿದ್ದ. ಇವನೊಬ್ಬ ಹುಚ್ಚ ಫಕೀರನೆಂದೇ ಭಾವಿಸಿ ತುಸು ತಿರಸ್ಕಾರ ಧೋರಣೆಯನ್ನೂ ತಾಳಿದ್ದ. ಒಂದು ಸಲ ಶಿಕ್ಷಣಾಧಿಕಾರಿಯಾಗಿದ್ದ ಗಾಡ್ಗಿಲ್ ಎಂಬಾತ ಶಾಲೆಯ ಪರಿವೀಕ್ಷಣೆಗೆಂದು ಬಂದವರು ಇಲ್ಲಿ ಮಸೀದಿಯಲ್ಲಿ ಮಹಾತ್ಮರೊಬ್ಬರು ಇದ್ದಾರಂತೆ, ನನ್ನನ್ನು ಅವರ ಬಳಿಗೆ ಕರೆದುಕೊಂಡು ಹೋಗು ಎಂದು ದೇಶಪಾಂಡೆಯನ್ನು ಕೇಳಿದರು. ಅಯ್ಯೋ! ಅವನು ಮಹಾತ್ಮನೇನಲ್ಲ. ಎಲ್ಲರಿಗೂ ಮಂಕುಬೂದಿ ಎರಚುವ ಒಬ್ಬ ಹುಚ್ಚ ಫಕೀರ ಎಂದು ದೇಶಪಾಂಡೆ ಹೇಳಿದ್ದಕ್ಕೆ ಗಾಡ್ಗಿಲ್, ಹಾಗೆಲ್ಲ ಹೇಳಬಾರದು. ನಾನು ಕೇಳಿಬಲ್ಲೆ, ಅವರು ಮಹಾಮಹಿಮಾನ್ವಿತರಂತೆ. ಮಸೀದಿಗೆ ಕರೆದುಕೊಂಡು ಹೋಗು ಎಂದು ಅಪ್ಪಣೆಯಿತ್ತರು. ಮನಸ್ಸಿನಲ್ಲಿ ಬೈದುಕೊಳ್ಳುತ್ತಾ ದೇಶಪಾಂಡೆ ಅವರನ್ನು ಕರೆದೊಯ್ದ.
ಮಸೀದಿಯ ಒಳಗೆ ಧುನಿ ಉರಿಯುತ್ತಿತ್ತು. ಅಲ್ಲೆಲ್ಲ ಹಲವು ಬಗೆಯ ರೋಗಿಗಳು ಮಲಗಿದ್ದರು. ಬಾಬಾ ಅವರನ್ನೆಲ್ಲ ಉಪಚರಿಸುತ್ತಿದ್ದುದನ್ನು ಇಬ್ಬರೂ ಕಂಡರು. ನರಳುತ್ತಿದ್ದ ಬಾಲಕನೊಬ್ಬನ ತಲೆಗೆ ಧುನಿಯಲ್ಲಿನ ಭಸ್ಮವನ್ನು ಹಾಕಿ ತೀಡುತ್ತಾ ಅವನ ತಾಯ್ತಂದೆಯರ ಬಳಿ ಸ್ವಲ್ಪ ಭಸ್ಮವನ್ನು ಕೊಟ್ಟು ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿ ರಾತ್ರಿ ಬೆಳಗು ಈ ಭಸ್ಮವನ್ನು ನೀರಿನಲ್ಲಿ ಕದಡಿ ಕುಡಿಸಿ, ಗುಣಮುಖವಾಗುತ್ತಾನೆ ಎಂದರು. ಅವರು ಹೋದ ಮೇಲೆ ಬಾಬಾ ಅಲ್ಲಿ ನಿಂತಿದ್ದ ಗಾಡ್ಗಿಲ್ ಮತ್ತು ದೇಶಪಾಂಡೆಯವರನ್ನು ಕಂಡು ಒಮ್ಮೆಗೇ ಕೋಪಿಸಿಕೊಂಡರು. ಯಾಕೆ ಬಂದೆಯೋ ದೇಶಪಾಂಡೆ? ನಾನು ಮಂಕುಬೂದಿ ಎರಚೋನು! ಸದಾ ನಿನ್ನ ಮನಸ್ಸಲ್ಲಿ ನನ್ನನ್ನ ಬೈದುಕೊಳ್ಳುತ್ತಿರುತ್ತೀ, ಇಲ್ಲಿಗೇಕೆ ಬಂದೆ? ಎಂದು ಬೈದರು. ತನ್ನ ಹೆಸರು, ತನ್ನ ಮನಸ್ಸಿನಲ್ಲಿರುವ ವಿಚಾರಗಳು ಇವೆಲ್ಲ ಇವರಿಗೆ ಹೇಗೆ ಗೊತ್ತಾಯಿತೆಂದು ಅಚ್ಚರಿಯೂ ಗಾಬರಿಯೂ ಆಯಿತು ದೇಶಪಾಂಡೆಗೆ. ಆನಂತರ ಗಾಡ್ಗಿಲ್ರನ್ನು ಮಾತಾಡಿಸಿ ಬಾಬಾ ಅವರ ಅಹವಾಲನ್ನು ಕೇಳಿ ಧುನಿಯ ಬೂದಿಯನ್ನು ಎತ್ತಿ ಅವರಿಗೆ ಕೊಡುತ್ತಾ ನಿನ್ನ ಪೂಜಾಗೃಹದಲ್ಲಿ ಈ ಬೂದಿ ಇಟ್ಕೋ. ದಿನಾ ಬೆಳಗ್ಗೆ ಹಾಲಲ್ಲಿ ಈ ಬೂದಿ ಬೆರೆಸಿ ಕುಡಿಯಲು ನಿನ್ನ ಪತ್ನಿಗೂ ಮಗನಿಗೂ ಹೇಳು. ಬೇಗನೇ ಹತ್ತುದಿನಗಳಲ್ಲಿ ಎಲ್ಲ ಸೌಖ್ಯ ಹೊಂದುತ್ತಾರೆ ಎಂದರು. ಗಾಡ್ಗಿಲ್ ಅದನ್ನು ಸ್ವೀಕರಿಸಿ ಬಾಬಾಗೆ ಉದ್ದಂಡ ಪ್ರಣಾಮಗೈದು ದೇಶಪಾಂಡೆಯನ್ನು ಮರೆತೇ ಹೋದವರಂತೆ ಅಲ್ಲಿಂದ ಹೊರಟುಹೋದರು.
ಎಲ್ಲವನ್ನೂ ಕಣ್ಣಾರೆ ಕಂಡ ದೇಶಪಾಂಡೆಯ ಮನಃಪರಿವರ್ತನೆಯಾಯಿತು. ಬಾಬಾರ ಕಾಲಿಗೆ ಬಿದ್ದು ಕ್ಷಮಿಸಬೇಕೆಂದು ದೀನನಾಗಿ ಬೇಡಿಕೊಂಡ. ಬಾಬಾ ಅವನನ್ನು ಮೇಲೆತ್ತಿ ಆಲಿಂಗಿಸಿ, ನೀನು ಇನ್ನು ಮುಂದೆ ಶ್ಯಾಮಾ ಆಗಿರುತ್ತೀ. ಇ?ದಿನ ಗರ್ವ ತುಂಬಿದ ಕೊಡವಾಗಿದ್ದೆ. ಈಗ ನೀನು ಗರ್ವ ಸೋರಿಹೋದ ಖಾಲಿ ಕೊಡವಾಗಿದ್ದೀ. ಇನ್ನು ನಿನ್ನಲ್ಲಿ ಜ್ಞಾನಗಂಗೆಯನ್ನು ತುಂಬಿಸಬಹುದು. ಹುಚ್ಚು ಫಕೀರನ ಪರಮ ಆಪ್ತ ಶಿ?ನಾಗು ಎಂದರು.
ಹಾಗೆಯೇ ಆಯಿತು. ಮುಂದೆ ದೇಶಪಾಂಡೆ ’ಶ್ಯಾಮಾ’ ಎಂಬ ಹೆಸರಿನಿಂದ ಬಾಬಾರ ನಮ್ರ ಪರಿಚಾರಕನಾಗಿ, ಆಪ್ತ ಶಿ?ನಾಗಿ, ಅಚಲ ನಂಬಿಕೆ ಗೌರವಗಳಿಂದ ಬಾಬಾರ ಸೇವೆ ಮಾಡುತ್ತ ದಿನಗಳೆದನು. ಕ? ಸಂಕ? ರೋಗಾದಿ ಪೀಡನೆಯ ಕತ್ತಲೆಯಲ್ಲಿರುವವರನ್ನು ಗುರುತಿಸಿ ಆತನೇ ಬಾಬಾರಲ್ಲಿಗೆ ಕರೆತರಲಾರಂಭಿಸಿದನು. ಬಾಬಾ ಅಂಥವರ ಸಂಕ?ಗಳನ್ನೆಲ್ಲ ನಿವಾರಿಸಿ ರೋಗಗಳನ್ನು ಗುಣಪಡಿಸುತ್ತಿದ್ದರು.
ಅಗ್ನಿಕುಂಡದ ಮುಂದೆ ಸದಾ ಹೋಮಿಸುತ್ತ ಕುಳಿತು ಯಾಗಯಜ್ಞ ಮಾಡುವುದಕ್ಕೆ ಎಲ್ಲರಿಂದಲೂ ಆಗದು. ಆದರೆ ಬಾಬಾ ಹಾಗೆ ಮಾಡುತ್ತ, ಅಗ್ನಿದೇವನ ತೇಜಸ್ಸನ್ನು ಸ್ವೀಕರಿಸುತ್ತ, ಬಳಿ ಬಂದ ಶರಣಾರ್ಥಿಗಳ ಪಾಪಕರ್ಮಗಳನ್ನು ಆ ಕುಂಡದಲ್ಲಿ ಹೋಮಿಸುತ್ತ, ಪ್ರಸಾದವಾಗಿ ಆ ಅಗ್ನಿಕುಂಡದ ಭಸ್ಮವನ್ನು ತೆಗೆದುಕೊಡುತ್ತ ಅವರ ದುಃಖ, ರೋಗರುಜಿನಗಳನ್ನು ಪರಿಹರಿಸುತ್ತಿದ್ದರು.
ಹಾಗೆಯೇ ಬಾಬಾರವರು ಅನೇಕ ಮಂದಿ ಅಹಂಕಾರಿಗಳನ್ನು, ಅಜ್ಞಾನಿಗಳನ್ನು, ಗರ್ವಿ?ರನ್ನು ಮನಃಪರಿವರ್ತನೆ ಮಾಡುವಲ್ಲಿಯೂ ಯಶಸ್ವಿಯಾದರು. ಗರ್ವಿ?ರಿಗೆ ತಾನೇ ಮಣಿದಂತೆ ಮಾಡಿ ಆಮೇಲೆ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಬುದ್ಧಿವಾದ ಹೇಳುತ್ತ, ಮಗುವನ್ನು ಓಲೈಸುವಂತೆ ಓಲೈಸುತ್ತ ತಿದ್ದಿತೀಡಿ ಕೊಳಕು ತುಂಬಿದ ಅವರ ಮನದ ಕೊಡವನ್ನು ಚೊಕ್ಕಟಗೊಳಿಸಿ ಜ್ಞಾನದ ಅಮೃತಧಾರೆ ಸುರಿಸುತ್ತಿದ್ದರು. ಸಂಜೆಯ ಹೊತ್ತು ಅವರ ಸುತ್ತ ಜನ ಸೇರಿರುತ್ತಿದ್ದರು. ಅಲ್ಲೊಂದು ಸತ್ಸಂಗವೇ ನಡೆಯುತ್ತಿತ್ತು. ಕೆಲವೊಮ್ಮೆ ಅಲ್ಲಿ ಕೆಲವು ಸಾಧುಸಂತರು ಕಬೀರರ ದೋಹಾಗಳನ್ನು ಹಾಡುತ್ತಿರುತ್ತಿದ್ದರು. ಮತ್ತೆ ಕೆಲವೊಮ್ಮೆ ಹಾಡುತ್ತ ಕುಣಿಯುತ್ತಲೂ ಇದ್ದರು. ಬಾಬಾ ಕೂಡಾ ಜೊತೆ ಸೇರಿ ನರ್ತಿಸುತ್ತಿದ್ದರು. ಇನ್ನು ಕೆಲವು ದಿನಗಳಾದ ಮೇಲೆ ಅಲ್ಲಿ ನೆರೆದವರಿಗೆ ಬಾಬಾ ಪ್ರವಚನ, ಉಪದೇಶ ಮಾಡುತ್ತಿದ್ದರು. ನಿಶ್ಶಬ್ದವಾಗಿ ಕುಳಿತು ಸೇರಿದ ಜನರು ಆ ಉಪದೇಶಾಮೃತವನ್ನು ಹೀರುತ್ತಿದ್ದರು.
ಸಾಯಿಬಾಬಾರ ಬಗ್ಗೆ, ಅವರು ಅನೇಕಾನೇಕ ಪವಾಡಗಳನ್ನು ನಡೆಸಿದವರೆಂಬ ಅನೇಕ ಉಲ್ಲೇಖಗಳು ದೊರೆಯುತ್ತವೆ. ಶಿರಡಿಯ ಕೆಲವು ಜನರು ಆಗಾಗ ಬಾಬಾರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದುದರಿಂದ ಕೆಲವು ಸಲ ಜನರು ಅವರಿಗೆ ದೀಪ ಉರಿಸಲು ಎಣ್ಣೆಯನ್ನು ಭಿಕ್ಷೆಯಾಗಿ ನೀಡಲೂ ನಿರಾಕರಿಸಿದರಂತೆ. ಮಸೀದಿಯಲ್ಲಿ ಯಾಕೆ ಹಣತೆ ದೀಪ ಹೊತ್ತಿಸಿಡಬೇಕು? ಕತ್ತಲೆಯಲ್ಲೆ ಇರಲಿ ಫಕೀರ ಎಂದು ವ್ಯಂಗ್ಯವಾಡಿದರಂತೆ. ಆದರೆ ಎಣ್ಣೆ ಭಿಕ್ಷೆ ನೀಡಲೊಪ್ಪದವರನ್ನು ನಿಂದಿಸದೆ ಬಾಬಾ ಮೌನಿಯಾಗಿ ಹಿಂದಿರುಗಿದರಂತೆ. ಕತ್ತಲಾಗುವಾಗ ಮಸೀದಿಯಲ್ಲಿ ಎಂದಿನಂತೆ ದೀಪಗಳು ಬೆಳಗುತ್ತಿದ್ದುದನ್ನು ಕಂಡ ಕುತೂಹಲಿಗಳು ಒಳನುಗ್ಗಿ ಕಂಡಾಗ ಬಾಬಾ ಮಣ್ಣಿನ ಹಣತೆಯೊಳಗೆ ನೀರನ್ನೇ ಹಾಕಿ ಬತ್ತಿ ಉರಿಸಿ ದೀಪ ಬೆಳಗುತ್ತಿರುವುದನ್ನು ಕಂಡು ತಪ್ಪಾಯಿತೆಂದು ಶರಣಾದರಂತೆ.
ಹಾಗೆಯೇ ಒಣಭೂಮಿಯನ್ನು, ಕಲ್ಲುಗಳಿಂದ ತುಂಬಿ ಮರುಭೂಮಿಯ ಹಾಗಿದ್ದ ಭೂಮಿಯನ್ನು ನಂದನವನವಾಗಿ ಪರಿವರ್ತಿಸಿದರೆಂಬ ಪವಾಡದ ಉಲ್ಲೇಖವಿದೆ. ಅಂಥ ಭೂಮಿಯಲ್ಲಿ ಬಗೆಬಗೆಯ ಹೂ ಬೀಜಗಳನ್ನು ನೆಟ್ಟು ತಾವೇ ನೀರು ಸೇದಿ ಸುರಿದು ರಮಣೀಯವಾದ ಹೂಗಿಡಗಳನ್ನು ಬೆಳೆಸಿದರಂತೆ. ನೀರಿಲ್ಲದೆ ಎ? ವ?ಗಳಿಂದ ಪಾಳುಬಿದ್ದು ಬಂಜರಾಗಿದ್ದ ಬಾವಿಯೊಳಗಿಂದ ತಾವೇ ಮಣ್ಣಿನಕೊಡ ಇಳಿಸಿ ಸೇದಿದಾಗ ಬುಳುಬುಳನೆ ನೀರು ಪ್ರತಿಬಾರಿಯೂ ಕೊಡದಲ್ಲಿ ತುಂಬಿ ಬರುತ್ತಿತ್ತಂತೆ. ಇ?ಲ್ಲದೆ ಹಸಿಮಣ್ಣಿನ ಕೊಡದಲ್ಲೇ ನೀರು ಸೇದಿ ಹೊತ್ತು ತರುತ್ತಿದ್ದರಂತೆ. ಬೇರೆಯವರು ಹೀಗೆ ಮಾಡಲು ಹೋದಾಗ ಆ ಹಸಿಮಣ್ಣಿನ ಕೊಡ ಅಲ್ಲೇ ಪುಡಿಪುಡಿಯಾಗುತ್ತಿತ್ತು. ಇದನ್ನೆಲ್ಲ ನೋಡಿದ ಶಿರಡಿಯ ಜನ ಈ ಫಕೀರನೊಬ್ಬ ಅದ್ಭುತವಾದ ಪವಾಡ ಪುರು? ಎಂದು ಭಯಭಕ್ತಿಗಳಿಂದ ಬಾಗಿದರು ಎಂದು ಈ ಪವಾಡಗಳ ಉಲ್ಲೇಖ ಹೇಳುತ್ತದೆ.
ಏನೇ ಇದ್ದರೂ ಬಾಬಾರವರು ಸಿದ್ಧಯೋಗಿ, ಯೋಗಪಟು. ಹೀಗಾಗಿ ಅನ್ಯರಿಗೆ ಸಾಧ್ಯವಾಗದ ಅನೇಕ ಸಿದ್ಧಿ-ಸಾಧನೆಗಳು ಅವರ ಕೈವಶವಾಗಿದ್ದವು. ಅವರು ತಮ್ಮ ಶರೀರವನ್ನು ಯೋಗಸಾಧನೆ, ಧ್ಯಾನಗಳಿಂದ ಸಧೃಡವಾಗಿಟ್ಟುಕೊಂಡಿದ್ದರು. ತಮ್ಮ ಶರೀರಕ್ಕೆ ಬೇಕಾದ, ಅಗತ್ಯವಿರುವ ಶುಶ್ರೂ?ಯನ್ನೂ ತಾವೇ ಮಾಡಿಕೊಳ್ಳುತ್ತಿದ್ದರು. ಅವರು ಹೇಗೂ ಧೌತಿಯೋಗ, ಖಂಡಯೋಗದಲ್ಲಿ ಪರಿಣತರಾಗಿದ್ದರು. ಕೆಲವೊಮ್ಮೆ ಅವರು ವನಕ್ಕೆ ಹೋಗಿ ಅಲ್ಲಿಯ ಬಾವಿಯ ಬಳಿ ಕುಳಿತು ಶರೀರಶುದ್ಧಿ ಕ್ರಿಯೆಯಲ್ಲಿ ತೊಡಗುತ್ತಿದ್ದರು. ಧೌತಿಯೋಗದಲ್ಲಿ ತಮ್ಮ ಹೊಟ್ಟೆಯೊಳಗಿನ ಕರುಳನ್ನು ಪೂರ್ತಿಯಾಗಿ ಹೊರಗೆ ತೆಗೆದು ನೀರಿನ ಮಡಕೆಯಲ್ಲಿ ತೊಳೆದು ಅಲ್ಲಿದ್ದ ಗಿಡಗಳ ಮೇಲೆ ಒಣಗಲು ಹಾಕಿಬಿಡುತ್ತಿದ್ದರಂತೆ! ಮಹಾಯೋಗಿಗಳಿಗೆ ಮಾತ್ರ ಸಿದ್ಧಿಸುವ ಈ ಕ್ರಿಯೆ ಯಾರ ಕಣ್ಣಿಗೂ ಬೀಳಬಾರದೆಂದು ಬಾಬಾ ಲೇಂಡಿವನಕ್ಕೆ ಹೋಗಿ ಇದನ್ನು ಮಾಡುತ್ತಿದ್ದರು. ಆದರೆ ಕೆಲವು ಕುತೂಹಲಿ ಭಕ್ತರು ಬಾಬಾರು ಲೇಂಡಿವನಕ್ಕೆ ಹೋಗಿ ಏನು ಮಾಡುತ್ತಾರೆಂದು ನೋಡಬೇಕೆಂದು ಹಟದಲ್ಲಿ ಮೆಲ್ಲನೆ ಹಿಂಬಾಲಿಸಿ ಅವಿತಿದ್ದು ಇದನ್ನು ನೋಡಿ ಭಯಭಕ್ತಿಗಳಿಂದ ಗಡಗಡನೆ ನಡುಗಿ ದೂರದಿಂದಲೇ ಕೈಮುಗಿದು ಊರಿಗೆ ಹಿಂದಿರುಗಿ ಬಾಬಾ ಮಹಾಯೋಗಪುರು?ರು ಎಂದು ತಾವು ಕಂಡದ್ದನ್ನು ಹೇಳುತ್ತ ಪ್ರಚುರಪಡಿಸಿಬಿಟ್ಟರು.
ಹೀಗೆಯೇ ಖಂಡಯೋಗದಲ್ಲಿ ದೇಹದ ಅಂಗಾಂಗ ವಿಭಜಿಸುವ ಕ್ರಮವನ್ನೂ ಬಾಬಾ ಅರಿತಿದ್ದರೆನ್ನಲಾಗಿದೆ. ಅವರು ಈ ಯೋಗದಲ್ಲಿ ತೊಡಗಿದ್ದಾಗ ’ಅಪ್ಪಾ ಭಿಲ್’ ಎಂಬ ಯುವಕನೊಬ್ಬ ನೋಡಿ ಭಯಭೀತನಾಗಿ ಜ್ವರದಲ್ಲಿ ನರಳಿದ್ದು, ಆನಂತರ ಸಾಯಿಬಾಬಾ ಸ್ವತಃ ಅವನನ್ನು ಕರೆದು ಸಮಾಧಾನ ಪಡಿಸಿದ್ದು ಈ ಎಲ್ಲ ಉಲ್ಲೇಖಗೊಂಡಿವೆ. ಹೀಗೆ ಬಾಬಾ ಮಹಾಮಹಿಮ ಯೋಗಪುರು?ರೆಂದೂ ಖ್ಯಾತರಾಗಿದ್ದಾರೆ. ಅವಧೂತರೆನ್ನಿಸಿಕೊಳ್ಳುವವರ ಬದುಕೇ ಹೀಗೆ. ಅದನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧಾರಣ ಮನು?ಜೀವಿಗಳಿಂದ ಸಾಧ್ಯವಾಗುವುದಿಲ್ಲ.
ಹಾವು ಕಡಿದು ಮರಣೋನ್ಮುಖರಾದವರನ್ನೂ ಬಾಬಾ ಚಿಕಿತ್ಸೆ ನೀಡಿ ಗುಣಪಡಿಸಿದ ಅನೇಕ ದೃ?ಂತಗಳ ಉಲ್ಲೇಖ ದೊರೆಯುತ್ತದೆ. ಶಿರಡಿ ಸುತ್ತಮುತ್ತಲ ಗ್ರಾಮಗಳ ಮೇಲೊಮ್ಮೆ ಭೀಕರವಾದ ಮಳೆಗಾಳಿ ಪ್ರಾರಂಭವಾಗಿ ನಾಲ್ಕೈದು ದಿನಗಳಾದರೂ ನಿಲ್ಲದೆ ಊರಿಗೆ ಊರೇ ಪ್ರವಾಹಪೀಡಿತವಾದಾಗ ಜನರೆಲ್ಲ ಸಾಯಿಬಾಬಾರ ಮೊರೆಹೋಗಿ ಹೇಳಿಕೊಂಡ ಮೇರೆಗೆ ಸಾಯಿಬಾಬಾ ಆಕಾಶವನ್ನು ನೋಡುತ್ತಾ ಮಳೆಗೆ ನಿಲ್ಲಲು ಆದೇಶ ನೀಡಿದರೆಂದೂ ಊರನ್ನೂ ಜನರನ್ನೂ ಉಳಿಸುವಂತೆ ಕೋರಿದರೆಂದೂ ಹೇಳಲಾಗಿದೆ. ಮಳೆ ತಕ್ಷಣವೇ ನಿಂತು ಪ್ರವಾಹದ ನೆರೆ ತಗ್ಗಿತು, ಜನರು ಅಪಾಯದಿಂದ ಪಾರಾದರು ಎಂಬ ಉಲ್ಲೇಖವಿದೆ.
ಹೀಗಿರುವಾಗ ದೇಶದಲ್ಲಿ ಎಲ್ಲೆಡೆ ಸ್ವಾತಂತ್ರ್ಯ ಹೋರಾಟದ ಕಾವು ತೀವ್ರವಾಗಿ ಆವರಿಸುವ ದಿನಗಳು ಬಂದವು. ಬ್ರಿಟಿ? ಸರ್ಕಾರ ತೀವ್ರಗಾಮಿಗಳ ಮೇಲೆ ಕಣ್ಣಿಡಲು ಕಟ್ಟೆಚ್ಚರವನ್ನು ನೀಡಿತ್ತು. ಅದಾಗಲೇ ಶಿರಡಿಯ ಫಕೀರರ ಮಹಿಮೆ ಪವಾಡಗಳ ಸಂಗತಿ ಬ್ರಿಟಿ? ಸರ್ಕಾರದ ಕಿವಿಗೆ ಬಿದ್ದಿತ್ತು. ಸಾಯಿಬಾಬಾ ಎಂಬ ಫಕೀರ ತೀವ್ರಗಾಮಿಗಳನ್ನೆಲ್ಲ ಸೇರಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾನೆಂದು ಸರ್ಕಾರಕ್ಕೆ ಸಂದೇಹ ಮೂಡಿತು. ಇದರ ಸತ್ಯಾಸತ್ಯತೆಯನ್ನು ಅರಿತು, ಸರ್ಕಾರದ ವಿರುದ್ಧ ಬಾಬಾ ಕೆಲಸ ಮಾಡುತ್ತಿದ್ದರೆ ಸಾಕ್ಷಿ ಸಮೇತ ಅವರನ್ನು ಹಿಡಿದು ಶಿಕ್ಷಿಸುವ ಬ್ರಿಟಿ? ಸರ್ಕಾರದ ಆದೇಶ ಅಹಮ್ಮದ್ನಗರವನ್ನು ಸೇರಿತು. ಗಣಪತರಾವ್ ಸಹಸ್ರಬುದ್ಧೆ ಎಂಬ ಗುಪ್ತಚರ ಪೊಲೀಸ್ ಅಧಿಕಾರಿಯನ್ನು ಈ ಕೆಲಸಕ್ಕಾಗಿ ನೇಮಿಸಲಾಯಿತು. ಅವನು ನಾನಾಬಗೆಯ ರಹಸ್ಯಕಾರ್ಯಗಳಿಂದ ಬಾಬಾರನ್ನು ಪರೀಕ್ಷಿಸಿ ಇಲ್ಲಿ ಅಂಥದ್ದೇನೂ ಚಟುವಟಿಕೆಗಳು ನಡೆಯುತ್ತಿಲ್ಲವೆಂದೂ, ಬಾಬಾರು ಪರಿಶುದ್ಧ ಸಂನ್ಯಾಸಿ, ಸಂತರು ಮಾತ್ರ ಎಂದೂ ವರದಿಯನ್ನು ಸರ್ಕಾರಕ್ಕೆ ಕಳಿಸಿದನು. ಮುಂದೆ ’ಕಾಲಾಭಿಲ್ಲು’ ಎಂಬ ದರೋಡೆಕಾರನನ್ನು ಹಿಡಿಯಲು ಹೋಗಿ ಅವನಿಂದ ಹತನಾಗುವ ಪ್ರಸಂಗ ಬಂದಾಗ ’ಬಾಬಾ..ಬಾಬಾ.. ಕಾಪಾಡಿ’ ಎಂದು ಗಣಪತರಾವ್ ಆರ್ತನಾದ ಮಾಡಿದನೆಂದೂ, ಬಾಬಾ ಅಲ್ಲಿ ಪ್ರತ್ಯಕ್ಷರಾಗಿ ಅವನನ್ನು ಉಳಿಸಿ ಕಾಲಾಭಿಲ್ಲುವನ್ನು ಸೆರೆಹಿಡಿದುಕೊಡಲು ನೆರವಾದರೆಂದೂ ಹೇಳಲಾಗಿದೆ. ಆನಂತರ ಇದೇ ಗಣಪತರಾವ್ ಬಾಬಾರವರಿಂದ ’ದಾಸಗಣು’ ಎಂದು ನಾಮಾಂಕಿತನಾಗಿ ಅವರ ಪರಮಶಿ?ನಾಗಿ ದಿನಗಳೆದನು ಎಂದು ತಿಳಿದುಬರುತ್ತದೆ. ದಾಸಗಣು ತನ್ನ ಸರ್ಕಾರೀ ನೌಕರಿಗೆ ರಾಜೀನಾಮೆ ಸಲ್ಲಿಸಿ ಸಾಯಿಭಕ್ತನಾಗಿ ಅವರ ಬಗ್ಗೆ ಕೀರ್ತನ ಗಾಯನ ಮಾಡುತ್ತ ಸೇವಾತತ್ಪರನಾದನು.
ಮುಂದೆ ಬಾಬಾರ ಸದಾಶಯದಂತೆ ಅಂದಿನ ಸಮಕಾಲೀನರಾದ ಬೇರೆಬೇರೆ ಸಂತರ ಜೀವನವೃತ್ತಾಂತಗಳನ್ನು ದಾಸಗಣು ಬರೆಯಲಾರಂಭಿಸಿದರು. ಇದನ್ನು ಪ್ರಕಟಿಸುವ ಹೊಣೆಗಾರಿಕೆಯನ್ನು ನಾನಾ ಚಂದಾವರ್ಕರ್ಗೆ ಸಾಯಿಬಾಬಾ ವಹಿಸಿದ್ದರು. ೧೯೦೩ರಲ್ಲಿ ಹೀಗೆ ’ಸಂತ ಕಥಾಮೃತ’ ಪುಸ್ತಕರೂಪದಲ್ಲಿ ಹೊರಬಂದಿತು. ಇದರ ನಂತರ ಸಾಯಿಬಾಬಾರ ಕುರಿತು ಭಕ್ತಿಗೀತೆಗಳನ್ನು ದಾಸಗಣು ರಚಿಸಿದರು. ’ಭಕ್ತಿ ಲೀಲಾಮೃತ’ ಎಂಬ ಆ ಪುಸ್ತಕ ೧೯೦೬ರಲ್ಲಿ ಪ್ರಕಟವಾಗಿ ಭಕ್ತರ ಕೈ ಸೇರಿತು.
ಒಮ್ಮೆ ಗೋದಾವರೀ ತೀರದ ರಾಜಮಹೇಂದ್ರವರ ಪಟ್ಟಣಕ್ಕೆ ’ಟೇಂಬೆ ಸ್ವಾಮಿಗಳು’ ಎಂದು ಪ್ರಸಿದ್ಧರಾದ ಶ್ರೀ ವಾಸುದೇವಾನಂದ ಸರಸ್ವತಿಗಳು ಬಂದರು. ಅವರು ಬಾಬಾರನ್ನು ’ಸೋದರ’ ಎಂದು ಕರೆದು ಅಪಾರವಾಗಿ ಗೌರವದಿಂದ ಕಂಡರೆಂದು ತಿಳಿಯುತ್ತದೆ. ಅಂತೆಯೇ ಬಾಬಾರ ಭಕ್ತರಿಗೆಲ್ಲ ಬಾಬಾರಿಗೆ ’ಚಾವಡಿ ಉತ್ಸವ’ ನೆರವೇರಿಸಬೇಕೆಂಬ ಹಂಬಲ ಉಂಟಾಗಿ ತೀವ್ರವಾಯಿತು. ಈ ಕುರಿತಾಗಿ ಸಾಯಿ ಭಕ್ತಮಂಡಳಿಯ ಸಜ್ಜನರು ಬಾಬಾ ಬಳಿ ತಮ್ಮ ಕೋರಿಕೆಯನ್ನಿಟ್ಟರು. ಭಕ್ತರ ಭಾವನೆಗಳಿಗೆ ಬಾಬಾ ಎಂದೂ ಅಡ್ಡಬಂದವರಲ್ಲ. ಭಕ್ತರ ಗುರುಪ್ರೀತಿಯ ಆಸೆಗಳಿಗೆ ಘಾಸಿ ಉಂಟುಮಾಡಿದವರಲ್ಲ. ಹೀಗಾಗಿ ತನ್ನ ಭಕ್ತರ ಭಕ್ತಿ, ಪ್ರೇಮವನ್ನು ಗೌರವಿಸಿ ಭಕ್ತರ ಆಶಯದಂತೆ ಪೂಜೆಗೊಳ್ಳಲು ಅನುಮತಿಸಿದರು. ಈ ಉತ್ಸವವು ೧೯೦೯ನೇ ಡಿಸೆಂಬರ್ ೧೦ನೇ ತಾರೀಖಿನಿಂದ ಪ್ರಾರಂಭವಾಯಿತು. ಮಸೀದಿಯಿಂದ ಚಾವಡಿಗೆ ಬಾಬಾರನ್ನು ಮೆರವಣಿಗೆಯಲ್ಲಿ ಕರೆತಂದು ಕೂರಿಸಿ, ಪೂಜಿಸಿ ಅಲಂಕರಿಸಿ ತೃಪ್ತಿಪಡುತ್ತಿದ್ದ ಅಸಂಖ್ಯ ಭಕ್ತರು; ಸುತ್ತಮುತ್ತಲೂ ಭಜನೆ ಮಾಡುತ್ತ ಕುಣಿಯುತ್ತ ನರ್ತಿಸುತ್ತಿದ್ದ ದೃಶ್ಯಾವಳಿ – ಇಡೀ ಮಸೀದಿ ದೀಪಗಳಿಂದ ಅಲಂಕೃತವಾಗಿ ಸಂಭ್ರಮಿಸುತ್ತಿತ್ತು. ಒಟ್ಟಿನಲ್ಲಿ ವೈಭವಪೂರ್ಣವಾಗಿ ಸಾಯಿಬಾಬಾರಿಗೆ ’ಚಾವಡಿ ಉತ್ಸವ’ವನ್ನು ಭಕ್ತವೃಂದವು ಸಮರ್ಪಿಸಿತ್ತು.
ಹಿಂದೂ ಮತ್ತು ಮಹಮ್ಮದೀಯರ ಐಕಮತ್ಯದ ಉದ್ದೇಶ ಬಾಬಾರಿಗೆ ಬಹಳ ಮುಂಚಿನಿಂದಲೂ ಇತ್ತು. ಇದಕ್ಕಾಗಿಯೇ ಅವರು ೧೮೯೨ರಲ್ಲಿಯೇ ಶ್ರೀರಾಮನವಮಿಯಂದು ಉರುಸ್ ಉತ್ಸವವನ್ನೂ ಸೇರ್ಪಡೆ ಮಾಡಿ ಆಚರಿಸುವುದನ್ನು ಜಾರಿಗೆ ತಂದಿದ್ದರು. ಕೆಲವು ವ?ದ ನಂತರ ಇದೇ ದಿನದಂದು ಚಂದನದ ಮೆರವಣಿಗೆಯೂ ಬಾಬಾರಿಂದ ಜಾರಿಗೆ ಬರುವಂತಾಯಿತು. ಮುಸ್ಲಿಂ ಸಾಧುಗಳ ಗೌರವಾರ್ಥವಾಗಿ ಇಂಥ ಒಂದು ಉತ್ಸವ ಶ್ರೀರಾಮನವಮಿಯಂದೇ ಜಾರಿಗೆ ತಂದರು ಬಾಬಾ.
ಅಂದಿನ ದಿನಗಳು ಭಾರತದಲ್ಲಿ ಸ್ವಾತಂತ್ರ್ಯಸಂಗ್ರಾಮ ನಡೆಯುತ್ತಿದ್ದ ಕಾಲ. ’ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಘೋಷಿಸಿದ್ದ ಬಾಲಗಂಗಾಧರ ತಿಲಕ್ರವರು ಸಾಯಿಬಾಬಾರನ್ನು ಭೇಟಿಯಾಗಲು ಬಯಸಿದರು. ಆದರೆ ಶಿರಡಿಗೆ ಹೋಗುವುದು ಸರ್ಕಾರಕ್ಕೇ ತಿಳಿಯುವಂತಿಲ್ಲ; ಬ್ರಿಟಿ? ಸರ್ಕಾರ ಅವರನ್ನು ಬಂಧಿಸಲು ಕಾದಿತ್ತು. ೧೯೧೭ರ ಮೇ ೧೯ನೆಯ ದಿನಾಂಕದಂದು ತಿಲಕರಿಗೆ ರೈತನ ವೇ?ವನ್ನು ತೊಡಿಸಿ ಶಿರಡಿಗೆ ಕರೆತರಲಾಯಿತು. ಬಾಬಾರಿಗೆ ನಮಿಸಿ ತಿಲಕರು ಮಾತುಕತೆ ನಡೆಸಿದರು. ಗಂಗಾಧರ….. ಕಳಿಕೆ ಮೊದಲು, ಗಳಿಕೆ ಅನಂತರ. ಸಾಧನೆಗೆ ಮೊದಲು ಬಾಧೆ ಅನುಭವಿಸುವುದು ಅನಿವಾರ್ಯ. ಜನ್ಮಭೂಮಿಯ ಋಣ ತೀರಿಸುವುದು ಪ್ರತಿಯೊಬ್ಬನ ಕರ್ತವ್ಯ. ಅದಕ್ಕೆ ಈ ಫಕೀರನೂ ಹೊರತಲ್ಲ. ನಾನು ಎಲ್ಲರನ್ನೂ ಅಧ್ಯಾತ್ಮದೆಡೆಗೆ ಕರೆದೊಯ್ಯುತ್ತಿದ್ದೇನೆಂದು ಎಲ್ಲರೂ ಭಾವಿಸಿರಬಹುದು. ಆದರೆ ನನ್ನಲ್ಲೂ ದೇಶಾಭಿಮಾನಿಯು ಇದ್ದಾನೆ. ಜಾತಿ ಮತ ಧರ್ಮದ ಹೆಸರಿನಲ್ಲಿ ಬ್ರಿಟಿ?ರು ನಮ್ಮನ್ನು ಬೇರ್ಪಡಿಸುತ್ತಿದ್ದಾರೆ. ಹಿಂದೂ ಮುಸಲ್ಮಾನ ಭೇದ ತಂದು ಆಳುತ್ತಿದ್ದಾರೆ. ಇವರನ್ನೆಲ್ಲ ಒಂದೇ ವೇದಿಕೆಗೆ ತರುವ ಗುರುತರ ಪ್ರಯತ್ನ ನಾನಿಲ್ಲಿದ್ದು ಮಾಡುತ್ತಿದ್ದೇನೆ. ಈ ಶಿರಡಿಯಲ್ಲಿ ನಾನು ಕುಳಿತು ಜಾತಿ ಧರ್ಮಗಳ ಏಕತೆ ಸಾಧಿಸುತ್ತಿದ್ದೇನೆ. ಜನ್ಮಭೂಮಿಯ ಬಗ್ಗೆ ಐಕಮತ್ಯ ಸಾಧಿಸಲು ಶಿರಡಿಯಲ್ಲಿ ಒಂದು ಶಾಲೆಯನ್ನೇ ಪ್ರಾರಂಭಿಸಿ ಜನರನ್ನು ಜಾಗೃತಗೊಳಿಸುತ್ತಿದ್ದೇವೆ. ಇಲ್ಲಿ ಹೇಮಾಡಪಂತ್, ನಾನಾಸಾಹೇಬ, ಗಣಪತರಾವ್ ಸಹಸ್ರಬುದ್ಧೆ, ದೇವ್, ಜೋಗ್ ಮುಂತಾದವರೆಲ್ಲ ಬೋಧಕವರ್ಗದಲ್ಲಿದ್ದಾರೆ. ಅಧ್ಯಾತ್ಮಚಿಂತನೆಯೊಂದಿಗೆ ದೇಶಾಭಿಮಾನವೂ ಇಲ್ಲಿ ಮೇಳೈಸಿದೆ. ಆದರೆ ಬಹಿರಂಗಪಡಿಸುವಂತಿಲ್ಲ, ಸೆರೆಹಿಡಿದು ಒಯ್ಯುತ್ತಾರೆ. ಹೀಗಾಗಿ ಎಲ್ಲವನ್ನೂ ಗುಟ್ಟಾಗಿ ನಡೆಸುತ್ತಿದ್ದೇವೆ. ತಾಳ್ಮೆ, ಶ್ರದ್ಧೆ, ನಿರಂತರ ಹೋರಾಟ ಭಾರತಮಾತೆಯನ್ನು ದಾಸ್ಯದಿಂದ ಬಿಡುಗಡೆಗೊಳಿಸುತ್ತದೆ. ನನ್ನ ಮಾತಲ್ಲಿ ನಂಬಿಕೆ ಇಡು ಎಂದು ಸಾಯಿಬಾಬಾ ತಿಲಕರೊಂದಿಗೆ ಮಾತಾಡುತ್ತ ತಿಳಿಸಿದರು.
ಅಧ್ಯಾತ್ಮಸಾಧಕ ಸಾಯಿಬಾಬಾ ದೇಶಪ್ರೇಮಿಯೂ, ರಾ?ಭಿಮಾನಿಯೂ ಆಗಿದ್ದರೆಂದು ಇದರಿಂದಾಗಿ ವ್ಯಕ್ತವಾಗುತ್ತದೆ.
(ಮುಂದುವರಿಯುವುದು)