
ಕಾಳಿದಾಸನು ತನ್ನ ಕಾವ್ಯಗಳಲ್ಲಿ ಶಿವನನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾನೆ. ಅವನು ತನ್ನ ಮೂರೂ ನಾಟಕಗಳ ಮಂಗಳಪದ್ಯಗಳಲ್ಲಿ ಶಿವನನ್ನು ಸ್ತುತಿಸಿರುವುದು ಕಂಡುಬರುತ್ತದೆ. ಅದರ ಸ್ವಾರಸ್ಯವನ್ನು ಅರಿತಾಗ ಅವನ ಭಕ್ತಿಯು ಜ್ಞಾನಪೂರ್ವಕವಾದುದೆಂದು ಮನದಟ್ಟಾಗುತ್ತದೆ. ತನ್ನ ಮಹಾಕಾವ್ಯವಾದ ಕುಮಾರಸಂಭವದಲ್ಲಿ ಅವನು ಶಿವನನ್ನು ಹೇಗೆ ಚಿತ್ರಿಸಿದ್ದಾನೆ, ಅದರ ಸ್ವಾರಸ್ಯಗಳೇನು ಎಂದು ಸ್ಥೂಲವಾಗಿ ಗಮನಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ದಾಕ್ಷಾಯಣಿಯು ದಕ್ಷಾಧ್ವರದಲ್ಲಿ ಅಗ್ನಿಪ್ರವೇಶವನ್ನು ಮಾಡಿ, ಪುನಃ ಜನಿಸಲು ಹಿಮಾಲಯನ ಪತ್ನಿಯಾದ ಮೇನೆಯ ಗರ್ಭವನ್ನು ಆಯ್ದುಕೊಂಡಳು. ಅಲ್ಲಿ ಆವಿರ್ಭವಿಸಿ ಆಕೆ ಯೌವನಕ್ಕೆ ಕಾಲಿರಿಸಿದಳು. ಒಮ್ಮೆ […]